ಕರ್ನಾಟಕ

karnataka

ETV Bharat / bharat

ಗರ್ಭಕೋಶ ಕ್ಯಾನ್ಸರ್​ ಬಗ್ಗೆ ರಾಜ್ಯಸಭೆಯಲ್ಲಿ ಧ್ವನಿಯೆತ್ತಿದ ಸುಧಾ ಮೂರ್ತಿ; ಮಹಿಳೆಯರ ಕಾಳಜಿಗೆ ಮೋದಿ ಸ್ಪಂದನೆ - Cervical Cancer Vaccination

Cervical Cancer Vaccination: ಸಂಸದೆ ಸುಧಾ ಮೂರ್ತಿ ಅವರು ರಾಜ್ಯಸಭೆಯಲ್ಲಿ ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟುವ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುವುದರ ಬಗ್ಗೆ ಮಾತನಾಡಿದರು. ಈ ವಿಷಯಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ.

By PTI

Published : Jul 3, 2024, 5:41 PM IST

PHILANTHROPIST AUTHOR SUDHA MURTY  GOVERNMENT SPONSORED VACCINATION  PROMOTING DOMESTIC TOURISM  MODI REACTION ON SUDHA STATEMENT
ಮಹಿಳೆಯರ ಕಾಳಜಿಗೆ ಮೋದಿ ಸ್ಪಂದನೆ (IANS Photos)

ನವದೆಹಲಿ: ಮಂಗಳವಾರ ರಾಜ್ಯಸಭೆಯಲ್ಲಿ ದೇಶಾದ್ಯಂತ ಮಹಿಳೆಯರಿಗೆ ಕಾಡುತ್ತಿರುವ ಗರ್ಭಕಂಠದ ಕ್ಯಾನ್ಸರ್​ ಮತ್ತು ದೇಶದ ಪಾರಂಪರಿಕ ತಾಣಗಳ ಅಭಿವೃದ್ಧಿ ಬಗ್ಗೆ ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಅವರು ವಿಷಯ ಪ್ರಸ್ತಾಪಿಸಿದ್ದರು. ಈ ಮಹತ್ವದ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿ ಮೊದಲ ಭಾಷಣದಲ್ಲೇ ಎಲ್ಲರ ಗಮನ ಸೆಳೆದಿದ್ದರು. ಮಹಿಳೆಯರ ಆರೋಗ್ಯದ ಕುರಿತು ತಮ್ಮ ಭಾಷಣದಲ್ಲಿ ಅವರು ಬಹಿರಂಗಪಡಿಸಿದರು. ಇದಕ್ಕೆ ಇಂದು ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಮೇಲ್ಮನೆಗೆ ಬಂದು ಧನ್ಯವಾದ ಸಲ್ಲಿಸಿದರು.

Cervical Cancer Vaccination:ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಸುಧಾ ಮೂರ್ತಿ ಅವರನ್ನು ರಾಜ್ಯಸಭಾ ಸಂಸದರಾಗಿ ನಾಮನಿರ್ದೇಶನ ಮಾಡಲಾಯಿತು. ಸಂಸತ್ತಿನ ವಿಶೇಷ ಅಧಿವೇಶನದ ಅಂಗವಾಗಿ ಅವರು ಮಂಗಳವಾರ ಸದನದಲ್ಲಿ ಮಾತನಾಡಿದರು. ಗರ್ಭಕೋಶದ ಕ್ಯಾನ್ಸರ್ ಲಸಿಕೆಯನ್ನು 9 ರಿಂದ 14 ವರ್ಷ ವಯಸ್ಸಿನ ಹುಡುಗಿಯರಿಗೆ ನೀಡಲಾಗುತ್ತದೆ. ಇದನ್ನು ಪಡೆದರೆ ಕ್ಯಾನ್ಸರ್ ಬರದಂತೆ ತಡೆಯಬಹುದು. ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ, ಹೆಣ್ಣುಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಅದನ್ನು ಒದಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಸುಧಾ ಮೂರ್ತಿ ಅವರು ತಮ್ಮ ತಂದೆಯ ಮಾತುಗಳನ್ನು ನೆನಪಿಸಿಕೊಂಡರು. ''ಒಂದು ಕುಟುಂಬದಲ್ಲಿ ತಾಯಿ ಪ್ರಾಣ ಕಳೆದುಕೊಂಡರೆ.. ಆಸ್ಪತ್ರೆಯ ಲೆಕ್ಕಾಚಾರದಲ್ಲಿ ಅದು ಒಂದು ಸಾವಾಗಿರುತ್ತದೆ. ಆದರೆ ಆ ಕುಟುಂಬಕ್ಕೆ ನುಂಗಲಾರದಂತಹ ತುತ್ತಾಗಿರುತ್ತದೆ'' ಎಂದು ಈ ಸಂದರ್ಭದಲ್ಲಿ ಹೇಳಿದರು.

ಕೋವಿಡ್ ಅವಧಿಯಲ್ಲಿ ದೇಶಾದ್ಯಂತ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದು ನೆನಪಿಸಿದ ಅವರು, ಆ ಅನುಭವದೊಂದಿಗೆ ಹೆಣ್ಣುಮಕ್ಕಳಿಗೆ ಗರ್ಭಕೋಶದ ಲಸಿಕೆ ನೀಡಲು ಕಷ್ಟವೇ ಆಗುವುದಿಲ್ಲ ಎಂದರು. ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ರಸ್ತೆ, ಶೌಚಾಲಯದಂತಹ ಸೌಲಭ್ಯಗಳನ್ನು ಸುಧಾರಿಸಬೇಕು ಎಂದು ಸೂಚಿಸಿದರು.

ಈ ವಿಷಯದ ಬಗ್ಗೆ ಇಂದು ಪ್ರಧಾನಿ ಮೋದಿ ಮಾತನಾಡಿದ್ದಾರೆ. ಮಹಿಳೆಯರ ಆರೋಗ್ಯದ ಬಗ್ಗೆ ಸಮಗ್ರವಾಗಿ ಮಾತನಾಡಿದ ಸುಧಾಮೂರ್ತಿಯವರಿಗೆ ಧನ್ಯವಾದಗಳು. ಕಳೆದ 10 ವರ್ಷಗಳಲ್ಲಿ ಸರ್ಕಾರ ಮುಖ್ಯವಾಗಿ ಮಹಿಳೆಯರ ಆರೋಗ್ಯ ಮತ್ತು ವೈಯಕ್ತಿಕ ನೈರ್ಮಲ್ಯಕ್ಕೆ ಒತ್ತು ನೀಡಿದೆ ಎಂದು ಹೇಳಿದರು.

ತಮ್ಮ ಸರ್ಕಾರವು ಗರ್ಭಿಣಿಯರಿಗೆ ಸ್ಯಾನಿಟರಿ ಪ್ಯಾಡ್ ಮತ್ತು ಲಸಿಕೆಗಳನ್ನು ವಿತರಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್‌ನಲ್ಲಿ ಗರ್ಭಕೋಶದ ಕ್ಯಾನ್ಸರ್ ನಿಯಂತ್ರಣಕ್ಕಾಗಿ 9 ರಿಂದ 14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಲು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಘೋಷಿಸಿದರು.

ಓದಿ:ಮುಡಾ ನಿವೇಶನ ಹಂಚಿಕೆ ಪ್ರಕರಣ: ಎಲ್ಲ ನಿವೇಶನಗಳು ಅಮಾನತು, ಐಎಎಸ್ ಅಧಿಕಾರಿಗಳಿಂದ ತನಿಖೆ: ಸಿಎಂ - CM Siddaramaiah

ABOUT THE AUTHOR

...view details