ETV Bharat / bharat

3ನೇ ಮಹಡಿಯಿಂದ ಜಿಗಿದ ಮಹಾರಾಷ್ಟ್ರ ಡೆಪ್ಯೂಟಿ ಸ್ಪೀಕರ್‌, ಶಾಸಕರು! - Maharashtra Tribal Quota Issue

ಎನ್‌ಸಿಪಿ ಶಾಸಕ ಹಾಗೂ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರು ಸಚಿವಾಲಯದ 3ನೇ ಮಹಡಿಯಿಂದ ಜಿಗಿದು ಸುರಕ್ಷತಾ ನೆಟ್ ಮೇಲೆ ಬಿದ್ದಿದ್ದಾರೆ.

ಉಪ ಸ್ಪೀಕರ್ ನರಹರಿ ಜಿರ್ವಾಲ್
ಉಪ ಸ್ಪೀಕರ್ ನರಹರಿ ಜಿರ್ವಾಲ್ (ANI)
author img

By ETV Bharat Karnataka Team

Published : Oct 4, 2024, 10:03 PM IST

ಮಹಾರಾಷ್ಟ್ರ: ಇಲ್ಲಿನ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರು ಮಹಾರಾಷ್ಟ್ರದ ಸಚಿವಾಲಯದ ಮೂರನೇ ಮಹಡಿಯಿಂದ ಕೆಳಗೆ ಜಿಗಿದಿದ್ದು, ಕೆಳಗೆ ಸುರಕ್ಷತಾ ನೆಟ್ ಅಳವಡಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಧಂಗರ್ ಸಮುದಾಯವನ್ನು ಎಸ್​ಸಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಎನ್‌ಸಿಪಿ ಶಾಸಕರಾದ ಜಿರ್ವಾಲ್, ಕಿರಣ್ ಲಹಮಟೆ ಮತ್ತು ಬಿಜೆಪಿಯ ಬುಡಕಟ್ಟು ಸಮುದಾಯದ ಸಂಸದ ಹೇಮಂತ್ ಸಾವರ ಮಹಡಿಯಿಂದ ಕೆಳಗೆ ಜಿಗಿದಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಾದ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೋಟಾ ವಿಷಯದ ಬಗ್ಗೆ ಚರ್ಚಿಸಲು ತಮ್ಮನ್ನು ಭೇಟಿ ಮಾಡುತ್ತಿಲ್ಲ ಎಂದು ಆರೋಪಿಸಿ ಶಾಸಕರು ಧರಣಿ ನಡೆಸಿದರು.

ನಾನು ಮೊದಲು ಆದಿವಾಸಿ, ನಂತರ ಶಾಸಕ ಮತ್ತು ಉಪಸಭಾಪತಿ. ಸಿಎಂ ಏಕನಾಥ್​ ಶಿಂಧೆ ನಮ್ಮನ್ನು ಭೇಟಿ ಮಾಡಬೇಕು. ಧಂಗರ್ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಿದರೆ 65 ಶಾಸಕರು ರಾಜೀನಾಮೆ ನೀಡುತ್ತೇವೆ. ಈ ಕುರಿತು ಇತರ ಬುಡಕಟ್ಟು ಮುಖಂಡರೊಂದಿಗೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಉಪ ಸ್ಪೀಕರ್ ನರಹರಿ ಜಿರ್ವಾಲ್ ತಿಳಿಸಿದ್ದಾರೆ.

ನರಹರಿ ಜಿರ್ವಾಲ್ ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದು, ಈ ರೀತಿ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿರಲಿಲ್ಲ ಎಂದು ಬಿಜೆಪಿ ಎಂಎಲ್​ಸಿ ಗೋಪಿಚಂದ್ ಪದಾಲ್ಕರ್ ಹೇಳಿದ್ದಾರೆ.

ಇನ್ನೂ, ಇಂದು ಸಚಿವ ಸಂಪುಟ ಸಭೆಯ ಬಳಿಕ ಬುಡಕಟ್ಟು ಸಮುದಾಯದ ಶಾಸಕರ ನಿಯೋಗ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ಅಜಿತ್ ಪವಾರ್, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬುಡಕಟ್ಟು ಸಚಿವ ವಿಜಯಕುಮಾರ್ ಗವಿತ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿತು. ಈ ಸಭೆಯಲ್ಲಿ ಬುಡಕಟ್ಟು ಶಾಸಕರ ಕೆಲ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದರೆ, ಸರ್ಕಾರ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಾರದ ಕಾರಣಕ್ಕೆ ಬುಡಕಟ್ಟು ಶಾಸಕರು ಹೈಡ್ರಾಮಾ ಮಾಡಿದ್ದಾರೆ.

ಸಭೆ ಬಳಿಕ ಮಾತನಾಡಿದ ಎನ್‌ಸಿಪಿ ಶಾಸಕ ಕಿರಣ್‌ ಲಹಮ್ಟೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು, ಅಧಿಕಾರಿಗಳು ಭೇಟಿ ಮಾಡಿದ್ದೇವೆ. ‘ಪೆಸಾ’ ನೇಮಕಾತಿ ಕುರಿತು ರಾಜ್ಯ ಸರ್ಕಾರ ಶೀಘ್ರವೇ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಬಹುದೊಡ್ಡ ಎನ್‌ಕೌಂಟರ್: 30 ನಕ್ಸಲರ ಹತ್ಯೆ, ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ - Chhattisgarh Encounter

ETV Bharat Logo

Copyright © 2024 Ushodaya Enterprises Pvt. Ltd., All Rights Reserved.