ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೂ ಮೊದಲೇ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಆಪ್) ಭರ್ಜರಿಯಾಗಿ ತಯಾರಿ ನಡೆಸಿದೆ. ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಇಂದು ಮಹತ್ವದ ಮತ್ತೊಂದು ಘೋಷಣೆ ಮಾಡಿದ್ದಾರೆ.
ರಾಷ್ಟ್ರ ರಾಜಧಾನಿಯ ವೃದ್ಧರಿಗೆ ಮಾಸಿಕ 2500 ರೂಪಾಯಿ ವೃದ್ಧಾಪ್ಯ ವೇತನ ನೀಡಲಾಗುವುದು ಎಂದು ಘೋಷಣೆ ಮಾಡಿದೆ. ದೆಹಲಿ ಸರ್ಕಾರವು ಈಗಾಗಲೇ 5.3 ಲಕ್ಷ ವೃದ್ಧರಿಗೆ ಪಿಂಚಣಿ ನೀಡಲಾಗುತ್ತಿದೆ.
#WATCH दिल्ली: AAP के राष्ट्रीय संयोजक अरविंद केजरीवाल ने कहा, " आज हम दिल्ली के बुजुर्गों के लिए खुशखबरी लेकर आए हैं। दिल्ली में 80,000 वृद्धावस्था पेंशन खोली जा रही हैं। अब कुल 5.3 लाख बुजुर्गों को पेंशन मिलेगी। इसे कैबिनेट ने पास कर दिया है और दिल्ली सरकार ने इसे लागू कर दिया… pic.twitter.com/iGLHU6BjnH
— ANI_HindiNews (@AHindinews) November 25, 2024
ಹಿರಿಯ ನಾಗರಿಕರಿಗೆ ಶುಭ ಸುದ್ದಿ: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕೇಜ್ರಿವಾಲ್ ಅವರು, ಇಂದು ಪಕ್ಷವು ದೆಹಲಿಯ ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿಯೊಂದನ್ನು ತಂದಿದೆ. ವೃದ್ಧಾಪ್ಯ ಯೋಜನೆಯಲ್ಲಿ 2500 ರೂಪಾಯಿ ನೀಡಲಾಗುತ್ತದೆ. ಇದು ವೃದ್ಧರಿಗೆ ಆರ್ಥಿಕ ಭದ್ರತೆ ನೀಡುತ್ತದೆ ಇದರಿಂದ ಅವರು ತಮ್ಮ ಜೀವನವನ್ನು ಘನತೆಯಿಂದ ಬದುಕಬಹುದು" ಎಂದು ಹೇಳಿದರು.
ಈ ಯೋಜನೆಗೆ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಇದೀಗ ಪರಿಣಾಮಕಾರಿಯಾಗಿ ಜಾರಿಯಾಗಲಿವೆ. ಈ ಹೊಸ ಪಿಂಚಣಿ ಯೋಜನೆಯಡಿ ಕಳೆದ 24 ಗಂಟೆಗಳಲ್ಲಿ 10,000ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಇದು ವೃದ್ಧರಲ್ಲಿ ಈ ಯೋಜನೆಗೆ ಹೆಚ್ಚಿನ ಉತ್ಸಾಹವಿದೆ ಎಂಬುದನ್ನು ಸೂಚಿಸುತ್ತಿದೆ. ಅರ್ಜಿಯ ಪ್ರಕ್ರಿಯೆಯು ಸರಳ ಮತ್ತು ಸುಲಭವಾಗಿದೆ ಎಂದು ಸರ್ಕಾರ ಖಚಿತಪಡಿಸಿದೆ. ಇದರಿಂದಾಗಿ ಎಲ್ಲ ಅರ್ಹ ಹಿರಿಯ ನಾಗರಿಕರು ಯಾವುದೇ ತೊಂದರೆಯಿಲ್ಲದೆ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದರು.
ಯೋಜನೆಯ ಪ್ರಯೋಜನಗಳು: ವೃದ್ಧಾಪ್ಯ ಪಿಂಚಣಿ ಯೋಜನೆಯ ಮುಖ್ಯ ಉದ್ದೇಶ ಎಂದರೆ ವೃದ್ಧರಿಗೆ ಆರ್ಥಿಕ ನೆರವು ನೀಡುವುದು, ಅವರ ದೈನಂದಿನ ಖರ್ಚುಗಳನ್ನು ಪೂರೈಸಲು ಸಹಾಯ ಮಾಡುವುದು. ಈ ಪಿಂಚಣಿಯು ಅವರಿಗೆ ಆರ್ಥಿಕ ಭದ್ರತೆಯನ್ನು ನೀಡುವುದಲ್ಲದೇ ಮಾನಸಿಕ ಶಾಂತಿಯನ್ನು ನೀಡುತ್ತದೆ.
ಇದನ್ನೂ ಓದಿ: ಕುಟುಂಬದ 4 ಮತಗಳಲ್ಲಿ MNS ಅಭ್ಯರ್ಥಿಗೆ ಬಿದ್ದಿದ್ದು 2: ಇದು ಎಡವಟ್ಟೋ? ಇವಿಎಂ ರಹಸ್ಯವೋ?