ಕರ್ನಾಟಕ

karnataka

ETV Bharat / bharat

ಕೇದಾರನಾಥ ಧಾಮದಲ್ಲಿ ಶಿವಸ್ತೋತ್ರ ಪಠಿಸುತ್ತಿದ್ದ ಮೃತ್ಯುಂಜಯ ಹಿರೇಮಠ ಹಠಾತ್​ ನಿಧನ - kedarnath vedpathi dies - KEDARNATH VEDPATHI DIES

ಕೇದಾರನಾಥ ಧಾಮದ ವೇದಪತಿಯಾಗಿದ್ದ ಮೃತ್ಯುಂಜಯ ಹಿರೇಮಠ ಅವರು ಚಿಕ್ಕವಯಸ್ಸಿನಲ್ಲೇ ಹಠಾತ್​ ನಿಧನಕ್ಕೀಡಾಗಿದ್ದಾರೆ.

kedarnath-dham
kedarnath-dham

By ETV Bharat Karnataka Team

Published : Apr 20, 2024, 12:53 PM IST

ರುದ್ರಪ್ರಯಾಗ:ಶಿವನಾಮಾವಳಿ ಮತ್ತು ವೇದಮಂತ್ರ ಪಠಿಸುತ್ತಿದ್ದ ಕೇದಾರನಾಥ ಧಾಮದ ಮೃತ್ಯುಂಜಯ ಹಿರೇಮಠ (31) ಅವರು ಶುಕ್ರವಾರ ಸಂಜೆ ಹಠಾತ್ ಸಾವಿಗೀಡಾಗಿದ್ದಾರೆ. ಇದು ಬದರಿನಾಥ - ಕೇದಾರನಾಥ ದೇವಾಲಯ ಸಮಿತಿಗೆ ಶೋಕ ತಂದಿದೆ.

ಚಾರ್​ಧಾಮ್​ಗಳಲ್ಲಿ ಒಂದಾದ ಕೇದಾರನಾಥನ ಸನ್ನಿಧಿಯಲ್ಲಿ ಪೂಜೆ, ವೇದಮಂತ್ರಗಳನ್ನು ಪಠಿಸುತ್ತಿದ್ದ ಮೃತ್ಯುಂಜಯ ಹಿರೇಮಠ ಅವರ ನಿಧನ ಭಕ್ತರು ಮತ್ತು ದೇವಾಲಯ ಸಿಬ್ಬಂದಿಯಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ. ಅವರು ಶಿವಸ್ತೋತ್ರ, ಶಿವನಾಮಾವಳಿ ಸೇರಿದಂತೆ ಶಿವನ ಭಜನಾ ಗೀತೆಗಳನ್ನು ಮಧುರವಾಗಿ ಹಾಡುತ್ತಿದ್ದರು. ಅವರ ಕಂಠದಲ್ಲಿ ಮೂಡಿದಬಂದ ಗೀತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿವೆ.

ಈ ಬಗ್ಗೆ ಮಾಹಿತಿ ನೀಡಿದ ದೇಗುಲ ಸಮಿತಿ ಕಾರ್ಯನಿರ್ವಹಣಾಧಿಕಾರಿ ಆರ್.ಸಿ.ತಿವಾರಿ, ಕೇದಾರನಾಥ ಧಾಮದಲ್ಲಿ ಮೃತ್ಯುಂಜಯ ಹಿರೇಮಠ ಅವರು ವೇದಪತಿಯಾಗಿ ಕೆಲಸ ಮಾಡುತ್ತಿದ್ದರು. ಶಿವಸ್ತೋತ್ರ, ಭಗವಾನ್ ಭೋಲೆನಾಥನ ನಾಮಾಗಳಿಗಳನ್ನು ಲಯಬದ್ಧವಾಗಿ ಹಾಡುತ್ತಿದ್ದರು. ಅವರ ಭಜನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶಂಸೆಯನ್ನೂ ಪಡೆದಿವೆ. ಅವರ ಸುಮಧುರ ಕಂಠದಲ್ಲಿ ಹಾಡಿದ ಎಷ್ಟೋ ಶ್ಲೋಕ ಮಂತ್ರಗಳು ಬಹಳ ವೈರಲ್ ಆಗಿವೆ ಎಂದು ತಿಳಿಸಿದ್ದಾರೆ.

ಕೇದಾರನಾಥ ದೇವಾಲಯದ ಮಹಿಮೆ ಬಗ್ಗೆ ಅವರು ಶ್ಲೋಕಗಳ ಮೂಲಕ ಹಾಡುತ್ತಿದ್ದರು. ದೇಗುಲದ ಸನ್ನಿಧಿಯಲ್ಲಿ ಚಿತ್ರಿಸಲಾದ ವಿಡಿಯೋಗಳು ಭಕ್ತರನ್ನು ಸೆಳೆದಿದ್ದವು. ಅವರ ನಿಧನವು ನಮಗೆ ದುಃಖ ತಂದಿದೆ. ಮೃತರ ಕುಟುಂಬಸ್ಥರಿಗೆ ಇದನ್ನು ಸಹಿಸಿಕೊಳ್ಳುವ ಶಕ್ತಿ ಪರಮೇಶ್ವರನು ನೀಡಲಿ ಎಂದು ಕೋರಿದರು.

ಇದನ್ನೂ ಓದಿ:ರಾಮನಾಮ ಜಪದಲ್ಲಿ ಮುಳುಗಿದ ಅಯೋಧ್ಯೆ: ರಘುವಂಶಜನಿಗೆ 'ಸೂರ್ಯ ರಶ್ಮಿಯ ತಿಲಕ' - surya tilak on ramlalla

ABOUT THE AUTHOR

...view details