ಕರ್ನಾಟಕ

karnataka

ETV Bharat / bharat

ವೈವಾಹಿಕ ಜೀವನದ ಸೆಕೆಂಡ್​ ಇನಿಂಗ್ಸ್​ ಆರಂಭಿಸಲಿರುವ ಸೌರವ್​ ಗಂಗೂಲಿ ಸಹೋದರ ಸ್ನೇಹಾಶಿಶ್​​ - Snehasish Ganguly

ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ ಅವರ ಹಿರಿಯ ಸಹೋದರ ಸ್ನೇಹಾಶಿಶ್​​ ಅವರು ನಾಳೆ ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಸೌರವ್​ ಗಂಗೂಲಿ ಸಹೋದರ ಸ್ನೇಹಾಶಿಶ್​​
ಸೌರವ್​ ಗಂಗೂಲಿ ಸಹೋದರ ಸ್ನೇಹಾಶಿಶ್​​ (ETV Bharat)

By ETV Bharat Karnataka Team

Published : Jul 20, 2024, 7:03 PM IST

ಕೋಲ್ಕತ್ತಾ(ಪಶ್ಚಿಮಬಂಗಾಳ):ಭಾರತ ಕ್ರಿಕೆಟ್​ ತಂಡದ ದಿಗ್ಗಜ ಆಟಗಾರ ಸೌರವ್​ ಗಂಗೂಲಿ ಅವರ ಸಹೋದರ, ಬಂಗಾಳ ಕ್ರಿಕೆಟ್​ ಸಂಸ್ಥೆಯ ಅಧ್ಯಕ್ಷ ಸ್ನೇಹಾಶಿಶ್​ ಗಂಗೂಲಿ ಎರಡನೇ ಮದುವೆಗೆ ಸಿದ್ಧವಾಗಿದ್ದಾರೆ. 56 ವರ್ಷ ವಯಸ್ಸಿನ ಸ್ನೇಹಾಶಿಶ್​ ಅವರು, ಜುಲೈ 21 ರಂದು ಅರ್ಪಿತಾ ಚಟರ್ಜಿ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ.

ಆಗಸ್ಟ್ 7 ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ಗಂಗೂಲಿ ಅವರ ಆಪ್ತ ಸ್ನೇಹಿತರೊಬ್ಬರು ವಿವಾಹ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಸ್ನೇಹಾಶಿಶ್ ಅವರ ಪತ್ನಿಯಾಗಲಿರುವ ಅರ್ಪಿತಾ ಅವರಿಗೂ ಇದು ಎರಡನೇ ವಿವಾಹವಾಗಿದೆ. ಇದಕ್ಕೂ ಮೊದಲು ಅವರು ಕೋಲ್ಕತ್ತಾದ ಪ್ರಸಿದ್ಧ ಕೈಗಾರಿಕೋದ್ಯಮಿಯಿಂದ ವಿಚ್ಚೇದನ ಪಡೆದಿದ್ದಾರೆ. ಆಕೆಯೂ ಸ್ವತಃ ಉದ್ಯಮಿಯಾಗಿದ್ದು, ಛತ್ತೀಸ್‌ಗಢದಲ್ಲಿ ಕೆಮಿಕಲ್ ಫ್ಯಾಕ್ಟರಿ ನಡೆಸುತ್ತಿದ್ದಾರೆ.

ಸ್ನೇಹಾಶಿಶ್ ಮತ್ತು ಅವರ ಮೊದಲ ಪತ್ನಿ ಮಾಮ್​​ ನಡುವಿನ ಸಂಬಂಧ ವರ್ಷಗಳ ಹಿಂದೆಯೇ ಅಳಿಸಿತ್ತು. ಕಳೆದ ವರ್ಷ ಆಕೆ ಸ್ನೇಹಾಶಿಶ್​ ವಿರುದ್ಧ ಚಿತ್ರಹಿಂಸೆ ದೂರು ನೀಡಿದ್ದರು. ಈ ಬಗ್ಗೆ ಎಫ್‌ಐಆರ್ ಕೂಡ ದಾಖಲಾಗಿತ್ತು. ಬಳಿಕ ಸ್ನೇಹಾಶಿಶ್​​ ಮತ್ತು ಮಾಮ್​​ಗೆ ಸ್ನೇಹ ಎಂಬ ಓರ್ವ ಮಗಳಿದ್ದಾಳೆ. ಅವರು ಅಮೆರಿಕದಲ್ಲಿ ವ್ಯಾಸಂಗ ಮಾಡಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ.

ಆತ್ಮೀಯರಾಗಿದ್ದ ಸ್ನೇಹಾಶಿಶ್​ ಮತ್ತು ಅರ್ಪಿತಾ:ಬಂಗಾಳ ಕ್ರಿಕೆಟ್​ ಅಧ್ಯಕ್ಷ ಸ್ನೇಹಾಶಿಶ್​ ಮತ್ತು ಮೊದಲ ಪತ್ನಿ ಮಾಮ್​ ನಡುವೆ ಅಧಿಕೃತ ವಿಚ್ಚೇದನದ ಬಳಿಕ ಎರಡನೇ ಮದುವೆ ಜರುಗುತ್ತಿದೆ. ಅರ್ಪಿತಾ ಮತ್ತು ಸ್ನೇಹಾಶಿಶ್​ ಈ ಮೊದಲಿನಿಂದಲೂ ಸ್ನೇಹಿತರಾಗಿದ್ದರು. ಐಪಿಎಲ್​ ವೇಳೆ ಹಲವು ಬಾರಿ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಕಾರ್ಪೊರೇಟ್ ಬಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಅರ್ಪಿತಾ - ಸ್ನೇಹಾಶಿಶ್ ಕುಟುಂಬದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಾರಿ ಗೋಚರಿಸಿದ್ದರು.

ಸ್ನೇಹಾಶಿಶ್ ಅವರು ಸದ್ಯ ಬಂಗಾಳ ಕ್ರಿಕೆಟ್ ಆಡಳಿತ ಮಂಡಳಿಯಲ್ಲಿದ್ದು, CAB ಕಾರ್ಯದರ್ಶಿ ಸ್ಥಾನಕ್ಕೂ ಆಯ್ಕೆಯಾಗಿದ್ದರು. ಸೌರವ್​ ಗಂಗೂಲಿ ಅವರ ಹಿರಿಯ ಸಹೋದರ ಆಗಿರುವ ಸ್ನೇಹಾಶಿಶ್​ 1989 - 90 ಋತುವಿನಲ್ಲಿ ರಣಜಿಯಲ್ಲಿ ಆಡಿದ್ದರು. ಬಂಗಾಳ ಆ ಸಾಲಿನಲ್ಲಿ ಚಾಂಪಿಯನ್ ಕೂಡ ಆಗಿತ್ತು. ಬಳಿಕ ಸ್ನೇಹಾಶಿಶ್ ಗಾಯಗೊಂಡಿದ್ದರು. ಇದು ಅವರ ವೃತ್ತಿಜೀವನಕ್ಕೆ ಅಡ್ಡಿಯಾಗಿತ್ತು.

ಬಳಿಕ ಅವರು ಬಂಗಾಳ ಕ್ರಿಕೆಟ್​ ಮಂಡಳಿಯಲ್ಲಿ ಸ್ಥಾನ ಪಡೆದರು. ಭಾರತದ ದೊಡ್ಡ ಕ್ರೀಡಾಂಗಣಗಳಲ್ಲಿ ಒಂದಾದ ಈಡನ್ ಗಾರ್ಡನ್ಸ್‌ನ ರೂಪವನ್ನೇ ಬದಲಿಸಿದರು. ಇವರ ನೇತೃತ್ವದಲ್ಲಿ ವಿಶ್ವಕಪ್ ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಗ್ಯಾಲರಿ, ಕ್ಲಬ್ ಹೌಸ್ ಅನ್ನು ನವೀಕರಿಸಲಾಗಿದೆ.

ಇದನ್ನೂ ಓದಿ:ಮಹಾರಾಜ ಟ್ರೋಫಿ ಸೀಸನ್-3: ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ - Maharaja Trophy

ABOUT THE AUTHOR

...view details