ಹೈದರಾಬಾದ್(ತೆಲಂಗಾಣ): ರಾಮೋಜಿ ಗ್ರೂಪ್ ಸಂಸ್ಥಾಪಕರಾದ ದಿವಂಗತ ರಾಮೋಜಿ ರಾವ್ ಅವರ 88ನೇ ಜನ್ಮದಿನದ ಸ್ಮರಣಾರ್ಥವಾಗಿ ಇಂದು ಮಾರ್ಗದರ್ಶಿ ಚಿಟ್ ಫಂಡ್ ಮೂರು ಹೊಸ ಶಾಖೆಗಳನ್ನು ಉದ್ಘಾಟಿಸಲಾಯಿತು. ವನಪರ್ಥಿ, ಶಂಶಾಬಾದ್ ಮತ್ತು ಹೈದರಾಬಾದ್ನ ಹಸ್ತಿನಾಪುರದಲ್ಲಿ ನೂತನ ಶಾಖೆಗಳನ್ನು ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ಅವರು ರಾಮೋಜಿ ಫಿಲ್ಮ್ ಸಿಟಿಯಿಂದ ವರ್ಚುಯಲ್ ಮೂಲಕ ಉದ್ಘಾಟಿಸಿದರು.
ಈ ಮೂಲಕ ಕಳೆದ ಆರು ದಶಕಗಳಿಂದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸೇವೆ ನೀಡುತ್ತಿರುವ ಮಾರ್ಗದರ್ಶಿ ಇಂದು 118 ಶಾಖೆಗಳಿಗೆ ವಿಸ್ತರಿಸಿದೆ. ಮಾರ್ಗದರ್ಶಿ ಎಂ.ಡಿ.ಶೈಲಜಾ ಕಿರಣ್ ಅವರು ಮೊದಲು ಇಂದು (ಶನಿವಾರ) ಬೆಳಗ್ಗೆ ವನಪರ್ಥಿ ಜಿಲ್ಲಾ ಕೇಂದ್ರದಲ್ಲಿ 116ನೇ ಶಾಖೆಯನ್ನು ಉದ್ಘಾಟಿಸಿ, ಸಿಬ್ಬಂದಿಗೆ ಶುಭಾಶಯ ಕೋರಿದರು. ಸಿಇಇ ಮಧುಸೂದನ್, ಉಪಾಧ್ಯಕ್ಷ ಬಲರಾಮಕೃಷ್ಣ ದೀಪ ಬೆಳಗಿಸಿ ಶಾಖೆಯ ಚಟುವಟಿಕೆಗೆ ಚಾಲನೆ ನೀಡಿದರು.
ಸಂಜೆ 4 ಗಂಟೆಗೆ ರಂಗಾರೆಡ್ಡಿ ಜಿಲ್ಲೆಯ ಶಂಶಾಬಾದ್ ಮಂಡಲದ ರಾಳ್ಲಗೂಡದಲ್ಲಿ 117ನೇ ಶಾಖೆಯನ್ನು ಉದ್ಘಾಟಿಸಲಾಯಿತು. ಸಿಇಒ ಸತ್ಯನಾರಾಯಣ ಹಾಗೂ ಶಾಖಾ ವ್ಯವಸ್ಥಾಪಕ ಅರುಣ್ ಕುಮಾರ್ ದೀಪ ಬೆಳಗಿಸುವ ಮೂಲಕ ಶಾಖೆಯ ಚಟುವಟಿಕೆಯನ್ನು ಪ್ರಾರಂಭಿಸಿದರು. ಬಳಿಕ 118ನೇ ಶಾಖೆಯನ್ನು ರಂಗಾರೆಡ್ಡಿ ಜಿಲ್ಲೆಯ ಹಸ್ತಿನಾಪುರದಲ್ಲಿ ಉದ್ಘಾಟಿಸಲಾಯಿತು. ಈ ವೇಳೆ ನಿರ್ದೇಶಕ ವೆಂಕಟಸ್ವಾಮಿ ಇದ್ದರು.
ಎಂಡಿ ಶೈಲಜಾಕಿರಣ್ ಮಾತನಾಡಿ, "ಇಂದು ರಾಮೋಜಿ ರಾವ್ ಅವರ ಜನ್ಮದಿನದ ಸಂದರ್ಭದಲ್ಲಿ ನಾವು ವನಪರ್ಥಿ, ಶಂಶಾಬಾದ್ ಮತ್ತು ಹಸ್ತಿನಾಪುರದಲ್ಲಿ ಹೊಸ ಶಾಖೆಗಳನ್ನು ತೆರೆದಿದ್ದೇವೆ. ನಮ್ಮ ಸಿಬ್ಬಂದಿ ಮತ್ತಷ್ಟು ಜನರಿಗೆ ಮಾರ್ಗದರ್ಶಿ ಆರ್ಥಿಕ ಸೇವೆಗಳನ್ನು ನೀಡಲು ಶ್ರಮಿಸಲಿದ್ದಾರೆ. ನಿಮ್ಮ ಸೇವೆಗೆ ಮಾರ್ಗದರ್ಶಿ ಸದಾ ಸಿದ್ಧವಿದೆ. ಮಾರ್ಗದರ್ಶಿಯಲ್ಲಿ ಗ್ರಾಹಕರು ನಂಬಿಕೆಯಿಂದ ತಮ್ಮ ಕಷ್ಟಾರ್ಜಿತ ಹಣವನ್ನು ಉಳಿತಾಯ ಮಾಡುತ್ತಿದ್ದಾರೆ. ಅವರಿಗೆ ಉತ್ತಮ ಸೇವೆ ನೀಡಲು ನಾವು ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಸುಶಿಕ್ಷಿತ ಸಿಬ್ಬಂದಿಯಿಂದ ಎಲ್ಲ ಇಲಾಖೆಗಳ ಗ್ರಾಹಕರಿಗೂ ಒಂದೇ ರೀತಿಯ ಸೇವೆ ನೀಡಲಾಗುತ್ತಿದೆ" ಎಂದರು.
ಬೇರೆಯವರ ಮೇಲೆ ಅವಲಂಬಿತರಾಗದೇ ಆರ್ಥಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಚಿಟ್ಸ್ ಉತ್ತಮ ಮಾರ್ಗವಾಗಿದೆ ಎಂದ ಅವರು, ಆರು ದಶಕಗಳಿಗೂ ಹೆಚ್ಚು ಕಾಲದಿಂದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸೇವೆಗಳನ್ನು ನೀಡುತ್ತಿರುವ ಮಾರ್ಗದರ್ಶಿಯನ್ನು ಪ್ರೋತ್ಸಾಹಿಸಿದ ಗ್ರಾಹಕರಿಗೆ ಧನ್ಯವಾದ ಎಂದು ತಿಳಿಸಿದರು.
ಇದನ್ನೂ ಓದಿ: ರಾಮೋಜಿ ಗ್ರೂಪ್ನಿಂದ 'ಸಬಲಾ ಮಿಲ್ಲೆಟ್ಸ್' - ಭಾರತ್ ಕಾ ಸೂಪರ್ಫುಡ್ ಅನಾವರಣ