ಹೈದರಾಬಾದ್:ವರ್ಷದ ಮೊದಲ ಸೂರ್ಯಗ್ರಹಣವು ಇಂದು ಸಂಭವಿಸಲಿದೆ. ನೇಸರನು ಕಣ್ಮರೆಯಾಗುವ ಕೌತುಕವು ಖಗೋಳ ಆಸಕ್ತರನ್ನು ತುದಿಗಾಲ ಮೇಲೆ ನಿಲ್ಲಿಸಿದೆ. ಇದು ರಾತ್ರಿ ನಡೆಯುವ ಆಗಸ ವಿದ್ಯಮಾನದಿಂದ ಭೂಮಿಯು ಬಿಸಿಯಾಗಲಿದೆ.
ಉತ್ತರ ಅಮೆರಿಕದಲ್ಲಿ ಹೆಚ್ಚಾಗಿ ಕಂಡುಬರುವ ಈ ಗ್ರಹಣವು ಭಾರತದಲ್ಲಿ ಗೋಚರವಾಗುವುದಿಲ್ಲ. ಭಾರತೀಯ ಕಾಲಮಾನದ ಪ್ರಕಾರ, ರಾತ್ರಿ 10 ಗಂಟೆಗೆ ಗ್ರಹಣ ಆರಂಭವಾಗಲಿದೆ. ಅಂದರೆ ಅಮೆರಿಕದ ಸಮಯದ ಪ್ರಕಾರ 12.30 ನಿಮಿಷವಾಗಿರಲಿದೆ. ಮಧ್ಯಾಹ್ನದ ವೇಳೆ ಖಗೋಳ ಕೌತುಕವನ್ನು ಕಣ್ತುಂಬಿಕೊಳ್ಳಲು ಜನರು ಸಜ್ಜಾಗಿದ್ದಾರೆ. ಮೆಕ್ಸಿಕೋದ ಪೆಸಿಫಿಕ್ ಕಡಲತೀರಗಳಿಂದ ಹಿಡಿದು ಕೆನಡಾದ ಒರಟಾದ ಅಟ್ಲಾಂಟಿಕ್ ತೀರಗಳವರೆಗಿನ 15 ರಾಜ್ಯಗಳ ಜನರು ಸೂರ್ಯನನ್ನು ನುಂಗುವ ವಿಸ್ಮಯವನ್ನು ನೋಡಲಿದ್ದಾರೆ.
ಸೌರ ಗ್ರಹಣ ಎಂದರೇನು?:ಸೂರ್ಯಗ್ರಹಣವು ಖಗೋಳ ವಿದ್ಯಮಾನವಾಗಿದ್ದು, ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋದಾಗ ಸೂರ್ಯನ ಬೆಳಕು ಸಂಪೂರ್ಣ ಅಥವಾ ಭಾಗಶಃ ಕಣ್ಮರೆಯಾಗುತ್ತದೆ. ಆಗ ಇದನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದಾಗ, ಅದರ ನೆರಳು ಭೂಮಿಯ ಮೇಲೆ ಕಾಣಿಸುತ್ತದೆ. ಸಂಪೂರ್ಣ ಗ್ರಹಣವಾದಾಗ ಮುಂಜಾನೆ ವೇಳೆಯೂ ಕತ್ತಲೆಯಾಗುತ್ತದೆ. ಪೂರ್ಣ ಗ್ರಹಣ ಸಂಭವಿಸುತ್ತಿರುವಾಗ ಜನರು ಭಾಗಶಃ ಗ್ರಹಣವನ್ನು ಮಾತ್ರ ನೋಡಬಲ್ಲರು.
ಸಂಪೂರ್ಣ ಸೂರ್ಯಗ್ರಹಣದ ಸಮಯ:2024 ರ ಪೂರ್ಣ ಸೂರ್ಯಗ್ರಹಣವು ಏಪ್ರಿಲ್ 8 ರಂದು ಸಂಭವಿಸಲಿದೆ. 'ಟೋಟಲಿಟಿ' ಎಂದು ಕರೆಯಲ್ಪಡುವ ಖಗೋಳ ವಿಸ್ಮಯವು ಕತ್ತಲೆಯು ಮೆಕ್ಸಿಕೋ, ಅಮೆರಿಕ ಮತ್ತು ಕೆನಡಾದಲ್ಲಿ ಗೋಚರಿಸುತ್ತದೆ. ಅಮೆರಿಕದ 18 ರಾಜ್ಯಗಳ ಜನರು ಸಹ ಇದನ್ನು ನೋಡಬಹುದು. ಭಾರತದಲ್ಲಿ ಆಕಾಶವೀಕ್ಷಕರಿಗೆ ಇದು ಗೋಚರಿಸುವುದಿಲ್ಲ.