ಅಮೇಥಿ: ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಲಿಸಿದ್ದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಕಂಡಿದ್ದಾರೆ. ಸ್ಮೃತಿ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಪ್ರಬಲ ಪೈಪೋಟಿ ನೀಡಿದ್ದು, 11.35ರ ಹೊತ್ತಿಗೆ 37 ಸಾವಿರ ಅಂತರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ದಶಕಗಳ ಕಾಲ ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಅಮೇಥಿ ರಾಜಕೀಯ ವಿಷಯಗಳಿಂದ ಅತ್ಯಂತ ಕುತೂಹಲದ ಕ್ಷೇತ್ರವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಬೃಹತ್ ಗೆಲುವು ದಾಖಲಿಸುವ ಮೂಲಕ ಕ್ಷೇತ್ರದಲ್ಲಿ ಮೊದಲ ಬಾರಿ ಕಮಲ ಅರಳಿಸಿದ್ದರು.
ಎರಡನೇ ಬಾರಿ ಅಮೇಥಿಯಿಂದ ಕಣಕ್ಕೆ ಇಳಿದಿದ್ದ ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್ ಗಾಂಧಿ ಕುಟುಂಬದ ಆಪ್ತರಾಗಿದ್ದ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕೆ ಇಳಿಸಿತ್ತು. ಉತ್ತರ ಪ್ರದೇಶದ ಪ್ರತಿಷ್ಟಿತ ಕ್ಷೇತ್ರವಾಗಿ ಅಮೇಥಿ ರೂಪಗೊಂಡಿತು. ಅಲ್ಲದೇ, ರಾಹುಲ್ ಗಾಂಧಿ ಸೋನಿಯಾ ಗಾಂಧಿ ಕ್ಷೇತ್ರವಾದ ರಾಯ್ ಬರೇಲಿಯಿಂದ ಕಣಕ್ಕೆ ಇಳಿದಿದ್ದರು.
ಉತ್ತರ ಪ್ರದೇಶದ ಪ್ರಮುಖ ಕ್ಷೇತ್ರವಾಗಿದ್ದ ಇಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಬಿಎಸ್ಪಿ ಪಕ್ಷಗಳಿಂದ ತ್ರಿಕೋನಾ ಸ್ಪರ್ಧೆ ಏರ್ಪಟಿತು. ಬಿಎಸ್ಪಿಯಿಂದ ನಂದೆ ಸಿಂಗ್ ಚೌಹಾಣ್ ಕಣಕ್ಕೆ ಇಳಿದಿದ್ದರು.