ಕರ್ನಾಟಕ

karnataka

ETV Bharat / bharat

ಶಬರಿಮಲೆ ಯಾತ್ರೆ: ಸಸ್ಯಾಹಾರಿ ಖಾದ್ಯಗಳಿಗೆ ಬೆಲೆ ನಿಗದಿಪಡಿಸಿದ ಪತ್ತನಂತಿಟ್ಟ ಡಿಸಿ; ಏನಿದರ ಪ್ರಯೋಜನ? - SABARIMALA PILGRIMAGE

ಪತ್ತನಂತಿಟ್ಟ ಡಿಸಿ ಎಸ್ ಪ್ರೇಮಕೃಷ್ಣನ್ ಅವರು ಸಸ್ಯಾಹಾರಿ ಖಾದ್ಯಗಳಿಗೆ ಬೆಲೆ ನಿಗದಿಪಡಿಸಿ ಆದೇಶಿಸಿದ್ದಾರೆ.

sabarimala
ಶಬರಿಮಲೆ (IANS)

By ETV Bharat Karnataka Team

Published : Nov 15, 2024, 4:41 PM IST

Updated : Nov 15, 2024, 4:52 PM IST

ಕೇರಳ (ಪತ್ತನಂತಿಟ್ಟ) :ಇಲ್ಲಿನ ಜಿಲ್ಲಾಧಿಕಾರಿ ಎಸ್ ಪ್ರೇಮಕೃಷ್ಣನ್ ಅವರು ಶಬರಿಮಲೆ ತೀರ್ಥಯಾತ್ರಾ ಋತುವಿನಲ್ಲಿ ಎಲ್ಲಾ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ತಮ್ಮ ಬೆಲೆ ಪಟ್ಟಿಯನ್ನು ಪ್ರದರ್ಶಿಸಬೇಕು ಎಂದು ಆದೇಶಿಸಿದ್ದಾರೆ.

ವಿಶೇಷವಾಗಿ ಪತ್ತನಂತಿಟ್ಟ ಜಿಲ್ಲೆಯಲ್ಲಿ ಹೆಸರಾಂತ ಭಗವಾನ್ ಅಯ್ಯಪ್ಪ ದೇವಾಲಯವಿದೆ. ಆದಾಗ್ಯೂ ಅಲ್ಲಿ ಅನೇಕ ತಿನಿಸುಗಳು ಸಾಮಾನ್ಯವಾಗಿ ಯಾತ್ರಾರ್ಥಿಗಳಿಗೆ ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ವ್ಯಾಪಕ ದೂರುಗಳಿಗೆ ಕಾರಣವಾಗಿದೆ. ಹೀಗಾಗಿ ಬೆಲೆ ಪಟ್ಟಿಯನ್ನು ಜನವರಿ 25 ರವರೆಗೆ ಪ್ರದರ್ಶಿಸಬೇಕು ಎಂದಿದ್ದಾರೆ.

ರಸ್ತೆ ಬದಿಯಲ್ಲಿ ಅಡುಗೆ ನಿಷೇಧ :ಶಬರಿಮಲೆ ಯಾತ್ರೆಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧೆಡೆಯಿಂದ ಶಬರಿಮಲೆಗೆ ಯಾತ್ರಾರ್ಥಿಗಳು ತೆರಳುವ ರಸ್ತೆ ಬದಿ, ವಾಹನ ನಿಲುಗಡೆ ಸ್ಥಳ ಹಾಗೂ ಇತರ ವಾಹನ ನಿಲುಗಡೆ ಸ್ಥಳಗಳ ಬಳಿ ಜನವರಿ 25ರವರೆಗೆ ಅಡುಗೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಗ್ಯಾಸ್ ಸಿಲಿಂಡರ್ ಬಳಕೆಗೆ ನಿರ್ಬಂಧ :ಶಬರಿಮಲೆ ಯಾತ್ರೆಗೆ ಸಂಬಂಧಿಸಿದಂತೆ ಲಾಹದಿಂದ ಸನ್ನಿಧಾನಂವರೆಗಿನ ರೆಸ್ಟೋರೆಂಟ್‌ಗಳಲ್ಲಿ ಏಕಕಾಲಕ್ಕೆ ಗರಿಷ್ಠ ಐದು ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಬಹುದಾಗಿದ್ದು, ಜನವರಿ 25ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕಾರಿ ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಮಾಂಸ ಸಂಗ್ರಹಣೆ ಮತ್ತು ಮಾರಾಟ ನಿಷೇಧ :ಶಬರಿಮಲೆ ಯಾತ್ರೆಗೆ ಸಂಬಂಧಿಸಿದಂತೆ ಜನವರಿ 25ರವರೆಗೆ ಲಾಹದಿಂದ ಸನ್ನಿಧಾನಂವರೆಗಿನ ತೀರ್ಥೋದ್ಭವ ಮಾರ್ಗಗಳಲ್ಲಿ ಮಾಂಸಾಹಾರ ಸಂಗ್ರಹ, ಅಡುಗೆ ಮತ್ತು ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಅಕ್ರಮ ಬೀದಿ ವ್ಯಾಪಾರಿಗಳ ನಿಷೇಧ :ಶಬರಿಮಲೆ ಯಾತ್ರೆಗೆ ಸಂಬಂಧಿಸಿದಂತೆ ಜನವರಿ 25ರವರೆಗೆ ಪಂಪಾದಿಂದ ಸನ್ನಿಧಾನಂ ವರೆಗಿನ ಯಾತ್ರಾ ಮಾರ್ಗಗಳಲ್ಲಿ ಅಕ್ರಮ ಬೀದಿ ಬದಿ ವ್ಯಾಪಾರಿಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಶಬರಿಮಲೆ ಸನ್ನಿಧಾನಂ, ಪಂಬಾ/ನಿಲಕ್ಕಲ್ ಮತ್ತು ಪತ್ತನಂತಿಟ್ಟ ಜಿಲ್ಲೆಯ ಇತರ ಪ್ರದೇಶಗಳಲ್ಲಿ ಆಹಾರ ಪದಾರ್ಥಗಳ ಬೆಲೆಯ ಪಟ್ಟಿ ಈ ಕೆಳಗಿನಂತಿದೆ.

ಸಸ್ಯಾಹಾರಿ ಖಾದ್ಯಗಳಿಗೆ ಬೆಲೆ ನಿಗದಿ (ETV Bharat)
ಸಸ್ಯಾಹಾರಿ ಖಾದ್ಯಗಳಿಗೆ ಬೆಲೆ ನಿಗದಿ (ETV Bharat)

ಇದನ್ನೂ ಓದಿ :ಶಬರಿಮಲೆ ಭಕ್ತರಿಗೆ ಸೂಚನೆ: ಇನ್ನು ಮುಂದೆ ಇರುಮುಡಿಕಟ್ಟಿನಲ್ಲಿ ಕರ್ಪೂರ, ಗಂಧದಕಡ್ಡಿ ಒಯ್ಯುವಂತಿಲ್ಲ

Last Updated : Nov 15, 2024, 4:52 PM IST

ABOUT THE AUTHOR

...view details