ಕರ್ನಾಟಕ

karnataka

ETV Bharat / bharat

ಆರ್​ಜಿ ಕರ್ ​ಅತ್ಯಾಚಾರ, ಕೊಲೆ ಪ್ರಕರಣ: ಕೆಲವೇ ಕ್ಷಣಗಳಲ್ಲಿ ತೀರ್ಪು ಪ್ರಕಟ - RG KAR RAPE MURDER CASE JUDGMENT

ಆರ್​ ಜಿ ಕರ್​ ಮೆಡಿಕಲ್​ ಕಾಲೇಜ್​ ಮತ್ತು ಆಸ್ಪತ್ರೆಯ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ತೀರ್ಪು ಇಂದು ಪ್ರಕಟವಾಗಲಿದೆ.

RG Kar Rape Murder Case Judgment To Be Pronounced Today
ಆರ್​ಜಿ ಕರ್​ ವೈದ್ಯಕೀಯ ಕಾಲೇಜ್​- ಆಸ್ಪತ್ರೆ (ಐಎಎನ್​ಎಸ್​​)

By ETV Bharat Karnataka Team

Published : Jan 18, 2025, 1:31 PM IST

Updated : Jan 18, 2025, 1:36 PM IST

ಕೋಲ್ಕತ್ತಾ:ಆರ್​ ಜಿ ಕರ್​ ಮೆಡಿಕಲ್​ ಕಾಲೇಜ್​ ಮತ್ತು ಆಸ್ಪತ್ರೆಯ ಸ್ನಾತಕೋತ್ತರ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು ಇಂದು ಕೋಲ್ಕತ್ತಾ ವಿಶೇಷ ನ್ಯಾಯಾಲಯದಿಂದ ಹೊರ ಬೀಳಲಿದೆ. ನ್ಯಾಯಾಲಯ ಆದೇಶದ ಹಿನ್ನೆಲೆ ಕೋರ್ಟ್​ ಆವರಣದಲ್ಲಿ ಬಿಗಿ ಬಂದೋಬಸ್ತ್​​ ಕಲ್ಪಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ ಕೊನೆ ಕ್ಷಣದಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಸಂತ್ರಸ್ತೆ ಪೋಷಕರು, ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರೆಸುವುದನ್ನು ಕೈ ಬಿಡದಂತೆ ತಿಳಿಸಿದ್ದಾರೆ.

ಕಳೆದ ಆಗಸ್ಟ್​ನಲ್ಲಿ ನಡೆದ ಈ ಭೀಕರ ಘಟನೆ ವಿರುದ್ಧ ರಾಷ್ಟ್ರಾದ್ಯಂತ ಪ್ರತಿಭಟನೆ ವ್ಯಕ್ತವಾಗಿತ್ತು. ಈ ಪ್ರಕರಣದ ಆದೇಶವನ್ನು ಇಂದು ಮಧ್ಯಾಹ್ನ 2ಕ್ಕೆ ಹೆಚ್ಚುವರಿ ಜಿಲ್ಲಾ ಸೆಷನ್ಸ್​​ ನ್ಯಾಯಮೂರ್ತಿಗಳ ಅನಿರ್ಬನ್​ ದಾಸ್​ ನೀಡಲಿದ್ದಾರೆ.

ಪ್ರಕರಣದ ಪ್ರಮುಖ ಏಕ ಆರೋಪಿಯಾಗಿರುವ ಸಂಜಯ್​ ರಾವ್​ ಅವರನ್ನು ಕೋರ್ಟ್​​ ಮುಂದೆ ಹಾಜರು ಪಡಿಸಲಾಗುವುದೇ ಇಲ್ಲವೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆಗಸ್ಟ್​ 9ರಂದು ರಾಜ್ಯ ಸರ್ಕಾರಿ ಆಸ್ಪತ್ರೆಯ ಸ್ನಾತಕೋತ್ತರ ಟ್ರೈನಿ ಮೇಲೆ ನಡೆದ ಈ ಅಪರಾಧ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ಈ ಪ್ರಕರಣದ ವಿಚಾರಣೆಯು ನವೆಂಬರ್​ 12ರಿಂದ ಪ್ರಾರಂಭವಾಗಿದ್ದು, 50 ಸಾಕ್ಷ್ಯಗಳನ್ನು ವಿಚಾರಣೆ ನಡೆಸಲಾಗಿದೆ. ಜನವರಿ 9ರಂದು ರಾಯ್​ ವಿಚಾರಣೆ ಮುಕ್ತಾಯಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಮೃತ ವೈದ್ಯರ ತಂದೆ, ಸಿಬಿಐ ತನಿಖಾಧಿಕಾರಿ, ಕೋಲ್ಕತ್ತಾ ಪೊಲೀಸ್ ತನಿಖಾಧಿಕಾರಿ, ವಿಧಿವಿಜ್ಞಾನ ತಜ್ಞರು ಮತ್ತು ಮೃತರ ಕೆಲವು ಸಹಪಾಠಿಗಳು ಪ್ರಕರಣದಲ್ಲಿ ಸಾಕ್ಷ್ಯ ನೀಡಿದ್ದಾರೆ.

ಸೀಲ್ಡಾ ನ್ಯಾಯಾಲಯ ಆದೇಶಕ್ಕೆ ಮುನ್ನ ಮಾತನಾಡಿರುವ ಟಿಎಂಸಿ ನಾಯಕ ಕೃಣಾಲ್​ ಘೋಷ್​, ಪಕ್ಷ ಆರೋಪಿಗೆ ಮರಣದಂಡನೆಯ ಬೇಡಿಕೆಯನ್ನು ಇಟ್ಟಿದೆ. ಘಟನೆ ನಡೆದ 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಸಿಬಿಐ ದೋಷಿಯಾಗಿ ದೃಢಪಡಿಸಿದೆ. ಕೋರ್ಟ್​​ ಇದೀಗ ದೋಷಿ ಎಂದು ಘೋಷಿಸಬೇಕಿದ್ದು, ಮರಣದಂಡನೆ ವಿಧಿಸಬೇಕಿದೆ. ಘಟನೆಯ ಮೊದಲ ದಿನದಂದಿಲೂ ಮುಖ್ಯಮಂತ್ರಿಗಳು ಈ ಹೀನ ಕೃತ್ಯ ಎಸಗಿದ ಆರೋಪಿಗೆ ಮರಣದಂಡನೆಯ ಶಿಕ್ಷೆಯ ಬೇಡಿಕೆ ಇರಿಸಿದ್ದರು ಎಂದಿದ್ದಾರೆ.

ಪಶ್ಚಿಮ ಬಂಗಾಳ ವಿಪಕ್ಷ ನಾಯಕ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮಾತನಾಡಿ, ಈ ತೀರ್ಪಿನಿಂದಾಗಿ ಸಮಾಜಕ್ಕೆ ಒಂದು ಸಂದೇಶ ತಿಳಿಯಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ:ಸ್ವಾಮಿತ್ವ ಯೋಜನೆ ಅಡಿ 65 ಲಕ್ಷ ಆಸ್ತಿ ಕಾರ್ಡ್ ವಿತರಿಸಲಿರುವ ಪ್ರಧಾನಿ; ಏನಿದು ಯೋಜನೆ, ಯಾರಿಗೆಲ್ಲ ಪ್ರಯೋಜನ?​​

Last Updated : Jan 18, 2025, 1:36 PM IST

ABOUT THE AUTHOR

...view details