ಕರ್ನಾಟಕ

karnataka

ETV Bharat / bharat

ರತ್ನ ಭಂಡಾರ ಆಭರಣಗಳ ಸ್ಥಳಾಂತರ ಪ್ರಕ್ರಿಯೆ ಇಂದು ಪೂರ್ಣಗೊಳ್ಳಲಿದೆ: ಮಹಾರಾಜ ದಿಬ್ಯಸಿಂಗ ದೇಬ್ - Ratna Bhandars ornaments shifting

ಪುರಿ ಜಗನ್ನಾಥ ದೇವಸ್ಥಾನದ ಬೆಲೆಬಾಳುವ ಆಭರಣಗಳ ಸ್ಥಳಾಂತರ ಪ್ರಕ್ರಿಯೆ ಇಂದು ಸಂಜೆಯೊಳಗೆ ಪೂರ್ಣಗೊಳ್ಳುವ ಭರವಸೆ ಇದೆ ಎಂದು ಪುರಿ ಗಜಪತಿ ಮಹಾರಾಜ ದಿಬ್ಯಸಿಂಗ್ ದೇಬ್ ತಿಳಿಸಿದ್ದಾರೆ.

Puri Gajapati Maharaja Dibyasingha Deb
ಪುರಿ ಜಗನ್ನಾಥ ದೇವಸ್ಥಾನ (IANS)

By ETV Bharat Karnataka Team

Published : Jul 18, 2024, 5:20 PM IST

Updated : Jul 18, 2024, 5:34 PM IST

ಪುರಿ (ಒಡಿಶಾ):ಪುರಿ ಜಗನ್ನಾಥ ದೇವಸ್ಥಾನದ ಒಳಕೋಣೆ ಅಥವಾ ಭಿತರ (ಒಳಗಿನ ಕೋಣೆ) ರತ್ನ ಭಂಡಾರದಿಂದ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇಂದು ಸಂಜೆಯೊಳಗೆ ಪೂರ್ಣಗೊಳ್ಳಲಿದೆ ಎಂದು ಪುರಿ ಗಜಪತಿ ಮಹಾರಾಜ ದಿಬ್ಯಸಿಂಗ ದೇಬ್ ತಿಳಿಸಿದ್ದಾರೆ.

ರತ್ನ ಭಂಡಾರದ ಎರಡನೇ ಹಂತದ ಉದ್ಘಾಟನೆಯ ಸಂದರ್ಭದಲ್ಲಿ ಉನ್ನತ ಮಟ್ಟದ ಸಮಿತಿಯ ಜೊತೆಗೂಡಿದ ಪುರಿ ಮಹಾರಾಜ ದಿಬ್ಯಸಿಂಗ್, ಭಗವಂತನ ಆಶೀರ್ವಾದದಿಂದ ಇಂದು ಸಂಜೆಯೊಳಗೆ ಸಂಪೂರ್ಣ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳ್ಳುವ ಭರವಸೆ ಇದೆ. ಹೋಲಿ ಟ್ರಿನಿಟಿ ನಾಳೆ ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದರು.

ಭಗವಾನ್ ಜಗನ್ನಾಥನ ಬೆಲೆಬಾಳುವ ಎಲ್ಲಾ ಆಭರಣಗಳನ್ನು ಶ್ರೀಮಂದಿರ ಸಂಕೀರ್ಣದೊಳಗಿನ 'ಖಟಾಶೇಜ ಕೋಣೆ'ಗೆ ಸ್ಥಳಾಂತರಿಸಲಾಗುವುದು, ಅದನ್ನು 'ತಾತ್ಕಾಲಿಕ ಸ್ಟ್ರಾಂಗ್ ರೂಮ್ ಅಥವಾ ತಾತ್ಕಾಲಿಕ ರತ್ನ ಭಂಡಾರ್' ಆಗಿ ಪರಿವರ್ತಿಸಲಾಗುತ್ತದೆ ಎಂದರು.

ಪುರಿ ಗಜಪತಿ ಮಹಾರಾಜ ದಿಬ್ಯಸಿಂಗ ದೇಬ್ ಅವರು ರತ್ನಾ ಭಂಡಾರದ ಒಳಗಿನ ಕೊಠಡಿಯೊಳಗಿನ ಅಲ್ಮೆರಾಗಳು ಯಥಾಸ್ಥಿತಿಯಲ್ಲಿದ್ದು, ಈಗಾಗಲೇ ಸ್ಥಳಾಂತರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದರು.

ಪುರಿ ಗಜಪತಿ ಮಹಾರಾಜ ದಿಬ್ಯಸಿಂಗ ದೇಬ್ ಹೇಳುವಂತೆ ‘ಖಟಾಶೇಜ’ ಕೊಠಡಿಯನ್ನು ತಾತ್ಕಾಲಿಕ ಸ್ಟ್ರಾಂಗ್ ರೂಂ ಆಗಿ ಬಳಸಲಾಗುತ್ತಿದೆ. ರತ್ನ ಭಂಡಾರದ ಒಳಗಿನ ಕೊಠಡಿಯಿಂದ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಹೆಚ್ಚಿನ ಭದ್ರತೆಯ ನಡುವೆ 'ಖಟಾಶೇಜ' ಕೋಣೆಗೆ ಸ್ಥಳಾಂತರಿಸಲಾಗುವುದು; ಶೀಟಿಂಗ್ ನಂತರ, 'ಖಟಾಶೇಜ' ಕೊಠಡಿಯನ್ನು ಸೀಲ್ ಮಾಡಲಾಗುವುದು ಎಂದಿದ್ದಾರೆ.

ಹೊರ ಮತ್ತು ಒಳಗಿನ ರತ್ನ ಭಂಡಾರಗಳ ಸಂಪೂರ್ಣ ತೆರವಿನ ನಂತರ, ಆವರಣವನ್ನು ಸಂಪೂರ್ಣ ದುರಸ್ತಿ ಮತ್ತು ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಹಸ್ತಾಂತರಿಸಲಾಗುವುದು. ಏಕೆಂದರೆ ನಮಗೆ ತಿಳಿದಿರುವಂತೆ, ರತ್ನ ಭಂಡಾರದ ದುರಸ್ತಿ ಕಾರ್ಯವನ್ನು ಇಲ್ಲಿಯವರೆಗೆ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ ಜುಲೈ 18 ರಂದು ಮತ್ತೆ ಓಪನ್ - Ratna Bhandar open

Last Updated : Jul 18, 2024, 5:34 PM IST

ABOUT THE AUTHOR

...view details