ಅಯೋಧ್ಯೆ, ಉತ್ತರಪ್ರದೇಶ:ಇಲ್ಲಿನರಾಮ ಮಂದಿರದಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿ ಜನವರಿ 11ಕ್ಕೆ ಒಂದು ವರ್ಷವಾಗಲಿದ್ದು, ಮೊದಲ ವರ್ಷದ ಆಚರಣೆಗೆ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿದೆ. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇದಕ್ಕಾಗಿ ಪ್ರತಿಷ್ಠಾನ ದ್ವಾದಶಿ ಮೂರು ದಿನದ ವಾರ್ಷಿಕ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ.
ಈ ನಿಟ್ಟಿನಲ್ಲಿ ಗುರುವಾರ ರಾಮ ಮಂದಿರ ಟ್ರಸ್ಟ್ ಮತ್ತು ಆಡಳಿತಾತ್ಮಕ ಅಧಿಕಾರಿಗಳು ಸ್ಥಳದ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಭದ್ರತಾ ಅಧಿಕಾರಿಗಳು ಮತ್ತು ಕಾರ್ಯಕ್ರಮ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಡಾ ಅನಿಲ್ ಮಿಶ್ರಾ, ವಿಭಾಗೀಯ ಆಯುಕ್ತ ಗೌರವ್ ದಯಾಲ್, ಐಜಿ ಪ್ರವೀಣ್ ಕುಮಾರ್, ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್, ಮುನ್ಸಿಪಲ್ ಕಮಿಷನರ್ ಸಂತೋಷ್ ಶರ್ಮಾ, ಎಸ್ಎಸ್ಪಿ ರಾಜ್ಕರಣ್ ನ್ಯಾಯ್ಯರ್, ಎಸ್ಪಿ ಭದ್ರತಾ ಸಂಕರ್ಣ ಬ್ರಹ್ಮಚಾರಿ ದುಬೆ ಮತ್ತು ಇತರರು ಸಭೆಯಲ್ಲಿ ಭಾಗಿಯಾಗಿದ್ದರು.
ವಿಭಾಗೀಯ ಆಯುಕ್ತರಾದ ಗೌರವ್ ದಯಾಳ್ ಮಾತನಾಡಿ, ಪ್ರಾಣ ಪ್ರತಿಷ್ಠಾಪನೆ ವಾರ್ಷಿಕ ಆಚರಣೆ ಹಿನ್ನೆಲೆ ಜನವರಿ 11, 12, 13ರಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಟ್ರಸ್ಟ್ನಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅಂಗದ್ ತಿಲ್ ದಲ್ಲಿಅನೇಕ ಸಾಂಸ್ಕೃತಿಕ ಮತ್ತು ಕಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇಗುಲದ ಆವರಣದಲ್ಲಿ ರಾಗ್ ಸೇವಾ ಉತ್ಸವ್ ಕಾರ್ಯಕ್ರಮಗಳು ನಡೆಯಲಿದ್ದು, ರಾಮಯಣದ ಮರುಸೃಷ್ಟಿ ಮಾಡಲು ಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅನೇಕ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.