ಕರ್ನಾಟಕ

karnataka

ETV Bharat / bharat

ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಐದು ವರ್ಷದ ಬಾಲಕ ಆಸ್ಪತ್ರೆಯಲ್ಲಿ ಸಾವು: ಫಲ ನೀಡಲಿಲ್ಲ 55 ಗಂಟೆಗಳ ಕಾರ್ಯಾಚರಣೆ

ಸೋಮವಾರ ಬೋರ್​ವೆಲ್​​ಗೆ ಬಿದ್ದಿದ್ದ ಬಾಲಕ ಆರ್ಯನ್​ ರಕ್ಷಣೆ ಮಾಡುವಲ್ಲಿ ರಕ್ಷಣಾಪಡೆಗಳು ಯಶಸ್ವಿಯಾದರೂ ಮಗುವನ್ನು ಬದುಕಿಸಿ ಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.

Rajasthan: Five-year-old boy stuck in borewell rescued after over 55 hours
ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಐದು ವರ್ಷದ ಬಾಲಕನ ರಕ್ಷಣೆ: 55 ಗಂಟೆಗಳ ಬಳಿಕ ಯಶಸ್ವಿ ಕಾರ್ಯಾಚರಣೆ (ETV Bharat)

By PTI

Published : 6 hours ago

Updated : 4 hours ago

ಜೈಪುರ, ರಾಜಸ್ಥಾನ: ದೌಸಾದಲ್ಲಿ 150 ಅಡಿ ಬೋರ್‌ವೆಲ್‌ನಲ್ಲಿ ಸಿಲುಕಿದ್ದ 5 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 3 ದಿನಗಳ ಕಾಲ ನಡೆದ ವ್ಯಾಪಕ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಡಿಸೆಂಬರ್ 9 ರಂದು ಆಟವಾಡುತ್ತಿದ್ದಾಗ ಬಾಲಕ ಆರ್ಯನ್​ 150 ಅಡಿ ಆಳದ ಬೋರ್‌ವೆಲ್‌ನಲ್ಲಿ ಬಿದ್ದಿದ್ದ.

ವಿಷಯ ತಿಳಿದು ಕೇವಲ ಒಂದು ಗಂಟೆಯಲ್ಲೇ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ಪ್ರಾರಂಭ ಮಾಡಿತ್ತು. ಬುಧವಾರ ರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಬೋರ್‌ವೆಲ್‌ನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಬಾಲಕ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಯಿತು.

ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಐದು ವರ್ಷದ ಬಾಲಕನ ರಕ್ಷಣೆ: 55 ಗಂಟೆಗಳ ಬಳಿಕ ಯಶಸ್ವಿ ಕಾರ್ಯಾಚರಣೆ (ETV Bharat)

ಮಗುವನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ಮಾಡಿದೆವು, ಆದರೆ?:ಮಗುವನ್ನು ಬದುಕುಳಿಯುವಂತೆ ಮಾಡಲು ವೈದ್ಯರು ಎಲ್ಲ ಪ್ರಯತ್ನಗಳನ್ನು ಮಾಡಿದರು. ಆದರೆ ಎಲ್ಲವೂ ವ್ಯರ್ಥವಾಯಿತು ಎಂದು ದೌಸಾದಲ್ಲಿನ ಮುಖ್ಯ ವೈದ್ಯಕೀಯ ಅಧಿಕಾರಿ ಮಗುವಿನ ಸಾವಿನ ಬಗ್ಗೆ ಮಾಹಿತಿ ನೀಡಿದರು. ಬೋರ್​​ವೆಲ್​ನಿಂದ ಮೇಲೆ ತೆಗೆದುಕೊಂಡು ಬಂದ ತಕ್ಷಣ ಬಾಲಕನನ್ನು ಕರೆತರಲಾಗಿತ್ತು. ತಕ್ಷಣ ಬಾಲಕನನ್ನು ಉಳಿಸಿಕೊಳ್ಳಲು ಎಲ್ಲ ಅಗತ್ಯ ಚಿಕಿತ್ಸೆ ನೀಡಿ, ಬದುಕಿಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನು ಮಾಡಲಾಯಿತು. ನಾವು ಎರಡು ಬಾರಿ ಇಸಿಜಿ ಮಾಡಿದೆವು ಆದರೆ ಮಗು ಬದುಕುಳಿಯಲಿಲ್ಲ ಎಂದು ದೌಸಾ ಸಿಎಂಒ ಹೇಳಿದರು.

ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಐದು ವರ್ಷದ ಬಾಲಕನ ರಕ್ಷಣೆ: 55 ಗಂಟೆಗಳ ಬಳಿಕ ಯಶಸ್ವಿ ಕಾರ್ಯಾಚರಣೆ (ETV Bharat)

ಘಟನೆಯ ಹಿನ್ನೆಲೆ: ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾಲಿಖಾಡ್ ಗ್ರಾಮದ ಹೊಲವೊಂದರಲ್ಲಿ ಆಟವಾಡುತ್ತಿದ್ದ ಬಾಲಕ ಆರ್ಯನ್ ಬೋರ್‌ವೆಲ್‌ನಲ್ಲಿ ಬಿದ್ದಿದ್ದು, ಒಂದು ಗಂಟೆಯ ನಂತರ ರಕ್ಷಣಾ ಕಾರ್ಯಾಚರಣೆ ಪ್ರಾರಂಭ ಮಾಡಲಾಗಿತ್ತು. ಸತತ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿ, ಬಾಲಕನನ್ನು 150 ಅಡಿ ಆಳದ ಕೊಳವೆ ಬಾವಿಯಿಂದ ಮೇಲಕ್ಕೆ ತರಲಾಗಿದೆ. ಮಗುವನ್ನು ರಕ್ಷಿಸುವ ನಿಟ್ಟಿನಲ್ಲಿ ಡ್ರಿಲ್ಲಿಂಗ್ ಯಂತ್ರಗಳನ್ನು ಬಳಸಿ ಸಮಾನಾಂತರ ಕೊಳವೆ ತೋಡಲಾಗಿತ್ತು.

ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಐದು ವರ್ಷದ ಬಾಲಕನ ರಕ್ಷಣೆ: 55 ಗಂಟೆಗಳ ಬಳಿಕ ಯಶಸ್ವಿ ಕಾರ್ಯಾಚರಣೆ (ETV Bharat)

ಕಾರ್ಯಾಚರಣೆಯಲ್ಲಿ ಅಸಂಖ್ಯಾತ ಸವಾಲುಗಳು ಎದುರಾಗಿದ್ದವು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ಹೇಳಿದ್ದಾರೆ. ಭೂಗತ ಹಬೆಯ ಕಾರಣದಿಂದ ಕ್ಯಾಮರಾದಲ್ಲಿ ಬಾಲಕನ ಚಲನವಲನಗಳನ್ನು ಸೆರೆಹಿಡಿಯುವಲ್ಲಿ ತೊಂದರೆ ಎದುರಾಗಿತ್ತು. ರಕ್ಷಣಾ ಸಿಬ್ಬಂದಿಗೆ ಮಗುವಿನ ಸುರಕ್ಷತೆ ಸವಾಲಾಗಿತ್ತು. ಈ ಎಲ್ಲ ಸವಾಲುಗಳನ್ನು ಮೀರಿ ಬಾಲಕನನ್ನು 150 ಅಡಿ ಆಳದಿಂದ ಮೇಲಕ್ಕೆ ತರಲಾಗಿದೆ. ಇತ್ತೀಚಿನ ಮಾಹಿತಿ ಪ್ರಕಾರ ಬಾಲಕನನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಐದು ವರ್ಷದ ಬಾಲಕನ ರಕ್ಷಣೆ: 55 ಗಂಟೆಗಳ ಬಳಿಕ ಯಶಸ್ವಿ ಕಾರ್ಯಾಚರಣೆ (ETV Bharat)

ಘಟನೆ ಬಗ್ಗೆ ಜಿಲ್ಲಾಡಳಿತದ ಪ್ರತಿಕ್ರಿಯೆ ಹೀಗಿದೆ: ಘಟನೆ ಕುರಿತು ಮಾತನಾಡಿರುವ ಜಿಲ್ಲಾಡಳಿತ, ಕಳೆದ 45 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ಸಾಗಿದ್ದು, ಬಾಲಕ ಜೀವಂತವಾಗಿ ಮರಳುವ ಬಗ್ಗೆ ಭರವಸೆ ಉಳಿದಿಲ್ಲ. ಕಾರ್ಯಾಚರಣೆ ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿರುವುದಾಗಿ ಡಿಸಿ ದೇವೇಂದ್ರ ಯಾದವ್ ತಿಳಿಸಿದ್ದರು.

ಇದನ್ನು ಓದಿ:ಮೂರು ದಿನದಿಂದ ಕೊಳವೆ ಬಾವಿಯಲ್ಲಿ ಸಿಲುಕಿರುವ ಬಾಲಕ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

Last Updated : 4 hours ago

ABOUT THE AUTHOR

...view details