ಜೈಪುರ, ರಾಜಸ್ಥಾನ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತ ಹೇಳಿಕೆಯು ರಾಜಸ್ಥಾನದ ವಿಧಾನಸಭೆಯಲ್ಲಿ ಜಟಾಪಟಿಗೆ ಕಾರಣವಾಗಿದ್ದು, ಕಾಂಗ್ರೆಸ್ ಶಾಸಕರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಶುಕ್ರವಾರದ ಅಧಿವೇಶನದಲ್ಲಿ ಸಚಿವರ ಹೇಳಿಕೆ ಖಂಡಿಸಿ ಸದನದಲ್ಲಿ ಕೋಲಾಹಲ ನಿರ್ಮಾಣವಾಯಿತು. ಈ ವೇಳೆ ಆರು ಶಾಸಕರನ್ನು ಸದನದಿಂದ ಅಮಾನತು ಮಾಡಿತು. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಅಹೋರಾತ್ರಿ ಧರಣಿ ಮಾಡಲು ನಿರ್ಧರಿಸಿತು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಅವಿನಾಶ್ ಗೆಹ್ಲೋಟ್, ಬಜೆಟ್ ಅಧಿವೇಶನದಲ್ಲಿ ಇಂದಿರಾ ಗಾಂಧಿಯನ್ನು ಅಜ್ಜಿ ಎಂದು ಸಂಬೋಧಿಸಿದ ಹಿನ್ನೆಲೆಯಲ್ಲಿ ಈ ಕೋಲಾಹಲ ಆರಂಭವಾಯಿತು.
ಎಲ್ಲ ಯೋಜನೆಗಳಿಗೂ ಅಜ್ಜಿ ಇಂದಿರಾಗಾಂಧಿ ಹೆಸರಿಡುತ್ತೀರಾ?:ಪ್ರಶ್ನೋತ್ತರ ಅವಧಿಯಲ್ಲಿ ಗೆಹ್ಲೋಟ್ 2023 - 24ರ ಬಜೆಟ್ನತ್ತ ಕೂಡ ಬೊಟ್ಟು ಮಾಡಿದ್ದು, ನಿಮ್ಮ ಅಜ್ಜಿ ಇಂದಿರಾ ಗಾಂಧಿ ಹೆಸರನ್ನೇ ಎಲ್ಲಾ ಯೋಜನೆಗಳಿಗೆ ಇಡುತ್ತೀರಾ ಎಂದು ಪ್ರಶ್ನಿಸಿದ್ದರು . ಅವರ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದಾಗಿಯೇ ಕಲಾಪವನ್ನು ಮೂರು ಬಾರಿ ಮುಂದೂಡಬೇಕಾಯಿತು.
ಗದ್ದಲ ನಿಲ್ಲದೇ ಇರುವುದರಿಂದ ಹಾಗೂ ಸದನದ ಕಲಾಪ ಅಸ್ತವ್ಯಸ್ಥಗೊಳಿಸಿದ್ದಾರೆ ಎಂದು ಸ್ವೀಕರ್ ಕಾಂಗ್ರೆಸ್ ನ ಆರು ಜನ ಶಾಸಕರನ್ನು ಅಮಾನತಿನಲ್ಲಿಟ್ಟಿರುವುದಾಗಿ ಘೋಷಿಸಿದರು. ಹೀಗಾಗಿ ವಿಪಕ್ಷ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುವ ನಿರ್ಧಾರ ಕೈಗೊಂಡಿತು. ಸರ್ಕಾರದ ಮುಖ್ಯ ವಿಪ್ ಜೋಗೇಶ್ವರ್ ಗಾರ್ಗ್ ಕಾಂಗ್ರೆಸ್ ಶಾಸಕರಾದ ಗೋವಿಂದ್ ಸಿಂಗ್, ದೊತಸರ, ರಾಮ್ಕೇಶ್ ಮೀನಾ, ಅಮಿನ್ ಕಾಜ್ಜಿ, ಜಾಕಿರ್ ಹುಸೇನ್, ಹಕಂ ಅಲಿ ಮತ್ತು ಸಂಜಯ್ ಕುಮಾರ್ ಅವರನ್ನು ಧ್ವನಿ ಮತದ ಮೂಲಕ, ಅಶಿಸ್ತಿನ ಕಾರಣ ನೀಡಿ ಅಮಾನತು ಮಾಡಲಾಗಿದೆ.
ಕಾಂಗ್ರೆಸ್ ಶಾಸಕರ ಧರಣಿ (ರಾಜಸ್ಥಾನ ಕಾಂಗ್ರೆಸ್) ಕಾಂಗ್ರೆಸ್ ಶಾಸಕರ ಧರಣಿ (ರಾಜಸ್ಥಾನ ಕಾಂಗ್ರೆಸ್) ಆರು ಶಾಸಕರ ಅಮಾನತಿನ ಬಳಿಕ ರಾಜಸ್ಥಾನ ವಿಧಾನಸಭೆ ಸ್ಪೀಕರ್ 11 ಗಂಟೆಗೆ ಸಭೆಯನ್ನು ಮುಂದೂಡಿದ್ದರು. ಸ್ಪೀಕರ್ ಅವರ ನಿರ್ಧಾರ ಹಾಗೂ ಸಚಿವರ ಹೇಳಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ರಾತ್ರಿ ಇಡೀ ಸದನದಲ್ಲಿ ಕಳೆದರು.
ಪ್ರತಿಭಟನಾಕಾರರಿಗೆ ಊಟ, ಹಾಸಿಗೆ ವ್ಯವಸ್ಥೆ ಮಾಡಿದ ಸ್ಪೀಕರ್:ಇನ್ನು ಸ್ಪೀಕರ್, ಪ್ರತಿಭಟನಾ ನಿರತ ಕಾಂಗ್ರೆಸ್ ಸದಸ್ಯರಿಗೆ ಊಟ, ಹಾಸಿಗೆ ಸೇರಿದಂತೆ ವಿವಿಧ ಸವಲತ್ತನ್ನು ನೀಡುವಂತೆ ವಿಧಾನಸಭೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಅವರ ನಿರ್ದೇಶನದಂತೆ ಅಧಿಕಾರಿಗಳು ಅಗತ್ಯ ವ್ಯವಸ್ಥೆ ಮಾಡಿದ್ದರು. ಮತ್ತೊಂದು ಕಡೆ ಈ ಘಟನೆ ಖಂಡಿಸಿ ಫೆ 22ರಂದು ಕಾಂಗ್ರೆಸ್ ಎಲ್ಲಾ ಜಿಲ್ಲಾ ಮುಖ್ಯ ಕಚೆರಿಯಲ್ಲಿ ಪ್ರತಿಭಟನೆ ಆಯೋಜಿಸಲು ನಿರ್ಧರಿಸಿದೆ.
ಕಾಂಗ್ರೆಸ್ ಶಾಸಕರ ಧರಣಿ (ರಾಜಸ್ಥಾನ ಕಾಂಗ್ರೆಸ್) ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಗರಂ:ವಿಪಕ್ಷ ನಾಯಕ ಟಿಕರಾಮ್ ಜುಲೈ ಮಾತನಾಡಿ, ಮೂವರು ಸಚಿವರು ಹಿರಿಯ ಕಾಂಗ್ರೆಸ್ ಶಾಸಕರೊಂದಿಗೆ ನಿನ್ನೆ ರಾತ್ರಿ ಮಾತನಾಡಿದ್ದಾರೆ. ಆದರೆ ಆ ಮಾತುಕತೆ ಫಲಪ್ರದವಾಗದೇ ಇರುವುದರಿಂದ ನಮ್ಮ ಧರಣಿಯನ್ನು ಮುಂದುವರೆಸಿದ್ದೇವೆ ಎಂದರು. ಸಚಿವ ಗೆಹ್ಲೋಟ್ ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ನಾವು ಬೇಡಿಕೆ ಇಟ್ಟಿದ್ದೇವೆ. ಈ ಪದಗಳನ್ನು ತೆಗೆದು ಹಾಕಲಾಗಿದೆ. ಆದರೂ ಸರ್ಕಾರವೇ ಸದನವನ್ನು ನಡೆಸಲು ಮುಂದಾಗುತ್ತಿಲ್ಲ ಎಂದು ವಿಪಕ್ಷ ನಾಯಕರು ಆರೋಪಿಸಿದರು.
ಬಿಜೆಪಿ ವಿರುದ್ಧ ಮಾಜಿ ಸಿಎಂ ಆಕ್ರೋಶ:ಮಾಜಿ ಸಿಎಂ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಡಳಿತರೂಢ ಸರ್ಕಾರದ ನಾಯಕರು ಸುಖಾಸುಮ್ಮನೇ ವಿಪಕ್ಷಗಳನ್ನು ಪ್ರಚೋದಿಸಿದ್ದು ಇಷ್ಟಕ್ಕೆಲ್ಲ ಕಾರಣವಾಗಿದೆ. ಅನಗತ್ಯವಾಗಿ ಇಂದಿರಾ ಗಾಂಧಿ ಹೆಸರನ್ನು ಎಳೆದು ತರಲಾಗಿದೆ. ಇದಾದ ಬಳಿಕವೂ ಪರಿಸ್ಥಿತಿಯನ್ನು ಹತೋಟಿಗೆ ತರುವ ಎಲ್ಲ ಅವಕಾಶಗಳು ಸರ್ಕಾರಕ್ಕೆ ಇತ್ತು. ಆದರೂ ಅವರು ಏನನ್ನೂ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಟೋಂಕ್ ಶಾಸಕ ಸಚಿನ್ ಪೈಲಟ್ ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದು, ಶಾಸಕರ ಅಮಾನತು ರದ್ದುಗೊಳಿಸುವಂತೆ ಸ್ಪೀಕರ್ಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೇಜ್ರಿವಾಲ್ ಸಮಾಜದ ಎದುರು ಮಾದರಿಯಾಗಿರಬೇಕಿತ್ತು: ಅಣ್ಣಾ ಹಜಾರೆ
ಇದನ್ನೂ ಓದಿ:FDI ನಿಯಮ ಉಲ್ಲಂಘನೆ; ಬಿಬಿಸಿ ವರ್ಲ್ಡ್ ಸರ್ವೀಸ್ ಇಂಡಿಯಾಗೆ 3.44ಕೋಟಿರೂ ದಂಡ ವಿಧಿಸಿದ ಇಡಿ