ಕರ್ನಾಟಕ

karnataka

ETV Bharat / bharat

ಜೈಸಲ್ಮೇರ್‌ನಲ್ಲಿ ಮನೆಗಳು ಕುಸಿದು ಮೂವರು ಸಾವು: 10 ಮಂದಿಗೆ ಗಾಯ - Houses Collapse In Jaisalmer

ರಾಜಸ್ಥಾನ ರಾಜ್ಯದ ಜೈಸಲ್ಮೇರ್‌ನಲ್ಲಿ ಮನೆ ಕುಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಮೃತ ದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಭಾರಿ ಮಳೆಯ ಪರಿಣಾಮವಾಗಿ ಕಟ್ಟಡದ ಕೆಳಗಿರುವ ಮರಳು ಸರಿದಿದ್ದರಿಂದ ಮನೆಗಳ ಗೋಡೆ ಕುಸಿದು ತುಂಬಾ ಹಾನಿಯಾಗಿದೆ.

JAISALMER WALL COLLAPSE  JAISALMER RAJASTHAN DEATH  JAISALMER DEATH  WALL COLLAPSE
ರಾಜಸ್ಥಾನ: ಜೈಸಲ್ಮೇರ್‌ನಲ್ಲಿ ಮನೆಗಳ ಕುಸಿದು ಮೂವರು ಸಾವು, 10 ಮಂದಿ ಗಾಯ (ETV Bharat)

By ETV Bharat Karnataka Team

Published : Aug 6, 2024, 10:49 AM IST

ಜೈಸಲ್ಮೇರ್ (ರಾಜಸ್ಥಾನ):ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಮೋಹನ್‌ಗಢ ಪಟ್ಟಣದಲ್ಲಿ ಸೋಮವಾರ ರಾತ್ರಿ ಮಣ್ಣಿನ ಮನೆ ಕುಸಿದು ಮೂವರು ಸಾವನ್ನಪ್ಪಿದ್ದು, ಮತ್ತು 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳೀಯರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿದ್ದಾರೆ. ನಂದು, ಸುನೀತಾ ಮತ್ತು ಮಂಜು ಮೃತಪಟ್ಟವರು.

ನಂತರ ಮೃತ ದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಜೋಧ್‌ಪುರದಲ್ಲಿ ಹಲವು ಮನೆಗಳ ಗೋಡೆಗಳ ಕುಸಿತದ ಘಟನೆಗಳನ್ನು ವರದಿಯಾಗಿವೆ. ಭಾರಿ ಮಳೆಯಿಂದಾಗಿ ಜಿಲ್ಲೆಯ ತಗ್ಗು ಪ್ರದೇಶಗಳು ನೀರು ನುಗ್ಗಿದೆ. ಪೊಲೀಸ್ ಅಧಿಕಾರಿಯ ಪ್ರಕಾರ, ಭಾರಿ ಮಳೆಯ ಪರಿಣಾಮವಾಗಿ ಕಟ್ಟಡದ ಕೆಳಗಿರುವ ಮರಳು ಸರಿದಿದ್ದರಿಂದ ಮನೆಗಳ ಗೋಡೆಯ ತಳಕ್ಕೆ ತುಂಬಾ ಹಾನಿಯಾಗಿದೆ. ಪರಿಣಾಮವಾಗಿ, ಗೋಡೆಯು ಇದ್ದಕ್ಕಿದ್ದಂತೆ ಕುಸಿದಿದೆ. ಕಾರ್ಖಾನೆಯೊಂದರ ಗೋಡೆಯ ಉದ್ದಕ್ಕೂ ನಿರ್ಮಿಸಲಾದ ಹತ್ತು ಮನೆಗಳನ್ನು ಕುಸಿದಿವೆ. ಗಾಯಾಳುಗಳನ್ನು ಜೋಧ್‌ಪುರದ ಏಮ್ಸ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂದು ಮತ್ತು ಮಂಜು ದೇವಿ ಪ್ರತಾಪಗಢ ಜಿಲ್ಲೆಯವರಾಗಿದ್ದು, ಸುನಿತಾ ಕೋಟಾ ಜಿಲ್ಲೆಯವರು. ಈ ವೇಳೆ, ಕನಿಷ್ಠ ಒಂಬತ್ತು ಮಂದಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ದೊಡ್ಡ ಶಬ್ದ ಬಂದಿದ್ದರಿಂದ ನೆರೆಹೊರೆಯವರು ಎಚ್ಚರಿಸಿದ್ದಾರೆ. ಆದರೆ ಅವರಲ್ಲಿ ಮೂವರನ್ನು ಉಳಿಸಲು ಸಾಧ್ಯವಾಗಲಿಲ್ಲ.

ಪ್ರವಾಹದ ಅಬ್ಬರಕ್ಕೆ ಹಲವು ಸ್ಥಳಗಳಲ್ಲಿರುವ ಅನೇಕ ಮನೆಗಳು ಮತ್ತು ಕಟ್ಟಡಗಳು ಹಾನಿಗೊಳಗಾಗಿವೆ. ಜೋಧ್‌ಪುರ ನಗರದ ಹೊರವಲಯದಲ್ಲಿ ಸರ್ಕಾರಿ ಸ್ವಾಮ್ಯದ ಸಂಗಾರಿಯಾ ಶಾಲೆಯ ಗೋಡೆ ಕುಸಿದಿದೆ. ಭಿಲ್ ಕುಟುಂಬಕ್ಕೆ ಸೇರಿದ ಮನೆ ಜಲಾವೃತಗೊಂಡಿದ್ದರಿಂದ ಕುಸಿದು ಬಿದ್ದಿದೆ. ಒಸಿಯಾನ್ ಪೊಲೀಸ್ ಠಾಣೆ ಜಲಾವೃತಗೊಂಡ ಪರಿಣಾಮ ಕುಸಿದಿದೆ.

ಸಿಂಘಸ್ನಿ, ಲುನಿಯಲ್ಲಿ ಮಳೆಯಿಂದಾಗಿ ಗೋಡೆ ಕುಸಿದು 30 ರಿಂದ 40 ಮೇಕೆಗಳು ಸಾವನ್ನಪ್ಪಿವೆ. ಅಜ್ಮೀರ್, ಜೈಸಲ್ಮೇರ್, ಟೋಂಕ್, ಬುಂದಿ, ಪಾಲಿ, ಬಲೋತ್ರಾ ಮತ್ತು ಬಾರ್ಮರ್‌ನ ಕೆಲವು ಭಾಗಗಳು ಭಾರೀ ಮಳೆಯಿಂದ ಜಲಾವೃತವಾಗಿವೆ. ಮುಂಜಾಗ್ರತಾ ಕ್ರಮವಾಗಿ ಬಹುತೇಕ ಕಡೆ ಶಾಲೆಗಳನ್ನು ಮುಚ್ಚಲಾಗಿದೆ. ಅಜ್ಮೀರ್‌ನಲ್ಲಿ ಆಗಸ್ಟ್ 5 ಮತ್ತು 6 ರಂದು ಎರಡು ದಿನಗಳ ಕಾಲ ಶಾಲೆಗಳನ್ನು ಮುಚ್ಚಲಾಗುವುದು ಎಂದು ಅಲ್ಲಿನ ಜಿಲ್ಲಾಡಳಿತ ಘೋಷಿಸಿದೆ.

ಇದನ್ನೂ ಓದಿ:ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಎರಡು ಮನೆ ಕುಸಿದು ಒಬ್ಬ ಸಾವು, 5 ಮಂದಿಯ ರಕ್ಷಣೆ - 2 Houses Collapse Near Kashi Temple

ABOUT THE AUTHOR

...view details