ETV Bharat / bharat

ರಾಮೋಜಿ ರಾವ್ ನಮ್ಮೆಲ್ಲರ ಭವಿಷ್ಯ ರೂಪಿಸಿದ ಕನಸುಗಾರ: ಇಂದು ಅವರ ಜನುಮದಿನ - RAMOJI RAO

ಇಂದು ರಾಮೋಜಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ರಾಮೋಜಿ ರಾವ್ ಅವರ ಜನ್ಮದಿನ. ಈ ನಿಮಿತ್ತ "ಈನಾಡು" ಪತ್ರಿಕೆಯ ಸಂಪಾದಕರಾದ ಮನುಕೊಂಡ ನಾಗೇಶ್ವರ ರಾವ್ ಅವರ ಲೇಖನ ಇಲ್ಲಿದೆ.

Ramoji Rao Garu Birth Anniversary
ರಾಮೋಜಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ರಾಮೋಜಿ ರಾವ್ (ETV Bharat)
author img

By ETV Bharat Karnataka Team

Published : Nov 16, 2024, 3:22 PM IST

"ನಾವು ಮುಕ್ತ, ನಿಷ್ಪಕ್ಷಪಾತ ಮತ್ತು ನೈತಿಕ ಪತ್ರಿಕೋದ್ಯಮಕ್ಕೆ ಬದ್ಧರಾಗಿದ್ದೇವೆ", ಇದನ್ನು ನಮ್ಮ ದೇಶದ ಪ್ರತಿಯೊಂದು ದಿನಪತ್ರಿಕೆಗಳು ಇಂದು ತಮ್ಮ ಧ್ಯೇಯವಾಕ್ಯವೆಂದು ಜಾಹೀರಾತು ಪ್ರಕಟಿಸಿವೆ. ಕಾರಣ ಇಂದು ರಾಷ್ಟ್ರೀಯ ಪತ್ರಿಕಾ ದಿನ. ಬಹುಶಃ, ಅನೇಕ ಮಾಧ್ಯಮ ಸಂಸ್ಥೆಗಳಿಗೆ ಇದು ಕೇವಲ ಜಾಹೀರಾತು ಆಗಿರಬಹುದು. ಆದರೆ, "ಈನಾಡು" ಬಳಗಕ್ಕೆ ಇದು ಜೀವನಾಧಾರ. 58 ವರ್ಷಗಳ ಹಿಂದೆ ಪ್ರೆಸ್ ಕೌನ್ಸಿಲ್ ಸ್ಥಾಪನೆಯಾದ (1966ರಲ್ಲಿ) ಹಿನ್ನೆಲೆಯಲ್ಲಿ ಪ್ರತಿ ವರ್ಷ ನವೆಂಬರ್ 16ರಂದು ''ರಾಷ್ಟ್ರೀಯ ಪತ್ರಿಕಾ ದಿನ''ವನ್ನಾಗಿ ಆಚರಿಸಲಾಗುತ್ತದೆ. ಪ್ರೆಸ್ ಕೌನ್ಸಿಲ್ ಅಸ್ತಿತ್ವಕ್ಕೆ ಬರುವ ಮೂವತ್ತು ವರ್ಷಗಳ ಹಿಂದೆ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಗ್ರಾಮದಲ್ಲಿ ಇದೇ ತಿಂಗಳ, ಇದೇ ದಿನ (ನವೆಂಬರ್ 16, 1936) ಇಂದಿನ ರಾಮೋಜಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ರಾಮೋಜಿ ರಾವ್ ಜನಿಸಿದ್ದರು ಎಂಬುದು ಕೂಡಾ ಬಲು ಸೋಜಿಗವೇ ಸರಿ.

ರಾಮೋಜಿ ರಾವ್ ಅವರು ಮಾಧ್ಯಮಗಳಲ್ಲಿ ಸೃಷ್ಟಿಸಿದ ಸಂಚಲನ ಈವರೆಗೂ ಮೈಲಿಗಲ್ಲುಗಳಾಗಿಯೇ ಉಳಿದುಕೊಂಡಿವೆ. ಅವುಗಳು ಇತರರಿಗೂ ಸ್ಫೋರ್ತಿ ನೀಡಿವೆ. ಅವರು ತಮ್ಮ ಕಾರ್ಯಕ್ಷೇತ್ರವನ್ನು ಕೇವಲ ಮಾಧ್ಯಮಕ್ಕೆ ಮಾತ್ರ ಸೀಮಿತಗೊಳಿಸದೇ ಮಾರ್ಗದರ್ಶಿ ಚಿಟ್ ಫಂಡ್, ಚಲನಚಿತ್ರ ನಿರ್ಮಾಣ, ಸ್ಟುಡಿಯೋ ನಿರ್ವಹಣೆ, ಪ್ರಿಯಾ ಫುಡ್ಸ್, ಪ್ರವಾಸೋದ್ಯಮ, ಹೋಟೆಲ್ಸ್, ಕರಕುಶಲ ವಸ್ತುಗಳು, ಜವಳಿ ಮತ್ತು ಶಿಕ್ಷಣ ಸೇರಿದಂತೆ ಹತ್ತು ಹಲವು ಉದ್ಯಮಗಳನ್ನು ಹುಟ್ಟುಹಾಕಿದ್ದಲ್ಲದೇ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದವರು. ಈ ವ್ಯವಹಾರಗಳಿಂದಲೇ ಸರ್ಕಾರಕ್ಕೆ ಹತ್ತಾರು ಮತ್ತು ಸಾವಿರಾರು ಕೋಟಿ ರೂಪಾಯಿಗಳಲ್ಲಿ ತೆರಿಗೆ ಮತ್ತು ಸುಂಕದ ಮೂಲಕ ರವಾನೆಯಾಗಿದೆ. ವಿಶ್ವದ ಅತಿದೊಡ್ಡ ಚಲನಚಿತ್ರ ನಗರ - ರಾಮೋಜಿ ಫಿಲ್ಮ್ ಸಿಟಿ ಸ್ಥಾಪನೆಯಾದಾಗಿನಿಂದ, ವಿಶ್ವಾದ್ಯಂತ ಎರಡೂವರೆ ಕೋಟಿ ಜನ ಫಿಲಂ ಸಿಟಿಗೆ ಭೇಟಿ ನೀಡಿದ್ದಾರೆ. ಇಂದು ಈ ದೇಶಕ್ಕೆ ರಾಮೋಜಿ ರಾವ್ ಅವರಂತಹ ಸಂಪತ್ತು ಮತ್ತು ಉದ್ಯೋಗ ಸೃಷ್ಟಿಕರ್ತರ ಅಗತ್ಯವಿದೆ. ರಾಮೋಜಿ ರಾವ್ ಒಬ್ಬ ಸಾಹಸಿ. ದೊಡ್ಡ ಕನಸುಗಳನ್ನು ಕಾಣುವ ಮತ್ತು ಅದನ್ನು ನನಸಾಗಿಸುವ ಅಸಾಧಾರಣ ಧೈರ್ಯ ಇರುವವರು ಮಾತ್ರ ಯಶಸ್ವಿಯಾಗಬಲ್ಲರು ಎಂಬ ಅವರ ಮಾತು ಅವರ ಜೀವನದಲ್ಲಿ ಅಕ್ಷರಶಃ ಸತ್ಯವಾಗಿದೆ. ಜಗತ್ತನ್ನೇ ಬದಲಿಸುವ ‘ಹಠ’ ಇದ್ದವರು ಮಾತ್ರ ಅದನ್ನು ಸಾಧಿಸಲ್ಲರು ಎಂಬ ಸ್ಟೀವ್ ಜಾಬ್ಸ್ ಮಾತು, ರಾಮೋಜಿ ರಾವ್ ಅವರಿಗೆ ನೂರಕ್ಕೆ ನೂರರಷ್ಟು ಅನ್ವಯಿಸುತ್ತದೆ. ''ಯಾರೂ ಮಾಡಲಾಗದ ಕೆಲಸವನ್ನು ಮಾಡಿದಾಗ ಮಾತ್ರ ಥ್ರಿಲ್ ಸಿಗುತ್ತದೆ'' ಎಂದು ಹೇಳಿಕೊಂಡು ಬಂದ ರಾಮೋಜಿ ರಾವ್ ತಮ್ಮ ಜೀವನದ ಉದ್ದಕ್ಕೂ ಅದನ್ನೇ ಪಾಲಿಸಿಕೊಂಡು ಬಂದವರು.

ಇಚ್ಛಾಶಕ್ತಿ: ಪತ್ರಿಕಾ ರಂಗಕ್ಕೆ ಕಾಲಿಟ್ಟ ಬಳಿಕ ವಿಶಾಖಪಟ್ಟಣಂನಲ್ಲಿ ಮೊದಲು ತೆಲುಗು ದೈನಿಕವನ್ನು ಪ್ರಾರಂಭಿಸಿದರು. ಕೇವಲ ನಾಲ್ಕು ವರ್ಷಗಳಲ್ಲಿ ಅದನ್ನು ನಂಬರ್ 1 ಪತ್ರಿಕೆಯನ್ನಾಗಿ ಮಾಡಿದರು. ಏಕಕಾಲದಲ್ಲೇ 26 ಜಿಲ್ಲೆಗಳಿಗೆ ತಮ್ಮ ಆವೃತ್ತಿ ಕೇಂದ್ರಗಳನ್ನು ವಿಸ್ತರಿಸುವ ಮೂಲಕ ಹೊಸ ಹೆಜ್ಜೆ ಇಟ್ಟರು. 1983ರಲ್ಲಿ ಅಸ್ಥಿರ ರಾಜಕೀಯ ವಾತಾವರಣ ಪರಿಸ್ಥಿತಿ ನಿರ್ಮಾಣವಾದಾಗ ಅವರು ತೆಲುಗು ದೇಶಂ ಪಕ್ಷಕ್ಕೆ ತಮ್ಮ ಬೆಂಬಲ ನೀಡಿದರು. 1984ರಲ್ಲಿ ಎನ್‌ಟಿಆರ್ ಸರ್ಕಾರವನ್ನು ಕೇಂದ್ರವು ಉರುಳಿಸಿದಾಗ, ಪ್ರಜಾಪ್ರಭುತ್ವ ಮರುಸ್ಥಾಪನಾ ಚಳವಳಿಗೆ ಉಸಿರು ನೀಡಿದರು. ಬಳಿಕ ಆಲೋಚನೆ ಹೊಳೆದಿದ್ದೇ ವಿಶ್ವವಿಖ್ಯಾತ ಫಿಲ್ಮ್ ಸಿಟಿ ನಿರ್ಮಾಣ. ತಮ್ಮ ಕಾರ್ಯಕ್ಷೇತ್ರವನ್ನು ಮುಂದುವರೆಸಿದ ಅವರು, ಭಾರತದ ಪ್ರಮುಖ ಭಾಷೆಗಳಲ್ಲಿ 'ಈಟಿವಿ' ಟೆಲಿವಿಷನ್​ ಹುಟ್ಟುಹಾಕಿದರು.

2006 ಮತ್ತು 2022ರಲ್ಲಿ ‘ಈನಾಡು’ ಸಮೂಹವನ್ನು ನಾಶಪಡಿಸುವ ಸರ್ಕಾರದ ಷಡ್ಯಂತ್ರದ ವಿರುದ್ಧ ಹೋರಾಡಿದ ರಾಮೋಜಿ ರಾವ್‌, ಅವರ ಜೀವನದಲ್ಲಿ ಎಲ್ಲವನ್ನೂ ಪಣಕ್ಕಿಡುವ ಸಾಹಸ ಪ್ರಸಂಗವೂ ನಡೆಯಿತು. ಇಚ್ಛಾಶಕ್ತಿ ಮತ್ತು ದೃಢಸಂಕಲ್ಪ ಇದ್ದರೆ ಯಾವುದೂ ಅಸಾಧ್ಯವಲ್ಲ, ಎಲ್ಲವೂ ಸಾಧ್ಯ ಎಂಬ ನಂಬಿಕೆ ಅವರದ್ದು. ಆದರೆ, ಎಷ್ಟೇ ಎತ್ತರಕ್ಕೆ ಏರಿದರೂ ಸಭ್ಯತೆ, ವಿನಯ ಆತ್ಮಗೌರವ ರೂಢಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಯಾವುದೇ ರೀತಿಯ ಅಧಿಕಾರ ದುರ್ಬಳಕೆ ಮಾಡಿಕೊಳ್ಳದೇ, ಕಮಲದ ಮೇಲಿನ ನೀರಿನ ಹನಿಯಂತೆ ಯಾವುದೇ ಪ್ರಭಾವ, ಆಮಿಷಗಳಿಗೆ ಒಳಗಾಗದ ವ್ಯಕ್ತಿತ್ವ ಅವರದ್ದು. ಒಂದೇ ವಿಷಯವನ್ನು ವಿಭಿನ್ನವಾಗಿ ನೋಡುವುದು ಮತ್ತು ವಿಭಿನ್ನವಾಗಿ ಯೋಚಿಸುವುದು ರಾಮೋಜಿ ರಾವ್ ಅವರ ವೈಶಿಷ್ಟ್ಯ. ಅವರು ಯಾವಾಗಲೂ ನಮಗೆ "ವಿಭಿನ್ನವಾಗಿ ಯೋಚಿಸಿ" ಎಂದು ಹೇಳುತ್ತಿದ್ದರು. ಅವರು ಸ್ಥಾಪಿಸಿದ ಪ್ರತಿಯೊಂದು ಉದ್ಯಮಗಳು ಮೈಲಿಗಲ್ಲುಗಳಾಗಿವೆ. ಉದ್ಯಮದ ಭವಿಷ್ಯವನ್ನು ಊಹಿಸುವ ಸಾಮರ್ಥ್ಯ ಅವರಲ್ಲಿತ್ತು. 88ರ ಹರೆಯದಲ್ಲೂ ಅವರ ಚಿಂತನೆ ನಿಂತಿರಲಿಲ್ಲ. ದೈಹಿಕವಾಗಿ ದುರ್ಬಲಗೊಂಡರೂ, ಮೆದುಳು ಪಾದರಸದಂತೆ ಕಾರ್ಯನಿರ್ವಹಿಸುತ್ತಲೇ ಇತ್ತು. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗಲೂ ಅವರ ಆಲೋಚನೆಗಳು ನಿಂತಿರಲಿಲ್ಲ.

ಸಾರ್ವಜನಿಕ ಕಲ್ಯಾಣವೇ ಸರ್ವಶ್ರೇಷ್ಠ: ಸ್ವಭಾವತಃ ನಾಸ್ತಿಕರಾದ ರಾಮೋಜಿ ರಾವ್ ಅವರಿಗೆ ಜನರೇ ದೇವರು. ಯಾವುದೇ ಕಾರ್ಯಕ್ರಮ ಆರಂಭಿಸಿದರೂ, ಏನೇ ಮಾಡಿದರೂ ಅವರು ಜನರ ದೃಷ್ಟಿಯಿಂದ ಯೋಚಿಸುತ್ತಿದ್ದರು. ವೈಯಕ್ತಿಕ ಪ್ರಯೋಜನ ಮತ್ತು ಸಾರ್ವಜನಿಕ ಕಲ್ಯಾಣ ಎಂಬ ವಿಷಯ ಬಂದಾಗ ಅವರು ಎರಡನೆಯದ್ದನ್ನು ಆಯ್ಕೆ ಮಾಡಿಕೊಂಡವರು. ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಾಗ, ಅಪಹಾಸ್ಯಕ್ಕೆ ಒಳಗಾದಾಗ ಸಿಟ್ಟಿಗೆದ್ದು ತನ್ನ ಮಾಧ್ಯಮವನ್ನೇ ಜನರ ಕೈಯಲ್ಲಿ ಕೊಟ್ಟು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದರು. ಓದುಗ ವರ್ಗವಿದೆ ಎಂಬ ವೃತ್ತಿಪರ ಬದ್ಧತೆಯನ್ನು ಅವರು ಯಾವತ್ತೂ ಬಿಡಲಿಲ್ಲ. ವಿಶ್ವಾಸಾರ್ಹತೆಯನ್ನು ಜೀವದಂತೆ ಕಾಪಾಡಿಕೊಂಡು ಬಂದವರು.

ಜನರು ಆಪತ್ತಿನಲ್ಲಿದ್ದಾಗ ದತ್ತಿ ಕಾರ್ಯಕ್ರಮಗಳ ಮೂಲಕ ಅವರ ಪರವಾಗಿ ನಿಂತರು. ‘ಈನಾಡು’ ಆರಂಭದ ದಿನಗಳಲ್ಲಿ ಅಲ್ಪಸ್ವಲ್ಪ ಲಾಭ ಗಳಿಸುತ್ತಿದ್ದಾಗ ಅದನ್ನೇ ತಮ್ಮ ಕಾರ್ಯಕ್ರಮವನ್ನಾಗಿ ಮಾಡಿಕೊಂಡರು. "ಈನಾಡು ಸಹಾಯ ನಿಧಿ"ಯ ಮೂಲಕ 40 ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹಲವು ಸೇವಾ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಅವರ ನಿಸ್ವಾರ್ಥತೆ ಸೇವೆಗೆ ಸಾಕ್ಷಿ. ನೈಸರ್ಗಿಕ ವಿಕೋಪಗಳಿಂದ ನಾಶವಾದ ಸಮುದಾಯಗಳು ಮತ್ತು ಹಳ್ಳಿಗಳನ್ನು ಪುನರ್​ ನಿರ್ಮಾಣ ಮಾಡುವಲ್ಲಿ ಅವರದ್ದು ಪ್ರಮುಖ ಪಾತ್ರ. ರಾಮೋಜಿ ಪ್ರತಿಷ್ಠಾನವೊಂದರಿಂದಲೇ ಸಾರ್ವಜನಿಕ ಕಲ್ಯಾಣಕ್ಕಾಗಿ ಸುಮಾರು 100 ಕೋಟಿ ರೂ. ಖರ್ಚು ಮಾಡಲಾಗಿದೆ. ಅವರ ನಂತರವೂ ರಾಮೋಜಿ ಸಮೂಹ ಸಂಸ್ಥೆಗಳು ಈ ವಿತರಣಾ ಕಾರ್ಯಕ್ರಮಗಳನ್ನು ಮುಂದುವರಿಸುತ್ತಿವೆ.

ತೆಲುಗು ಪ್ರೀತಿ: ರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದಿದ್ದ ರಾಮೋಜಿ ರಾವ್ ಅವರಿಗೆ ತೆಲುಗು ಜನರು ಮತ್ತು ಭಾಷೆಯ ಮೇಲಿನ ಪ್ರೀತಿ ಹೇರಳವಾಗಿತ್ತು. ತೆಲುಗು ಜನಾಂಗದ ಅಸ್ತಿತ್ವ ತೆಲುಗು ಭಾಷೆಯಿಂದ ಮಾತ್ರ ಸಾಧ್ಯವೆಂದು ಅವರು ನಂಬಿದ್ದರು. ತೆಲುಗು ಭಾಷೆಯಲ್ಲೇ ಪ್ರೀತಿಯಿಂದ ಚತುರ, ವಿಪುಲ, ತೆಲುಗು ಬೆಳಕು, ಬಾಲಭಾರತಂ ಮುಂತಾದ ನವೀನ ನಿಯತಕಾಲಿಕೆಗಳಲ್ಲಿ ಅವರ ತೆಲುಗು ಪ್ರೀತಿ ಹೆಚ್ಚು ಸ್ಪಷ್ಟವಾಗಿತ್ತು. ಎಲ್ಲಾ ಪತ್ರಿಕೆಗಳು ಮತ್ತು ಸಂಸ್ಥೆಗಳ ಹೆಸರುಗಳನ್ನು ತೆಲುಗಿನಲ್ಲಿ ನೀಡಿರುವುದು ಅವರಿಗಿದ್ದ ತೆಲುಗು ಪ್ರೀತಿಯೇ ಕಾರಣ.

ರಾಮೋಜಿ ರಾವ್ ಗ್ರೂಪ್‌ ಅಭಿವೃದ್ಧಿ: ರಾಮೋಜಿ ರಾವ್ ಅವರು ತಮ್ಮ ಜೀವಿತಾವಧಿಯಲ್ಲಿ ರಾಮೋಜಿ ಗ್ರೂಪ್‌ನ ಸಂಸ್ಥೆಗಳನ್ನು ಎತ್ತರಕ್ಕೆ ಕೊಂಡೊಯ್ದರು. ಸಂಬಂಧವಿಲ್ಲದ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಅವರು ಎರಡೂ ತುದಿಗಳಲ್ಲಿ ಜೀವನದ ಮೇಣದಬತ್ತಿಯನ್ನು ಬೆಳಗಿಸಿದರು. ಜೀವನದ ಉದ್ದಕ್ಕೂ ಪ್ರತಿದಿನ ಮಿಸ್ ಮಾಡದೇ 14-16 ಗಂಟೆಗಳ ಕೆಲಸ ಮಾಡಿಕೊಂಡು ಬಂದರು. ದಿನಪತ್ರಿಕೆ ನಿರ್ವಹಿಸುವುದು ಕಷ್ಟದ ಕೆಲಸ ಎಂದು ಅರಿತಿದ್ದರು. ಹಾಗಾಗಿ ಪ್ರತಿ ಕ್ಷಣವೂ ಎಚ್ಚರದಿಂದ ಇರುತ್ತಿದ್ದರು. ಅದಕ್ಕಾಗಿಯೇ ಅವರು ಎಲ್ಲಾ ಸಂಪನ್ಮೂಲ ಮತ್ತು ಅವಕಾಶಗಳ ಹೊರತಾಗಿಯೂ ಅನೇಕ ದೇಶಗಳು ಮತ್ತು ಸ್ಥಳಗಳನ್ನು ನೋಡಲೇ ಇಲ್ಲ. 'ಕೆಲಸ.. ಕೆಲಸ.. ಕೆಲಸ.. ಶ್ರಮವೇ ನನ್ನ ಯಶಸ್ಸಿನ ಗುಟ್ಟು ಎಂದು ನಂಬಿದ್ದರು. ''ಕೆಲಸದಲ್ಲಿಯೂ ವಿಶ್ರಾಂತಿ ಪಡೆಯುತ್ತೇನೆ. ಯಶಸ್ಸಿಗೆ ಯಾವುದೇ ಶಾರ್ಟ್‌ಕಟ್‌ಗಳಿಲ್ಲ'' ಎಂದು ಅವರು ಯಾವಾಗಲೂ ನಮಗೆ ಹೇಳುತ್ತಿದ್ದರು.

ಬದುಕಿರುವಾಗಲೇ ಪರ್ಯಾಯವನ್ನು ತೋರುವವರೇ ನಿಜವಾದ ನಾಯಕರು ಎಂದು ರಾಮೋಜಿ ರಾವ್ ನಂಬಿದ್ದರು. ಹಾಗಾಗಿ ಸ್ವಪ್ರಯತ್ನದ ಮೂಲಕ ಅತ್ಯುನ್ನತ ಎತ್ತರಕ್ಕೆ ಏರಿದ ಅವರನ್ನು ಬದಲಿಸುವುದು ಅಸಾಧ್ಯವಾದರೂ, ರಾಮೋಜಿ ಸಮೂಹದ ಕಂಪನಿಗಳಿಗೆ ನಾಯಕತ್ವದ ಉತ್ತರಾಧಿಕಾರವನ್ನು ಅವರು ಇರುವಾಗಲೇ ಸ್ಥಾಪಿಸಿದ್ದರು. ಆದ್ದರಿಂದಲೇ ರಾಮೋಜಿ ರಾವ್ ಸ್ಥಾಪಿಸಿದ ಎಲ್ಲ ಸಂಸ್ಥೆಗಳು ಯಾವುದೇ ಗೊಂದಲವಿಲ್ಲದೆ ಸರಾಗವಾಗಿ ನಡೆಯುತ್ತಿವೆ. ಇಂದು ಅವರ ಹಿರಿಯ ಮೊಮ್ಮಗಳು ಸಹರಿ ಅವರ ನೇತೃತ್ವದಲ್ಲಿ ಪ್ರಿಯಾ ಫುಡ್ಸ್ ಹೊಸ ಹೆಜ್ಜೆಗಳನ್ನು ಇಡುತ್ತಿದೆ. ತಿಂಡಿಗಳೊಂದಿಗೆ ಆಹಾರ ಉತ್ಪನ್ನಗಳನ್ನು ತಯಾರಿಸುವುದು ರಾಮೋಜಿ ರಾವ್ ಅವರ ಕನಸಾಗಿತ್ತು. ಅವರ ಜನ್ಮದಿನದಂದು ಅವರ ಮೊಮ್ಮಗಳಾದ ಸಹರಿ ಅವರು ಅದನ್ನು ಮಾಡಿ ತೋರಿಸಿದ್ದಾರೆ. ‘ನಾನಿದ್ದರೂ ಇಲ್ಲದಿದ್ದರೂ ರಾಮೋಜಿ ಬಳಗ ತೆಲುಗು ರಾಷ್ಟ್ರದ ಭಾಗವಾಗಿ ಸಾರ್ವಜನಿಕರ ನೆನಪಿನಲ್ಲಿ ಉಳಿಯಬೇಕು’ ಎಂಬ ಆಶಯವನ್ನು ಪ್ರಿಯಾ ಫುಡ್ಸ್ ಮೂಲಕ ಈಡೇರಿಸಿಕೊಂಡು ಬರಲಾಗುತ್ತಿದೆ.

ಅಧಿಕಾರ ಬದಲಾವಣೆ: ‘ಅಧಿಕಾರ ಬದಲಾವಣೆ ಎಂದರೆ ಒಂದು ಪಕ್ಷ ಬಿಟ್ಟು ಇನ್ನೊಂದು ಪಕ್ಷ ಅಧಿಕಾರಕ್ಕೆ ಬರುತ್ತದೆ’ ಎಂದು ಹೇಳುತ್ತಿದ್ದ ರಾಮೋಜಿ ರಾವ್ ಅವರು, ಭ್ರಷ್ಟಾಚಾರದ ಆರೋಪಗಳನ್ನು ಮಾಡಿ ಅಧಿಕಾರಕ್ಕೆ ಬಂದವರು ಆ ಆರೋಪಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡುಬಂದರೆ ಶಿಕ್ಷೆ ವಿಧಿಸಬೇಕು. ಅಕ್ರಮವಾಗಿ ಗಳಿಸಿದ ಹಣವನ್ನು ವಸೂಲಿ ಮಾಡಬೇಕು ಎಂದು ಹೇಳುತ್ತಿದ್ದರು. ಹಾಗೆ ಮಾಡದಿದ್ದರೆ ಹೊಸದಾಗಿ ಸ್ಥಾಪಿತಗೊಂಡ ಸರ್ಕಾರ ಜನರನ್ನು ದಾರಿ ತಪ್ಪಿಸಿದಂತೆ ಎಂದು ರಾಮೋಜಿ ರಾವ್ ಗಟ್ಟಿಯಾಗಿ ಹೇಳುತ್ತಿದ್ದರು.

ಅವರ ಜೀವನವೇ ಪಠ್ಯಪುಸ್ತಕ: ರಾಮೋಜಿ ರಾವ್ ಅವರ ಸಮರ್ಪಣಾ ಮನೋಭಾವ, ಧೈರ್ಯ ಮತ್ತು ಸಾಧನೆ ಎಲ್ಲರಿಗೂ ಸ್ಫೂರ್ತಿ. ಹತ್ತು ಹಲವು ಅಡೆತಡೆಗಳನ್ನು ಅವಕಾಶಗಳನ್ನಾಗಿ, ಸವಾಲುಗಳನ್ನು ಯಶಸ್ಸಾಗಿ ಮತ್ತು ಸೋಲುಗಳನ್ನು ಗೆಲುವಿನ ಬುನಾದಿಗಳಾಗಿ ಪರಿವರ್ತಿಸುವುದನ್ನು ನಾವು ಅವರ ಜೀವನದಿಂದ ಕಲಿಯಬಹುದು. ರಾಮೋಜಿ ರಾವ್ ಅವರು ಯಾವಾಗಲೂ ತೆಲುಗು ದೇಶಕ್ಕೆ ಸ್ಫೂರ್ತಿ.

ಮುಳುಗುವ ಸೂರ್ಯ ಮುಂಜಾನೆಯ ಭರವಸೆ ನೀಡುವಂತೆ..

ಓ ಮಹಾನ್ ಕನಸುಗಾರ, ಮತ್ತೆ ಹುಟ್ಟಿ ಬಾ..

ನಮ್ಮನ್ನು ಬೆಳಕಿನ ಹಾದಿಯಲ್ಲಿ ನಡೆಸು!

ಲೇಖನ: ಮನುಕೊಂಡ ನಾಗೇಶ್ವರ ರಾವ್, "ಈನಾಡು" ಪತ್ರಿಕೆಯ ಸಂಪಾದಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.