ETV Bharat / business

ಭಾರತದ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಆಪಲ್​​​ನದ್ದೇ ಅಧಿಪತ್ಯ; ಒನ್​ಪ್ಲಸ್​ಗೆ ನಷ್ಟ; ಐಡಿಸಿ - APPLE RECORDS BIGGEST GROWTH

ಭಾರತದ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಆಪಲ್​ ಮೂರನೇ ತ್ರೈಮಾಸಿಕದಲ್ಲಿ ಹೆಚ್ಚು ಮಾರಾಟವಾದ ಮೊಬೈಲ್ ಆಗಿದೆ.

apple-records-biggest-growth-in-india-in-q3-2024-while-oneplus-loses-the-most-idc
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​)
author img

By ETV Bharat Karnataka Team

Published : Nov 16, 2024, 4:17 PM IST

ಹೈದರಾಬಾದ್​: ವರ್ಷದಿಂದ ವರ್ಷಕ್ಕೆ ಭಾರತದ ಸ್ಮಾರ್ಟ್​​ಫೋನ್​ ಮಾರ್ಕೆಟ್​​ ಶೇ 6ರಷ್ಟು ಏರಿಕೆ ಕಂಡಿದ್ದು, ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಸ್ಮಾರ್ಟ್​ಫೋನ್​ ಮಾರುಕಟ್ಟೆ ಶೇ 46 ಮಿಲಿಯನ್​ ರಫ್ತು ಹೊಂದಿದೆ. ಅಂತಾರಾಷ್ಟ್ರೀಯ ದತ್ತಾಂಶ ಕಾರ್ಪೊರೇಷನ್ ವರ್ಲ್ಡ್​​ವೈಡ್​​ ಕ್ವಾರ್ಟರ್ಲಿ ಮೊಬೈಲ್​ ಫೋನ್​ ಟ್ರಾಕರ್​ ಪ್ರಕಾರ, ಮೂರನೇ ತ್ರೈಮಾಸಿಕದಲ್ಲಿ ಆಪಲ್ (Apple)​ 4 ಮಿಲಿಯನ್​ ರಫ್ತಾಗಿದ್ದು, ದೇಶದಲ್ಲಿ ಅತಿ ಹೆಚ್ಚು ರಫ್ತಾದ ಮೊಬೈಲ್​ ಇದಾಗಿದೆ.

2024ರ ಮೂರನೇ ತ್ರೈಮಾಸಿಕದಲ್ಲಿ ಆಪಲ್​ 5.7 ರಿಂದ 8.6ರಷ್ಟು ಏರಿಕೆ ಕಂಡಿದೆ. ವರ್ಷದಿಂದ ವರ್ಷಕ್ಕೆ ಇದು 58.5ರಷ್ಟು ಬೆಳವಣಿಗೆ ಕಂಡಿದೆ. ಐಡಿಸಿ ಪ್ರಕಾರ, ಐಫೋನ್​ 15 ಮತ್ತು ಐಫೋನ್​ 13 ಅತಿ ಹೆಚ್ಚು ರಫ್ತು ಆದ ಆಪಲ್​ ಫೋನ್​ ಆಗಿದೆ. ಈ ನಡುವೆ ಒನ್​ ಪ್ಲಸ್​ ಈ ವರ್ಷ ತ್ರೈಮಾಸಿಕದಲ್ಲಿ ನಷ್ಟ ಅನುಭವಿಸಿದೆ.

ಅಂತಾರಾಷ್ಟ್ರೀಯ ದತ್ತಾಂಶ ಕಾರ್ಪೊರೇಷನ್ ವರ್ಲ್ಡ್​​ವೈಡ್​​ ಕ್ವಾಟರ್ಲಿ ಮೊಬೈಲ್​ ಫೋನ್​ ಟ್ರಾಕರ್​, ಮಾರುಕಟ್ಟೆಯ ಹಂಚಿಕೆಯಲ್ಲಿ ವಿವೋ ಶೇ 15.8ರಷ್ಟು ಪಾಲನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ಸಂಸ್ಥೆ ನೋಂದಣಿ ಮಾಡಿದಂತೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಶೇ 20ರಷ್ಟು ಏರಿಕೆಯಾಗಿದೆ.

ವಿವೋ ಬಳಿಕ ಒಪ್ಪೊ, ಸ್ಯಾಮ್​ಸಂಗ್​, ರಿಯಲ್​ಮಿ ಮತ್ತು ಕ್ಸಿಯೋಮಿ ಕ್ರಮವಾಗಿ ಮಾರುಕಟ್ಟೆಯಲ್ಲಿ ಶೇ 13.9, 12.3, 11.5 ಮತ್ತು 11.4ರಷ್ಟು ಹೊಂದಿದೆ. ವರ್ಷದಿಂದ ವರ್ಷಕ್ಕೆ ಒಪ್ಪೊ ಶೇ 47.6ರಷ್ಟು ಬೆಳವಣಿಗೆ ಕಂಡಿದೆ. ಸ್ಯಾಮ್​ಸಂಗ್​​ ಮೂರನೇ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಸ್ಯಾಮಸಂಗ್​ 16.2ರಷ್ಟು ಇಳಿಕೆ ಕಂಡಿದೆ. ಈ ನಡುವೆ ರಿಯಲ್​ಮಿ ಕೂಡ ಮಾರುಕಟ್ಟೆಯಲ್ಲಿ ಶೇ 19.4ರಷ್ಟು ನಷ್ಟ ಅನುಭವಿಸಿದೆ. ಆದರೆ ಕ್ಸಿಯೋಮಿ ಶೇ 2.7ರಷ್ಟು ಏರಿಕೆ ಕಂಡಿದೆ.

ಭಾರತದ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಆಪಲ್​ ಆರನೇ ಸ್ಥಾನದಲ್ಲಿದ್ದು ಮೂರನೇ ತ್ರೈಮಾಸಿಕದಲ್ಲಿ ಶೇ 8.6ರಷ್ಟು ಪಾಲನ್ನು ಹೊಂದಿದೆ. ನಂತರದಲ್ಲಿ ಪೊಕೊ, ಮೊಟೊರೊಲಾ, ಇಕ್ಯೂ ಮತ್ತು ಒನ್​ಪ್ಲಸ್ ಗಳು ಸ್ಥಾನ ಪಡೆದುಕೊಂಡಿವೆ.

ವರ್ಷದಿಂದ ವರ್ಷಕ್ಕೆ ಮೊಟೊರೊಲೊ ತನ್ನ ಬೆಳವಣಿಗೆಯನ್ನು ಹೆಚ್ಚಿಸಿಕೊಂಡಿದೆ. ನಂತರದಲ್ಲಿ ಐಕ್ಯೂ ಮತ್ತು ಆಪಲ್​ ಇದೆ. ಇದು ಕ್ರಮವಾಗಿ 149.5, 101.4, 58.5ರಷ್ಟಿದೆ. ಈ ಅವಧಿಯಲ್ಲಿ ಅತಿ ದೊಡ್ಡ ನಷ್ಟ ಒನ್​ಪ್ಲಸ್​ ಹೊಂದಿದೆ.

ಇದನ್ನೂ ಓದಿ: ಹೋಮ್​ವರ್ಕ್​ ಬಗ್ಗೆ ವಿದ್ಯಾರ್ಥಿ ಪ್ರಶ್ನೆ: ಛೀಮಾರಿ ಹಾಕಿದ ಎಐ ಚಾಟ್​ಬಾಟ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.