ಹೈದರಾಬಾದ್​ನ ಹಸ್ತಿನಾಪುರದಲ್ಲಿ ಮಾರ್ಗದರ್ಶಿ ಚಿಟ್​ ಫಂಡ್ 118ನೇ ಶಾಖೆ ಉದ್ಘಾಟನೆ - MARGADARSI CHIT FUND

🎬 Watch Now: Feature Video

thumbnail

By ETV Bharat Karnataka Team

Published : Nov 16, 2024, 4:05 PM IST

Updated : Nov 16, 2024, 4:39 PM IST

ಹೈದರಾಬಾದ್​: ರಾಮೋಜಿ ಗ್ರೂಪ್ ಸಂಸ್ಥಾಪಕರಾದ ದಿವಂಗತ ರಾಮೋಜಿ ರಾವ್ ಅವರ ಜನ್ಮದಿನದ ಸ್ಮರಣಾರ್ಥವಾಗಿ ಇಂದು ಮಾರ್ಗದರ್ಶಿ ಚಿಟ್​ ಫಂಡ್​ನ ಮತ್ತೊಂದು ಶಾಖೆ ಉದ್ಘಾಟನೆಯಾಗುತ್ತಿದೆ. ತೆಲಂಗಾಣದ ಹಸ್ತಿನಾಪುರದಲ್ಲಿ​ ಮಾರ್ಗದರ್ಶಿ ಚಿಟ್​ ಫಂಡ್​ನ 118ನೇ ಬ್ರ್ಯಾಂಚ್​ ಅನಾವರಣ ಮಾಡಲಾಗುತ್ತಿದೆ. ಮಾರ್ಗದರ್ಶಿ ಚಿಟ್​ ಫಂಡ್​ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ಅವರು ರಾಮೋಜಿ ಫಿಲ್ಮ್ ಸಿಟಿಯಿಂದ ವರ್ಚುಯಲ್ ಮೂಲಕ ಹಸ್ತಿನಾಪುರದ ನೂತನ ಶಾಖೆಗೆ ಚಾಲನೆ ನೀಡುತ್ತಿದ್ದಾರೆ. ರಾಮೋಜಿ ಗ್ರೂಪ್​ನ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ಮಾರ್ಗದರ್ಶಿಯು 1962ರಿಂದ ಹಣಕಾಸು ಸೇವಾ ಕ್ಷೇತ್ರದಲ್ಲಿ ತನ್ನದೇ ಆದ ವಿಶ್ವಾಸಾರ್ಹತೆ, ನಂಬಿಕೆ ಮತ್ತು ಪಾರದರ್ಶಕತೆಗೆ ಹೆಸರುವಾಸಿಯಾಗಿದೆ. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯದಲ್ಲಿ ಸಂಸ್ಥೆಯು ಹಲವಾರು ಬ್ರ್ಯಾಂಚ್​ಗಳನ್ನು ಹೊಂದಿದ್ದು, ಸಾವಿರಾರು ಗ್ರಾಹಕರನ್ನು ಆರ್ಥಿಕವಾಗಿ ಸಬಲೀಕರಣ ಮಾಡಿದೆ. ಕಳೆದ ಆರು ದಶಕಗಳಲ್ಲಿ ಮಾರ್ಗದರ್ಶಿ ಚಿಟ್​ ಫಂಡ್ ಸಾಕಷ್ಟು​ ಅಭಿವೃದ್ಧಿ ಕಂಡಿದೆ. ಈಗಾಗಲೇ 116 ಬ್ರಾಂಚ್​ಗಳಲ್ಲಿ ಲಕ್ಷಾಂತರ ಚಂದಾದಾರರಿದ್ದಾರೆ. ಸಂಸ್ಥೆಯಲ್ಲಿ 4,100 ಮಂದಿ ಉದ್ಯೋಗಿಗಳಿದ್ದು, 18 ಸಾವಿರ ಏಜೆಂಟರುಗಳು​ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಂಸ್ಥೆ ಅನೇಕರಿಗೆ ಜೀವನೋಪಾಯದ ಮೂಲಾಧಾರವಾಗಿದೆ. 
Last Updated : Nov 16, 2024, 4:39 PM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.