ಅಮ್ರೋಹ (ಉತ್ತರ ಪ್ರದೇಶ): ಜಿಲ್ಲೆಯ ಧನೂರ ಬೈಪಾಸ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಎರಡು ಚೀಲಗಳಲ್ಲಿ ಗರ್ಭಿಣಿಯೊಬ್ಬರ ಶವ ಪತ್ತೆಯಾಗಿದೆ. ಯುವತಿಯ ದೇಹವನ್ನು ಹರಿತವಾದ ಆಯುಧದಿಂದ 20 ತುಂಡುಗಳಾಗಿ ಕತ್ತರಿಸಲಾಗಿದೆ. ಬಳಿಕ ಮೃತದೇಹವನ್ನು ಎರಡು ಚೀಲಗಳಲ್ಲಿ ತುಂಬಿ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ. ಇದನ್ನು ಕಂಡ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯುವತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ದೇಹದ ತುಂಡುಗಳನ್ನು ಬಟ್ಟೆಯಲ್ಲಿ ಸುತ್ತಿ ಚೀಲದಲ್ಲಿಟ್ಟಿರುವ ಹಂತಕರು:ಖೇತಾಪುರವು ಧನೌರಾ ಬೈಪಾಸ್ ರಸ್ತೆ ಬದಿಯ ಪೊದೆಗಳಲ್ಲಿ ಎರಡು ಚೀಲ ಬಟ್ಟೆ ಬಿದ್ದಿರುವುದನ್ನು ಗ್ರಾಮಸ್ಥರು ನೋಡಿದ್ದಾರೆ. ಎರಡೂ ಚೀಲಗಳಲ್ಲಿ ಬಟ್ಟೆ ತುಂಬಿತ್ತು. ಯುವತಿಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ಬಟ್ಟೆಯೊಳಗೆ ಅವುಗಳನ್ನು ಸುತ್ತಿ ಎರಡು ಚೀಲಗಳಲ್ಲಿ ಇಟ್ಟು ಬಿಸಾಡಿ ಹೋಗಿದ್ದರು. ಈ ಬಗ್ಗೆ ದಾರಿಯಲ್ಲಿ ಸಂಚರಿಸುತ್ತಿದ್ದ ಜನರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಆ ಎರಡೂ ಚೀಲಗಳನ್ನು ಪರಿಶೀಲಿಸಿದರು. ಒಂದು ಚೀಲದಲ್ಲಿ ಮೃತ ಯುವತಿಯ ತಲೆಯಿಂದ ಸೊಂಟದವರೆಗೆ ತುಂಡಾದ ಭಾಗಗಳನ್ನು ಇಡಲಾಗಿದೆ. ಇದನ್ನು ಗಮನಿಸಿದಾಗ ಯುವತಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಆದರೆ ಎರಡನೇ ಬ್ಯಾಗ್‌ನಲ್ಲಿ ಮೃತದೇಹದ ಉಳಿದ ಭಾಗಗಳನ್ನು ಇಟ್ಟಿರುವುದು ಕಂಡುಬಂದಿದೆ.