ಕರ್ನಾಟಕ

karnataka

ETV Bharat / bharat

ಹೇಗೆ ಸಾಗಿದೆ ಮಹಾ ಕುಂಭ ಮೇಳದ ಸಿದ್ಧತೆ?: 8 ಅಧಿಕಾರಿಗಳಿಂದ ಮಾಹಿತಿ ಪಡೆದ ಪ್ರಧಾನಿ - PRAYAGRAJ MAHA KUMBH

ಮಹಾ ಕುಂಭ ಮೇಳದಲ್ಲಿ ಯಾವುದೇ ಅಡಚಣೆಯುಂಟಾಗದಂತೆ ನಡೆಸಲು 8 ಮುಖ್ಯ ಅಧಿಕಾರಿಗಳು ಜವಾಬ್ದಾರಿವಹಿಸಿದ್ದು, ಅದರಲ್ಲಿ ಏಳು ಮಂದಿ ಉತ್ತರ ಪ್ರದೇಶ ಅಧಿಕಾರಿಗಳಾದರೆ, ಒಬ್ಬರು ರೈಲ್ವೆ ಅಧಿಕಾರಿಗಳಾಗಿದ್ದಾರೆ.

prayagraj-maha-kumbh-2025-how-are-preparations-for-fair-going-on-these-7-officers-yogi-government-told-pm-modi
ಮಹಾ ಕುಂಭಮೇಳ ಕುರಿತು ವಿವರಪಡೆದ ಪ್ರಧಾನಿ ನರೇಂದ್ರ ಮೋದಿ (ಈಟಿವಿ ಭಾರತ್​)

By ETV Bharat Karnataka Team

Published : Dec 14, 2024, 11:34 AM IST

ಪ್ರಯಾಗ್​ರಾಜ್​, ಉತ್ತರಪ್ರದೇಶ: 2025ರ ಜನವರಿ 13ರಿಂದ ಉತ್ತರ ಪ್ರದೇಶದಲ್ಲಿ ಮಹಾಕುಂಭ ಮೇಳ ಆರಂಭವಾಗುತ್ತಿದ್ದು, ಅದಕ್ಕೂ ಮೊದಲೇ ಸಂಗಮ ನಗರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ಸರಾಗವಾಗಿ ನಡೆಸುವ ಸಂಬಂಧ ಕೈಗೊಂಡಿರುವ ಸಿದ್ಧತೆ ಮತ್ತು ಕಾರ್ಯ ಯೋಜನೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮಹಾ ಕುಂಭ ಮೇಳದಲ್ಲಿ ಯಾವುದೇ ಅಡಚಣೆಯಂಟಾಗದಂತೆ ನಡೆಸಲು 8 ಮುಖ್ಯ ಅಧಿಕಾರಿಗಳು ಜವಾಬ್ದಾರಿವಹಿಸಿದ್ದು, ಅದರಲ್ಲಿ ಏಳು ಮಂದಿ ಉತ್ತರ ಪ್ರದೇಶ ಅಧಿಕಾರಿಗಳಾದರೆ, ಒಬ್ಬರು ರೈಲ್ವೆ ಅಧಿಕಾರಿಗಳಾಗಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಮತ್ತು ರಾಜ್ಯಪಾಲರೊಂದಿಗೆ ಮಹಾ ಕುಂಭಮೇಳದ ಪ್ರದರ್ಶನಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು, ಸರ್ಕಾರದ ಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. 8 ಅಧಿಕಾರಿಗಳು ವಿವಿಧ ಇಲಾಖೆಗಳ ಉಸ್ತುವಾರಿ ವಹಿಸಿದ್ದು, ಫೋಟೋಗ್ರಾಫ್​ ಮೂಲಕ ಈ ಕುರಿತು ಮಾಹಿತಿ ನೀಡಿದರು. ಭಕ್ತರ ಸಂಖ್ಯೆ ಭಾರಿ ಮಟ್ಟದಲ್ಲಿರುವ ಹಿನ್ನೆಲೆ ಅವರ ಭದ್ರತೆ ಮತ್ತು ಶುಚಿತ್ವ ಹಾಗೂ ಸೌಲಭ್ಯಕ್ಕೆ ಕೈಕೊಂಡ ಕ್ರಮಗಳ ಕುರಿತು ಕೂಡ ಪ್ರಧಾನಿ ಕೇಳಿ ಮಾಹಿತಿ ಪಡೆದರು.

ಪ್ರಧಾನಿಗೆ ವಿವರಣೆ ನೀಡಿದ ಮುಖ್ಯ ಕಾರ್ಯದರ್ಶಿ:ಮುಖ್ಯ ಕಾರ್ಯದರ್ಶಿ ಮನೋಜ್​ ಸಿಂಗ್​ 45 ದಿನಗಳ ಈ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ತಿಳಿಸಿದರು. ಮೊದಲಿಗೆ ಮುಖ್ಯ ಕಾರ್ಯದರ್ಶಿ ಮಹಾ ಕುಂಭ ಮೇಳದ ಸರ್ಕಾರಿ ಸಿದ್ಧತೆ ಕುರಿತು ಪ್ರಧಾನಿಗೆ ವಿವರವಾಗಿ ತಿಳಿಸಿದರು. ಸಂಗಮನದಲ್ಲಿ ಜನರು ಪವಿತ್ರ ಸ್ನಾನ ನಡೆಸಲು ಕೈಗೊಂಡ ಕ್ರಮದ ಕುರಿತು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ಪ್ರಧಾನ​ ಕಾರ್ಯದರ್ಶಿ ಮುಖೇಶ್​ ಮೆಶ್ರಮ್​, ಪ್ರವಾಸೋದ್ಯಮ ಕುರಿತ ಯೋಜನಾಭಿವೃದ್ಧಿಗಳ ಕುರಿತು ಮಾಹಿತಿ ತಿಳಿಸಿದರು. ಇವರ ಬಳಿಕ ನಗರ ಅಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಅಮರಜಿತ್​ ಅಭಿಜಿತ್​, ತಮ್ಮ ವಿಭಾಗದಲ್ಲಿ ಇವರೆಗೆ ನಡೆದಿರುವ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿಕೊಟ್ಟ ಅಜಯ್​ ಚೌಹಾಣ್​​:ಲೋಪಕೋಪಯೋಗಿ ಕಾರ್ಯದರ್ಶಿ ಅಜಯ್​ ಚೌಹಾಣ್​​ ಕೂಡ ಇಲ್ಲಿವರೆಗೆ ಸಾಗಿರುವ ಮತ್ತು ಸಾಗಬೇಕಾಗಿರುವ ಕಾರ್ಯದ ಕುರಿತು ತಿಳಿಸಿದರು. ಪ್ರಯಾಗ್​ರಾಜ್​ ವಿಭಾಗದ ಆಯುಕ್ತ ವಿಜಯ್​ ವಿಶ್ವಾಸ್​ ಪಂತ್​ ಕೂಡ ಹೊಸ ಯೋಜನೆ, ಶುದ್ಧತೆ, ಸೌಲಭ್ಯದ ಕುರಿತು ಮಾಹಿತಿ ನೀಡಿದರು.

ಇದಾದ ಬಳಿಕ ಮಹಾ ಕುಂಭ ಮೇಳದ ವಿಶೇಷ ಕಾರ್ಯದರ್ಶಿ ಅಧಿಕಾರಿ ಅಕಾಂಕ್ಷ್​​ ರಾಣಾ, ಪ್ರಯಾಗ್​​ರಾಜ್​ ಮೇಳ ಪ್ರಾಧಿಕಾರ ಮಹಾ ಕುಂಭಮೇಳದ ಶುಚಿತ್ವಕ್ಕೆ ಕೈಗೊಂಡ ಯೋಜನೆ ಕುರಿತು, ಹಾಗೇ ಭಕ್ತರಿಗೆ ಸುಲಭವಾಗಿ ಮಾಹಿತಿ ಅರಿಯಲು ನೀಡಲಾಗಿರುವ ಮಾಹಿತಿ ಕುರಿತು ವಿವರ ನೀಡಿದರು.

ಪ್ರಯಾಗ್​ರಾಜ್​ ವಲಯ ಎಡಿಜಿಪಿ ಭಾನು ಭಾಸ್ಕರ್​, ಭಕ್ತರ ಸುರಕ್ಷತೆಗೆ ನಡೆಸಿರುವ ಕುರಿತು ಮಾಹಿತಿ ನೀಡಿದರೆ, ಎಡಿಜಿಪಿ ವಲಯದ ಅಧಿಕಾರಿಗಳು ಯಾವುದೇ ತುರ್ತು ಸ್ಥಿತಿ ಎದುರಿಸಲು ಕೈಗೊಂಡಿರುವ ಪೊಲೀಸ್​ ಸಿದ್ಧತೆ ಕುರಿತು ವಿವರಿಸಿದರು.

ಅಂತಿಮವಾಗಿ ರೈಲ್ವೆ ಬೋರ್ಡ್​ ಅಧ್ಯಕ್ಷ ಸತೀಶ್​ ಕುಮಾರ್​, ಮಹಾ ಕುಂಭ ಮೇಳ ಗಮನದಲ್ಲಿರಿಸಿಕೊಂಡ ರೈಲ್ವೆ ಸಚಿವಾಲಯ ಭಕ್ತರಿಗೆ ಒದಗಿಸಿರುವ ಎಲ್ಲ ಸೌಲಭ್ಯ ಕುರಿತು ವಿವರಿಸಿದರು. ಅಧಿಕಾರಿಗಳ ಜೊತೆ ಪ್ರಧಾನಿ ಸಂವಹನದ ವೇಳೆ ರಾಜ್ಯಪಾಲರಾದ ಆನಂದಿ ಬೇನ್​, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಡಿಸಿಎಂ ಕೇಶವ್​ ಪ್ರಸಾದ್​ ಮೌರ್ಯ, ಬ್ರಿಜೇಶ್​ ಪಠಾಕ್​ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ: ಮಹಾ ಕುಂಭ ಮೇಳಕ್ಕೆ 'ವಿಶೇಷ ನ್ಯಾವಿಗೇಷನ್ ಸಿಸ್ಟಂ​' ಅಭಿವೃದ್ಧಿಪಡಿಸುತ್ತಿದೆ ಗೂಗಲ್: ಭಕ್ತರಿಗೆ ಹಲವು ಪ್ರಯೋಜನ

ABOUT THE AUTHOR

...view details