ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಬೆಂಗಾವಲು ವಾಹನ ತಡೆದ ಪೊಲೀಸರು - RAHUL GANDHI PRIYANKA GANDHI

ಉತ್ತರ ಪ್ರದೇಶದ ಸಂಭಾಲ್​ಗೆ ತೆರಳುತ್ತಿದ್ದ ರಾಹುಲ್​ ಗಾಂಧಿ ಮತ್ತು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬೆಂಗಾವಲು ವಾಹನವನ್ನು ದೆಹಲಿಯ ಘಾಜಿಪುರ ಗಡಿಯಲ್ಲಿ ಪೊಲೀಸರು ಸುತ್ತಲೂ ಬ್ಯಾರಿಕೇಡ್‌ ಹಾಕಿ ತಡೆ ಹಿಡಿದರು.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಬೆಂಗಾವಲು ವಾಹನ ತಡೆ ಹಿಡಿದ ಪೊಲೀಸರು!
ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಬೆಂಗಾವಲು ವಾಹನ ತಡೆ ಹಿಡಿದ ಪೊಲೀಸರು! (ETV Bharat)

By ETV Bharat Karnataka Team

Published : Dec 4, 2024, 1:30 PM IST

ನವದೆಹಲಿ:ಲೋಕಸಭೆವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಮತ್ತು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬೆಂಗಾವಲು ವಾಹನವನ್ನು ಘಾಜಿಪುರ ಗಡಿಯಲ್ಲಿ ತಡೆಹಿಡಿಯಲಾಗಿದೆ. ಇಬ್ಬರೂ ನವದೆಹಲಿಯಿಂದ ಉತ್ತರ ಪ್ರದೇಶದ ಸಂಭಾಲ್​ಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವರನ್ನು ಘಾಜಿಪುರ ಗಡಿಯ ಬಳಿ ನಿಲ್ಲಿಸಲಾಯಿತು.

ಬೆಂಗಾವಲು ಪಡೆಯನ್ನು ತಡೆಯಲು ಪೊಲೀಸರು ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಿದರು. ಬೆಂಗಾವಲು ಪಡೆಯನ್ನು ತಡೆಹಿಡಿದ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆಯಿತು. ಸಂಭಾಲ್​ಗೆ ರಾಹುಲ್​ ಗಾಂಧಿ ಅವರ ಉದ್ದೇಶಿತ ಭೇಟಿ ಇರುವುದರಿಂದ ಈಗಾಗಲೇ ಉತ್ತರಪ್ರದೇಶದ ಗೇಟ್​ನಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್​ ಪಡೆಗಳನ್ನು ನಿಯೋಜಿಸಲಾಗಿದೆ, ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.

ಗಡಿಯಲ್ಲಿ ತಪಾಸಣೆ ನಂತರ ವಾಹನಗಳನ್ನು ಮುಂದೆ ಹೋಗಲು ಬಿಡಲಾಗುತ್ತಿದೆ. ಪ್ರಸ್ತುತ, ದೆಹಲಿಯಿಂದ ಗಾಜಿಯಾಬಾದ್‌ಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 9ರ ಎಲ್ಲಾ ಲೇನ್‌ಗಳಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದೆ. ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿ ಮೀರತ್ ಎಕ್ಸ್ ಪ್ರೆಸ್ ವೇ ತಲುಪಿದ್ದಾರೆ.

ಈ ಎಲ್ಲಾ ಹಿನ್ನೆಲೆ ಗಂಟೆಗಟ್ಟಲೆ ಟ್ರಾಫಿಕ್​ ಜಂಜಾಟದಲ್ಲಿ ಪ್ರಯಾಣಿಕರು ಸಿಲುಕಿದ್ದು ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಕುರಿತು ಇಂದಿರಾಪುರಂ ಎಸಿಪಿ ಸ್ವತಂತ್ರಕುಮಾರ್​ ಸಿಂಗ್​ ಅವರನ್ನು ಭೇಟಿ ಮಾಡಿದಾಗ ಸಾರ್ವಜನಿಕರ ಅನುಕೂಲಕ್ಕಾಗಿ ಸಾಕಷ್ಟು ಬಂದೋಬಸ್ತ್ ಮಾಡಲಾಗಿದೆ. ಸಂಚಾರ ಸುಗಮವಾಗಿಸಲು ಪೊಲೀಸ್ ಸಿಬ್ಬಂದಿ ನಿರಂತರ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸುಖಬೀರ್​ ಸಿಂಗ್​ ಬಾದಲ್ ಮೇಲೆ ಗುಂಡು ಹಾರಿಸಲು ಯತ್ನಿಸಿದವನ ಮಾಹಿತಿ ಪತ್ತೆ: ಯಾರು ಈ ನರೇನ್​ ಸಿಂಗ್​ ಚೌರಾ?

ABOUT THE AUTHOR

...view details