ಮೊರಾನ್ (ಅಸ್ಸೋಂ):ಲಾಹೋವಲ್ನ ರಂಗಪುರಿಯ ಎಂಬಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ. ಪೊಲೀಸ್ ಅಧಿಕಾರಿಯೊಬ್ಬ ಮಹಿಳೆಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಬಳಿಕ ತಾನು ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅನುಪಮ್ ಗೋವಾಲಾ ಎಂಬುವರು ಆತ್ಮಹತ್ಯೆಗೆ ಶರಣಾದ ನಮ್ರೂಪ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿಯಾಗಿದ್ದಾರೆ. ಶುಕ್ರವಾರ ರಾತ್ರಿ ಬಿಷ್ಣುಪ್ರಿಯಾ ಲಹಾನ್ ಗೊಗೊಯ್ ಎಂಬ ಮಹಿಳೆ ಮೇಲೆ ಅನುಪಮ್ ಗೋವಾಲಾ ಅವರು, ತಮ್ಮ ಸರ್ವೀಸ್ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಅಸ್ಸೋಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾದೇ ಆಕೆ ಸಾವನ್ನಪ್ಪಿದ್ದಾರೆ. ಲಾಹೋವಲ್ನ ರಂಗಪುರಿಯ ಬಿಪುಲ್ ಗೊಗೊಯ್ ಎಂಬ ವ್ಯಕ್ತಿಯ ಮನೆಯಲ್ಲಿ ಈ ಘಟನೆ ನಡೆದಿದೆ.
ಮೃತ ಪೊಲೀಸ್ ಅಧಿಕಾರಿ ಅನುಪಮ್ ಗೋವಾಲಾ ಅವರ ಮನೆ ಬೊಕಾಖಾಟ್ನ ಕಾಕೋಸಾಂಗ್ ಬಳಿ ಇದೆ ಎಂದು ಹೇಳಲಾಗುತ್ತದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ. ನಮ್ರೂಪ್ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಅಧಿಕಾರಿ ಲಾಹೋವಲ್ನ ರಂಗಪುರಿ ಪ್ರದೇಶದಲ್ಲಿ ಬಂದು ಈ ಕೃತ್ಯ ಏಕೆ ಎಸಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.