ETV Bharat / bharat

ಸೈಬರ್​ ಕ್ರೈಂ ಅಪರಾಧಗಳಲ್ಲಿ ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರವೇ ಟಾಪ್​: ರಾಜ್ಯದಲ್ಲಿ ಅರೆಸ್ಟ್​ ಆಗಿದ್ದು 3, ಶಿಕ್ಷೆ ಶೂನ್ಯ! - CYBERCRIME CASES TOP3 STATES

ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಗಮನಾರ್ಹವಾಗಿ ಸೈಬರ್ ಅಪರಾಧಿಗಳು ಕಂಡು ಬರುತ್ತಿವೆ. ಈ ಬಗ್ಗೆ ಸರ್ಕಾರಗಳು ಕಠಿಣ ಕಾನೂನು ಜಾರಿ ಮಾಡಿದರೂ ಶಿಕ್ಷೆಯ ಪ್ರಮಾಣವು ತುಂಬಾ ಕಡಿಮೆಯಾಗಿದೆ.

ಸೈಬರ್​ ಕ್ರೈಂ:  ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲೇ ಗರಿಷ್ಠ ಸೈಬರ್​ ಅಪರಾಧಗಳು ದಾಖಲು: ಕಾರಣ ಏನು ಗೊತ್ತಾ?
ಸೈಬರ್​ ಕ್ರೈಂ: ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲೇ ಗರಿಷ್ಠ ಸೈಬರ್​ ಅಪರಾಧಗಳು ದಾಖಲು: ಕಾರಣ ಏನು ಗೊತ್ತಾ? (ETV Bharat)
author img

By ETV Bharat Karnataka Team

Published : Nov 28, 2024, 9:44 PM IST

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಗರಿಷ್ಠ ಸಂಖ್ಯೆಯ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ದೇಶದ ಮೊದಲ ಮೂರು ಟಾಪ್​ 3 ರಾಜ್ಯಗಳಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಸೈಬರ್ ಅಪರಾಧಗಳನ್ನು ತಡೆಯಲು ಕೇಂದ್ರ ಸರ್ಕಾರ 13 ಅಂಶಗಳ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ.

ಗುರುವಾರ ಸಂಸತ್ತಿನಲ್ಲಿ ಮಂಡಿಸಿದ ಸರ್ಕಾರಿ ಅಂಕಿ - ಅಂಶಗಳ ಪ್ರಕಾರ, 2020 ಮತ್ತು 22 ರ ನಡುವೆ ತೆಲಂಗಾಣದಲ್ಲಿ 30,596 ಪ್ರಕರಣಗಳು ದಾಖಲಾಗುವ ಮೂಲಕ ಗರಿಷ್ಠ ಸೈಬರ್ ಕ್ರೈಮ್ ಪ್ರಕರಣಗಳಿಗೆ ಸಾಕ್ಷಿಯಾದ ಮೊದಲ ರಾಜ್ಯವಾಗಿದೆ. ಅದೇ ಅವಧಿಯಲ್ಲಿ ಕರ್ನಾಟಕದಲ್ಲೂ ಸುಮಾರು 31,433 ಪ್ರಕರಣಗಳು ದಾಖಲಾಗಿವೆ. ಇನ್ನು ಮಹಾರಾಷ್ಟ್ರದಲ್ಲಿ 19,307 ಸೈಬರ್ ಅಪರಾಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಸಾವಿರಾರು ಪ್ರಕರಣಗಳು ದಾಖಲು, ಶಿಕ್ಷೆಯಾಗಿದ್ದು ಮಾತ್ರ ಬೆರಳೆಣಿಕೆಯಷ್ಟು ಮಾತ್ರ: ಈ ಅಪರಾಧದಲ್ಲಿ ಭಾಗಿಯಾಗಿರುವ ಜನರ ವಿರುದ್ಧ ಕಾನೂನು ಜಾರಿ ಸಂಸ್ಥೆಗಳು ಹಲವಾರು ಪ್ರಕರಣಗಳನ್ನು ದಾಖಲಿಸಿದ್ದರೂ, ಶಿಕ್ಷೆಯ ಪ್ರಮಾಣ ಮಾತ್ರ ಭಾರಿ ಸಂಖ್ಯೆಯಲ್ಲಿ ಕಡಿಮೆ ಎಂಬುದನ್ನು ಕೇಂದ್ರ ಸರ್ಕಾರದ ಅಂಕಿ- ಅಂಶಗಳು ತೋರಿಸುತ್ತಿವೆ.

ಕರ್ನಾಟಕದಲ್ಲಿ ಕೇವಲ 3 ಮಂದಿ ಅರೆಸ್ಟ್​, ಶಿಕ್ಷೆ ಪ್ರಮಾಣ ಶೂನ್ಯ: ಮಹಾರಾಷ್ಟ್ರವು 2020 ಮತ್ತು 23ರ ನಡುವೆ 5,912 ಪ್ರಕರಣಗಳನ್ನು ದಾಖಲಿಸಿದೆ. ಆದರೆ ಕೇವಲ 45 ಜನರಿಗೆ ಶಿಕ್ಷೆ ವಿಧಿಸಲಾಗಿದೆ. ತೆಲಂಗಾಣದಲ್ಲಿ 19,900 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದರೆ, 253 ಮಂದಿಗೆ ಮಾತ್ರ ಶಿಕ್ಷೆಯಾಗಿದೆ. ಮತ್ತೊಂದೆಡೆ, ಕರ್ನಾಟಕದಲ್ಲಿ ಕೇವಲ ಆರು ಪ್ರಕರಣಗಳು ಮಾತ್ರವೇ ದಾಖಲಾಗಿವೆ. ಆದರೆ ಯಾವುದೇ ಕೇಸ್​​ನಲ್ಲೂ ಶಿಕ್ಷೆ ಆಗಿಲ್ಲ. ಹಾಗಾಗಿ ಶಿಕ್ಷೆಯ ಪ್ರಮಾಣ ಶೂನ್ಯವಾಗಿದೆ. ಮಹಾರಾಷ್ಟ್ರದಲ್ಲಿ 1,204 ಮಂದಿಯನ್ನು ಬಂಧಿಸಲಾಗಿದ್ದು, ತೆಲಂಗಾಣದಲ್ಲಿ 3,055 ಜನರನ್ನು ಅರೆಸ್ಟ್​ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಸೈಬರ್ ಅಪರಾಧದಲ್ಲಿ ಭಾಗಿಯಾಗಿರುವ ಮೂವರನ್ನು ಮಾತ್ರ ಬಂಧಿಸಲಾಗಿದೆ.

ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಮತ್ತು ಮ್ಯಾನೇಜ್‌ಮೆಂಟ್ ಸಿಸ್ಟಮ್: ಹಣಕಾಸಿನ ವಂಚನೆಗಳ ತಕ್ಷಣದ ವರದಿಗಾಗಿ ಮತ್ತು ವಂಚಕರು ಹಣವನ್ನು ಕಸಿದುಕೊಳ್ಳುವುದನ್ನು ನಿಲ್ಲಿಸಲು I4C ಅಡಿಯಲ್ಲಿ ‘ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಮತ್ತು ಮ್ಯಾನೇಜ್‌ಮೆಂಟ್ ಸಿಸ್ಟಮ್’ ಅನ್ನು 2021 ರಲ್ಲಿ ಪ್ರಾರಂಭಿಸಲಾಗಿದೆ. ಸಂಸತ್ತಿನಲ್ಲಿ ಪ್ರಸ್ತುತಪಡಿಸಿದ ಸರ್ಕಾರಿ ಅಂಕಿ- ಅಂಶಗಳ ಪ್ರಕಾರ, ಇಲ್ಲಿಯವರೆಗೆ 9.94 ಲಕ್ಷಕ್ಕೂ ಹೆಚ್ಚು ದೂರುಗಳಲ್ಲಿ 3,431 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆಯಲಾಗಿದೆ.

ಸೈಬರ್ ಕ್ರೈಮ್ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರದ ಉಪಕ್ರಮದ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ , ‘ಪೊಲೀಸ್’ ಮತ್ತು ‘ಸಾರ್ವಜನಿಕ ಸುವ್ಯವಸ್ಥೆ’ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತಿದೆ. ಅಂದರೆ ಅದು ಸಂವಿಧಾನ ರಾಜ್ಯದ ವಿಷಯಗಳಾಗಿವೆ ಎಂದು ಹೇಳಿದ್ದಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಕಾನೂನು ಜಾರಿ ಸಂಸ್ಥೆಗಳ ಮೂಲಕ ಸೈಬರ್ ಅಪರಾಧ ಸೇರಿದಂತೆ ಅಪರಾಧಗಳ ತಡೆಗಟ್ಟುವಿಕೆ, ಪತ್ತೆ, ತನಿಖೆ ಮತ್ತು ಕಾನೂನು ಕ್ರಮಕ್ಕೆ ಪ್ರಾಥಮಿಕವಾಗಿ ಜವಾಬ್ದಾರರಾಗಿರುತ್ತಾರೆ. ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಉಪಕ್ರಮಗಳನ್ನು ತಮ್ಮ LEA ಗಳ ಸಾಮರ್ಥ್ಯ ವೃದ್ಧಿಗಾಗಿ ವಿವಿಧ ಯೋಜನೆಗಳ ಅಡಿ ಸಲಹೆಗಳು ಮತ್ತು ಹಣಕಾಸಿನ ನೆರವು ನೀಡುತ್ತದೆ ಎಂದು ಅವರು ವಿವರಿಸಿದರು.

ಟೋಲ್-ಫ್ರೀ ಸಹಾಯವಾಣಿ : ಆನ್‌ಲೈನ್ ಸೈಬರ್ ದೂರುಗಳನ್ನು ಸಲ್ಲಿಸಲು ಸಹಾಯ ಮಾಡಲು ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ '1930' ಅನ್ನು ಕಾರ್ಯಗತಗೊಳಿಸಲಾಗಿದೆ ಎಂದು ಸಚಿವರು ಇದೇ ವೇಳೆ ಸದನಕ್ಕೆ ಮಾಹಿತಿ ನೀಡಿದರು. ಸೈಬರ್ ಕ್ರೈಮ್ ತನಿಖೆ, ಫೋರೆನ್ಸಿಕ್ಸ್ ಮತ್ತು ಕಾನೂನು ಕ್ರಮದ ನಿರ್ಣಾಯಕ ಅಂಶಗಳ ಕುರಿತು ಆನ್‌ಲೈನ್ ಕೋರ್ಸ್‌ಗಳ ಮೂಲಕ ಪೊಲೀಸ್ ಅಧಿಕಾರಿಗಳು ಮತ್ತು ನ್ಯಾಯಾಂಗ ಅಧಿಕಾರಿಗಳ ಸಾಮರ್ಥ್ಯವನ್ನು ಹೆಚ್ಚಿಸಲು I4C ಅಡಿ ಬೃಹತ್ ಮುಕ್ತ ಆನ್‌ಲೈನ್ ಕೋರ್ಸ್‌ಗಳ (MOOC) ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯಗಳು ಮತ್ತು ಯುಟಿಗಳಿಂದ 98,698 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ನೋಂದಾಯಿಸಿಕೊಂಡಿದ್ದಾರೆ ಮತ್ತು 75,591 ಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ಪೋರ್ಟಲ್ ಮೂಲಕ ನೀಡಲಾಗಿದೆ ಎಂದು ಸಚಿವರು ಇದೇ ವೇಳೆ ಮಾಹಿತಿ ಒದಗಿಸಿದರು.

ಸಾಂದರ್ಭಿಕ ಅರಿವು ಮೂಡಿಸಲು ಕ್ರಮ: ಭಾರತೀಯ ಸೈಬರ್‌ಸ್ಪೇಸ್ ಮೆಟಾಡೇಟಾವನ್ನು ಸ್ಕ್ಯಾನ್ ಮಾಡುವ ಮೂಲಕ ಸೈಬರ್ ಭದ್ರತಾ ಬೆದರಿಕೆಗಳ ಸಾಂದರ್ಭಿಕ ಅರಿವು ಮೂಡಿಸಲು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್‌ಟಿ-ಇನ್) ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರವನ್ನು (ಎನ್‌ಸಿಸಿಸಿ) ಸ್ಥಾಪಿಸಿದೆ ಎಂದು ಸಚಿವರು ಸದನದಲ್ಲಿ ಮಾಹಿತಿ ಒದಗಿಸಿದರು. ಭಾರತೀಯ ಸೈಬರ್‌ಸ್ಪೇಸ್‌ನಾದ್ಯಂತ ಎಲ್ಲ ಸಂಬಂಧಿತ ಘಟಕಗಳಿಂದ ಪೂರ್ವಭಾವಿ, ತಡೆಗಟ್ಟುವ ಮತ್ತು ರಕ್ಷಣಾತ್ಮಕ ಕ್ರಮಗಳು.

ಪ್ರಮುಖ ಬ್ಯಾಂಕ್‌ಗಳು, ಹಣಕಾಸು ಮಧ್ಯವರ್ತಿಗಳು, ಪಾವತಿ ಸಂಗ್ರಾಹಕರು, ಟೆಲಿಕಾಂ ಸೇವಾ ಪೂರೈಕೆದಾರರು, ಐಟಿ ಮಧ್ಯವರ್ತಿಗಳು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಐ4ಸಿಯಲ್ಲಿ ಅತ್ಯಾಧುನಿಕ ಕೇಂದ್ರ, ಸೈಬರ್ ಫ್ರಾಡ್ ಮಿಟಿಗೇಷನ್ ಸೆಂಟರ್ (ಸಿಎಫ್‌ಎಂಸಿ) ಅನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು. ಸೈಬರ್ ಅಪರಾಧವನ್ನು ನಿಭಾಯಿಸಲು ತಕ್ಷಣದ ಕ್ರಮ ಮತ್ತು ತಡೆರಹಿತ ಸಹಕಾರಕ್ಕಾಗಿ ಕಾನೂನು ಜಾರಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುತ್ತಿವೆ.

ಇದನ್ನು ಓದಿ:ಕಾಕಿನಾಡ ಬಂದರಿನ ಮೂಲಕ ಅಕ್ಕಿ ಕಳ್ಳಸಾಗಣೆ: ಪಶ್ಚಿಮ ಆಫ್ರಿಕಾದ ಹಡಗಿನಲ್ಲಿ 640 ಟನ್​ ಪಿಡಿಎಸ್​ ರೈಸ್​ ವಶಕ್ಕೆ

ನವಜಾತ ಶಿಶುವಿಗೆ ಗಂಭೀರ ಸಮಸ್ಯೆ: ವೈದ್ಯರ ಮೇಲೆ ನಿರ್ಲಕ್ಷ್ಯ ಆರೋಪ, ತನಿಖೆಗೆ ತಂಡ ರಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.