ಕರ್ನಾಟಕ

karnataka

By ETV Bharat Karnataka Team

Published : 5 hours ago

ETV Bharat / bharat

ಗುಜರಾತ್​ ರೈಲು ವಿಧ್ವಂಸಕ ಕೃತ್ಯದ ಸಂಚು ಬಯಲು; ಸಿಬ್ಬಂದಿಗಳಿಂದಲೇ ನಡೆಯಿತು ಖತರ್ನಾಕ್​ ಪ್ಲಾನ್​! - police Detain railway employees

ದುರಂತ ತಪ್ಪಿಸಿದರು ಎಂದು ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಪಡೆಯುವ ಹಾಗೂ ಇನ್ನಿತರೆ ಸ್ವಾರ್ಥದ ಅನುಕೂಲ ಉದ್ದೇಶದಿಂದ ಈ ದುಷ್ಕೃತ್ಯ ನಡೆಸಿರುವುದು ತನಿಖೆಯಲ್ಲಿ ಬಯಲಾಗಿದೆ.

police Detain  railway employees for involving attempts to derail trains
ಹಳಿಗಳ ಮೇಲಿನ ಫಿಶ್​ ಫ್ಲೇಟ್​ ತೆಗೆದಿರುವುದು (ಐಎಎನ್​ಎಸ್​​)

ಸೂರತ್​: ಗುಜರಾತ್​ನ ಸೂರತ್​ನಲ್ಲಿ ಹಳಿಗಳ ಮೇಲಿನ ಫಿಶ್​ ಪ್ಲೇಟ್​ ಮತ್ತು ಕೀಗಳನ್ನು ಕಿತ್ತು ಹಾಕಿ ರೈಲು ಅಪಘಾತಕ್ಕೆ ಸಂಚು ರೂಪಿಸಿದ್ದ ಪ್ರಕರಣದ ಅಸಲಿ ಸತ್ಯ ಹೊರಬಿದ್ದಿದೆ. ದುಷ್ಕರ್ಮಿಗಳ ದುರುದ್ದೇಶಪೂರಿತ ಕೃತ್ಯ ಎಂದು ಅಂದಾಜಿಸಿದ್ದ ಘಟನೆ ಹಿಂದೆ ರೈಲ್ವೆ ಸಿಬ್ಬಂದಿಗಳ ಕಾರ್ಯ ಇರುವುದು ಬೆಳಕಿಗೆ ಬಂದಿದೆ.

ರೈಲ್ವೆ ಇಲಾಖೆ ಸಿಬ್ಬಂದಿಗಳಾದ ಸುಭಾಷ್​ ಪೊದಾರ್ (39), ಮನೀಷ್​ಕುಮಾರ್​ ಧಮಸ್ತ್ರಿ (28) ಮತ್ತು ಶುಭಮ್​ ಜೈಸ್ವಾಲ್ (26) ಈ ಕೃತ್ಯ ಎಸಗಿದ್ದು, ಸದ್ಯ ಇವರನ್ನು ಸೂರತ್​ ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಆರೋಪಿಗಳು ರೈಲ್ವೆ ನಿರ್ವಹಣೆ ವಿಭಾಗದಲ್ಲಿ ಟ್ರಾಕ್​ಮ್ಯಾನ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಎಸ್​ಪಿ ಹೊತೆಶ್​ ಜೊಯ್ಸರ್​ ತಿಳಿಸಿದ್ದಾರೆ.

ಆರೋಪಿಗಳ ಉದ್ದೇಶ ಮತ್ತು ಅಪರಾಧ ಕೃತ್ಯದ ಕುರಿತು ಮಾತನಾಡಿರುವ ಅಧಿಕಾರಿಗಳು, ದುರಂತ ತಪ್ಪಿಸಿದರು ಎಂದು ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಪಡೆಯುವ ಹಾಗೂ ಇನ್ನಿತರೆ ಸೌಲಭ್ಯ ಪಡೆಯುವ ಉದ್ದೇಶದಿಂದ ಈ ದುಷ್ಕೃತ್ಯ ನಡೆಸಿರುವುದು ತನಿಖೆಯಲ್ಲಿ ಬಯಲಾಗಿದೆ ಎಂದು ತಿಳಿಸಿದ್ದಾರೆ.

ಏನಿದು ಘಟನೆ:ಸೆಪ್ಟೆಂಬರ್​​ 21ರಂದು ಬೆಳಗ್ಗೆ 5.30ರ ಸುಮಾರಿಗೆ ಸೂರತ್​​ನ ಕಿಮ್​ ರೈಲ್ವೆ ನಿಲ್ದಾಣದ ಸಮೀಪದ ಹಳಿಗಳ ಎಲೆಸ್ಟಿಕ್​ ಕ್ಲಿಪ್​ ಮತ್ತು ಎರಡು ಫಿಕ್​ ಪ್ಲೇಟ್​ ಅನ್ನು ಯಾರೋ ದುಷ್ಕರ್ಮಿಗಳು ತೆಗೆದಿದ್ದಾರೆ ಎಂದು ತಿಳಿಸಿ, ಕರ್ತವ್ಯದಲ್ಲಿದ್ದ ಈ ಮೂವರು ಸ್ಟೇಷನ್​ ಮಾಸ್ಟರ್​​ಗೆ ಸುದ್ದಿ ತಲುಪಿಸಿದ್ದರು.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರಕರಣದ ತನಿಖೆಗೆ ಪೊಲೀಸರು 16 ತಂಡ ರಚಿಸಿದ್ದಾರೆ. ಅಲ್ಲದೇ, ಡ್ರೋನ್​ ಕೂಡ ಬಳಕೆ ಮಾಡಲಾಗಿದೆ. ಹಾಗೇ ಎನ್​ಐಎ, ಗುಜರಾತ್​​ನ ಭಯೋತ್ಪಾದಕ ವಿರೋಧಿ ಸ್ಕ್ವಾಡ್​ (ಎಟಿಎಸ್​) ಮತ್ತು ಇತರೆ ಸಂಸ್ಥೆಗಳು ತನಿಖೆಗೆ ಮುಂದಾಗಿತು ಎಂದು ಎಸ್​ಪಿ ಮಾಹಿತಿ ನೀಡಿದರು.

ಬಯಲಾಯ್ತು ಸಂಚಿನ ಕೃತ್ಯ: ತನಿಖೆ ಶುರು ಮಾಡಿದ ಪೊಲೀಸರು ಸುಭಾಶ್​, ಮನಿಷ್​ ಮತ್ತು ಶುಭಂ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರ ಹಾಕಿದ್ದಾರೆ. ದಿಢೀರ್​ ಪ್ರಖ್ಯಾತಿ, ಹಣ ಗಳಿಸುವ ಹಾಗೇ ರಾತ್ರಿ ಪಾಳಿ ಮುಂದುವರೆಸುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾಗಿ ಬಾಯ್ಬಿಟಿದ್ದಾರೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು ಬೆಳಗಿನ ಹೊತ್ತು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದರು. ಅಲ್ಲದೇ, ರಾತ್ರಿ ಡ್ಯೂಟಿ ಇದ್ದಾಗ ಮರುದಿನ ರಜೆ ಪಡೆಯುತ್ತಿದ್ದರು. ಇದೀಗ ಇವರ ರಾತ್ರಿ ಪಾಳಿ ಅವಧಿ ಮುಗಿಯುತ್ತ ಬಂದ ಹಿನ್ನೆಲೆ ಇದನ್ನು ಮುಂದುವರೆಸಬೇಕು ಎಂಬ ಉದ್ದೇಶಕ್ಕಾಗಿ ಈ ದುಷ್ಕೃತ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.

ಈ ಮೂವರು ಶನಿವಾರ ನಸುಕಿನಜಾವ 2.56 ರಿಂದ 4.57ರ ವರೆಗೆ ಈ ಕೃತ್ಯ ನಡೆಸಿದ್ದಾರೆ. ಅಲ್ಲದೇ, ರೈಲು ಹಳಿಗಳ ಪ್ಲೇಟ್​ ತೆಗೆಯುತ್ತಿರುವ ದೃಶ್ಯಗಳನ್ನು ಮೊಬೈಲ್​ನಲ್ಲಿ ಫೋಟೋ ತೆಗೆದುಕೊಂಡಿದ್ದಾರೆ. ತನಿಖೆ ವೇಳೆ ಬಯಲಾದ ಮತ್ತೊಂದು ಅಂಶ ಎಂದರೆ, ಇವರು ಫೋಟೋ ತೆಗೆದ ಸಮಯ ಹಾಗೂ ಈ ಕುರಿತು ಸ್ಟೇಷನ್​ ಮಾಸ್ಟರ್​ಗೆ ವಿಷಯ ಮುಟ್ಟಿಸಿದ ಸಮಯದಲ್ಲಿ ಭಾರೀ ವ್ಯತ್ಯಾಸವಿದೆ. ಜೊತೆಗೆ ಹಲವು ಫೋಟೋಗಳನ್ನು ಇವರು ಅಳಿಸಿ ಹಾಕಿರುವುದು ಗೊತ್ತಾಗಿದೆ.

ಇದನ್ನೂ ಓದಿ:ಗುಜರಾತ್​​: ರೈಲು ಹಳಿ ತಪ್ಪಿಸಲು ಮತ್ತೊಂದು ಸಂಚು, ತಪ್ಪಿದ ಅನಾಹುತ

ABOUT THE AUTHOR

...view details