ಬೆಂಗಳೂರು: ಕೊಂಕಣ್ ರೈಲ್ವೆಯಲ್ಲಿ ಖಾಲಿ ಇರುವ ತಾಂತ್ರಿಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಮೆಕಾನಿಕಲ್ ಅಥವಾ ಯೋಜನೆ ವಿಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳ ಭರ್ತಿ ನಡೆಸಲಾಗುವುದು. ವಾಕ್ ಇನ್ ಸಂದರ್ಶನದ ಮೂಲಕ ಈ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಒಟ್ಟು ಹುದ್ದೆಗಳ ಸಂಖ್ಯೆ 33
ಜೂ. ಟೆಕ್ನಿಕಲ್ ಅಸಿಸ್ಟಂಟ್ (ಮೆಕಾನಿಕಲ್) - 10
ಟೆಕ್ನಿಶಿಯನ್ (ಮೆಕಾನಿಕಲ್) - 23
ವಿದ್ಯಾರ್ಹತೆ: ಜೂ ಟೆಕ್ನಿಕಲ್ ಅಸಿಸ್ಟಂಟ್ ಹುದ್ದೆಗೆ ಅಭ್ಯರ್ಥಿಗಳು ಡಿಪ್ಲೊಮಾ ಪದವಿ ಪೂರ್ಣಗೊಳಿಸಿರಬೇಕು. ಟೆಕ್ನಿಷಿಯನ್ ಹುದ್ದೆಗೆ ಅಭ್ಯರ್ಥಿಗೆ ಐಟಿಐ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ 18 ಗರಿಷ್ಠ 35 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ವೇತನ: ಜೂ. ಟೆಕ್ನಿಕಲ್ ಅಸಿಸ್ಟಂಟ್ (ಮೆಕಾನಿಕಲ್) - 35,400 ರೂ ಮಾಸಿಕ
ಟೆಕ್ನಿಶಿಯನ್ (ಮೆಕಾನಿಕಲ್) - 25,500 ರೂ ಮಾಸಿಕ
ಆಯ್ಕೆ : ನೇರ ಸಂದರ್ಶನದಲ್ಲಿ ಗುಂಪು ಚರ್ಚೆ ಮತ್ತು ಸಂದರ್ಶನ
ವಾಕ್ ಇನ್ ನಡೆಯುವ ದಿನಾಂಕ ಮತ್ತು ಸ್ಥಳ: ಅಕ್ಟೋಬರ್ 3 ಮತ್ತು 8 ರಂದು ನೇರ ಸಂದರ್ಶನ ನಡೆಯಲಿದೆ.
ಅಭ್ಯರ್ಥಿಗಳು ಅಗತ್ಯ ದಾಖಲೆ, ಪ್ರಮಾಣ ಪತ್ರದೊಂದಿಗೆ ಈ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು. ಎಕ್ಸಿಕ್ಯೂಟಿವ್ ಕ್ಲಬ್, ಕೊಂಕಣ್ ರೈಲ್ ವಿಹಾರ್, ಕೊಂಕಣ್ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್, ಸೀವುಡ್ಸ್ ರೈಲ್ವೆ ಸ್ಟೇಷನ್ ಬಳಿ, ಸೆಕ್ಟರ್ 40, ಸೀವುಡ್ಸ್ (ಪಶ್ಚಿಮ), ನವಿ ಮುಂಬೈ.
ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು konkanrailway.com ಭೇಟಿ ನೀಡಿ.
ಇದನ್ನೂ ಓದಿ: ನಿಮ್ಮದು ಡಿಗ್ರಿ ಆಗಿದೆಯಾ? ಹಾಗಿದ್ದರೆ ರೈಲ್ವೆಯಲ್ಲಿ ಉದ್ಯೋಗಾವಕಾಶ: ಇನ್ನೇಕೆ ತಡ, ಶೀಘ್ರವೇ ಅರ್ಜಿ ಸಲ್ಲಿಸಿ!