ETV Bharat / bharat

'ಅಧಿಕಾರದಲ್ಲಿದ್ದಾಗ ಜಾತಿಗಣತಿ ನಡೆಸದ ಕಾಂಗ್ರೆಸ್​ ಮೀಸಲಾತಿ ವಿರೋಧಿ': ಮಾಯಾವತಿ ಆರೋಪ - Mayawati on reservation policy

author img

By ETV Bharat Karnataka Team

Published : 3 hours ago

ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್​ ವಿರುದ್ಧ ಬಿಎಸ್​ಪಿ ವರಿಷ್ಠೆ ಮಾಯಾವತಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಆರೋಪ
ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಆರೋಪ (IANS)

ಲಖನೌ: ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ, ಎಸ್​ಸಿ, ಎಸ್​ಟಿ ಮತ್ತು ಒಬಿಸಿ ಮೀಸಲಾತಿ ನೀತಿಯ ಬಗ್ಗೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರ ನಿಲುವು ಬೂಟಾಟಿಕೆಯಿಂದ ಕೂಡಿದ್ದು, ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಮೀಸಲಾತಿ ಕುರಿತು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಮಾಯಾವತಿ, ಒಂದು ಕಡೆ ಅವರು ಶೇಕಡಾ 50 ರಷ್ಟು ಮೀಸಲಾತಿಯನ್ನು ಬೆಂಬಲಿಸಿದರೆ, ಮತ್ತೊಂದೆಡೆ ಅವರು ಮೀಸಲಾತಿಯನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್​ನದ್ದು ದ್ವಿಮುಖ ನೀತಿ: ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಮಾಯಾವತಿ, "ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರ ಎಸ್​ಸಿ, ಎಸ್​ಟಿ, ಒಬಿಸಿ ಮೀಸಲಾತಿ ನೀತಿ ಸ್ಪಷ್ಟವಾಗಿಲ್ಲ. ಅದು ದ್ವಿಮುಖ ನೀತಿ ಮತ್ತು ಮೋಸದಿಂದ ಕೂಡಿದೆ. ತಮ್ಮ ದೇಶದಲ್ಲಿರುವಾಗ ಮತಗಳಿಗಾಗಿ ಅವರು ಮೀಸಲಾತಿಯನ್ನು ಬೆಂಬಲಿಸುತ್ತಾರೆ ಮತ್ತು ಅದನ್ನು ಶೇಕಡಾ 50 ಕ್ಕಿಂತ ಹೆಚ್ಚಿಸಬೇಕು ಎಂದು ಪ್ರತಿಪಾದಿಸುತ್ತಾರೆ. ಆದರೆ, ವಿದೇಶಕ್ಕೆ ಹೋದಾಗ ಮಾತ್ರ ಅವರು ಮೀಸಲಾತಿ ಕೊನೆಗೊಳಿಸುವ ಬಗ್ಗೆ ಮಾತನಾಡುತ್ತಾರೆ. ಜನರು ಇಂಥ ದ್ವಂದ್ವ ನೀತಿಯ ಬಗ್ಗೆ ಜಾಗರೂಕರಾಗಿರಬೇಕು." ಎಂದು ಬರೆದಿದ್ದಾರೆ.

ಒಬಿಸಿ ಮೀಸಲಾತಿ ಕುರಿತಾದ ಮಂಡಲ್ ಆಯೋಗದ ವರದಿ ಜಾರಿಗೆ ತರದಿರುವುದಕ್ಕೆ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. "ಒಬಿಸಿ ಮೀಸಲಾತಿ ಕುರಿತಾದ ಮಂಡಲ್ ಆಯೋಗದ ವರದಿಯನ್ನು ಕೇಂದ್ರದಲ್ಲಿ ಆಡಳಿತದಲ್ಲಿದ್ದ ಅವರದೇ ಸರ್ಕಾರ ಜಾರಿಗೆ ತರಲಿಲ್ಲ ಎಂಬುದು ಸತ್ಯ. ಅಲ್ಲದೇ, ಬಿಎಸ್​ಪಿಯು ಸತತ ಹೋರಾಟದ ನಂತರ ಎಸ್​ಸಿ / ಎಸ್​ಟಿಗೆ ಬಡ್ತಿ ಮೀಸಲಾತಿಗಾಗಿ ಸಂಸತ್ತಿನಲ್ಲಿ ಮಂಡಿಸಿದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಸಹ ಕಾಂಗ್ರೆಸ್ ಬಿಡಲಿಲ್ಲ. ಆ ಮಸೂದೆ ಇನ್ನೂ ಬಾಕಿ ಉಳಿದಿದೆ" ಎಂದು ಅವರು ಹೇಳಿದರು.

ಕಾಂಗ್ರೆಸ್ ಅನ್ನು 'ಮೀಸಲಾತಿ ವಿರೋಧಿ' ಪಕ್ಷ ಎಂದು ಜರಿದ ಮಾಯಾವತಿ, ಅದು ತಾನು ಅಧಿಕಾರದಲ್ಲಿರುವಾಗ 'ಜಾತಿ ಗಣತಿ' ನಡೆಸಲಿಲ್ಲ, ಮಾತ್ರವಲ್ಲದೆ ನ್ಯಾಯಾಲಯದಲ್ಲಿ ಪ್ರಕರಣವನ್ನು ಸರಿಯಾಗಿ ವಾದಿಸಲೂ ಇಲ್ಲ ಎಂದು ಆರೋಪಿಸಿದರು. ದೇಶದ ಜನತೆ ಮೀಸಲಾತಿ ವಿರೋಧಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಜಾತಿ ಜನಗಣತಿಯನ್ನು ನಡೆಸಲಿಲ್ಲ. ಆದರೆ ಅಧಿಕಾರದಿಂದ ಹೊರಬಂದ ಈ ಬಗ್ಗೆ ಮಾತನಾಡುತ್ತಿದ್ದಾರೆ. ಇದೆಲ್ಲವೂ ಬೂಟಾಟಿಕೆ ಅಲ್ಲದಿದ್ದರೆ ಮತ್ತೇನು? ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ : 'ಸನಾತನ ಧರ್ಮದ ಮೇಲಿನ ದಾಳಿ ಸಹಿಸಲ್ಲ': ವಿಜಯವಾಡದಲ್ಲಿ ದೇಗುಲದ ಮೆಟ್ಟಿಲು ತೊಳೆದ ಡಿಸಿಎಂ ಪವನ್​ ಕಲ್ಯಾಣ್ - Pawan Kalyan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.