ಪಶ್ಚಿಮ ಚಂಪಾರಣ್ (ಬಿಹಾರ್): ಪೆನ್ ವಿಷಯಕ್ಕೆ ವಿದ್ಯಾರ್ಥಿಗಳ ನಡುವೆ ಆರಂಭವಾದ ಕ್ಷುಲ್ಲಕ ಜಗಳವೊಂದು ಚಾಕು ಇರಿಯುವ ಹಂತಕ್ಕೆ ಹೋಗಿದ್ದು, ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ.
ಪೆನ್ ವಾಪಸ್ ಕೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಏಳನೇ ತರಗತಿ ವಿದ್ಯಾರ್ಥಿಗಳ ನಡುವೆ ಜಗಳ ಉಂಟಾಗಿದೆ. ಆರಂಭದಲ್ಲಿ ವಾಗ್ದಾದ ಸ್ವರೂಪ ಪಡೆದ ಈ ಘಟನೆ ಬಳಿಕ ವಿಕೋಪಕ್ಕೆ ಹೋಗಿದ್ದು, ಸಿಟ್ಟಿಗೆದ್ದ ಬಾಲಕ ಚಾಕುವಿನಿಂದ ಇರಿದು ಮತ್ತೊಬ್ಬ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಟ್ಟಯ್ಯ ನಗರ ಪೊಲೀಸ್ ಠಾಣೆಯ ಮಿತಿಯ ದುರ್ಗಾಬಾಗ್ನಲ್ಲಿ ಈ ಘಟನೆ ನಡೆದಿದೆ. ಸದ್ಯ ಚಾಕು ಇರಿತಕ್ಕೆ ಒಳಗಾಗಿರುವ ಗಾಯಗೊಂಡಿರುವ ಬಾಲಕನನ್ನು ಬೆಟ್ಟಯ್ಯದ ಸರ್ಕಾರಿ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಾಲಕ ಚಿಕಿತ್ಸೆ ಪಡೆಯುತ್ತಿದ್ದ ಯಾವುದೇ ಪ್ರಾಣಾಪಾಯ ವರದಿಯಾಗಿಲ್ಲ.
ಸೋಮವಾರ ಗಾಯಗೊಂಡ ಬಾಲಕ ನೀಡಿದ್ದ ಪೆನ್ನ ಅನ್ನು ಮರಳಿಸುವಂತೆ ಸ್ನೇಹಿತನಿಗೆ ಕೇಳಿದ್ದಾನೆ. ಆದರೆ, ಈ ಪೆನ್ ಅನ್ನು ನೀಡಲು ನಿರಾಕರಿಸಿದ್ದಾನೆ. ಈ ಪ್ರಕರಣ ಸಂಬಂಧ ಬೆಳಗ್ಗೆ 7 ಗಂಟೆ ಸುಮಾರಿಗೆ ದುರ್ಗಾಬಾದ್ ನಿರ್ಮಾಣ ಕಚೇರಿ ಬಳಿಕ ಚಾಕು ವಿನಿಂದ ಹಲ್ಲೆ ಮಾಡಿದ್ದಾನೆ. ಅದೃಷ್ಟವಶಾತ್ ಈ ವೇಳೆ ಇದೇ ಮಾರ್ಗದಲ್ಲಿ ಶಾಲೆಯ ಶಿಕ್ಷಕ ಅಭಿನಂದನ್ ದ್ವಿವೇದಿ ಬರುತ್ತಿದ್ದು, ಬಾಲಕನನ್ನು ತಕ್ಷಣಕ್ಕೆ ಆಸ್ಪತ್ರೆ ದಾಖಲಿಸಿದ್ದಾರೆ.
ಗಾಯಗೊಂಡ ಬಾಲಕನ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು, ಪ್ರಕರಣದ ತನಿಖೆ ನಡೆಸಿ, ಆರೋಪಿ ಬಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಂದಿದ್ದಾರೆ. ಸದ್ಯ ಆರೋಪಿ ಬಾಲಕ ತಲೆತಪ್ಪಿಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಲಾಗಿದೆ.
ಸೋಮವಾರ ಶಾಲೆಯಲ್ಲಿ ಬಾಲಕರ ನಡುವೆ ಪೆನ್ಗೆ ಜಗಳ ನಡೆದಿತ್ತು. ಈ ಸಂಬಂಧ ತರಗತಿ ಶಿಕ್ಷಕರಿಗೆ ಕೂಡ ಹುಡುಗರು ಮಾಹಿತಿ ನೀಡಿದ್ದರು. ಆದರೆ, ಶಿಕ್ಷಕರು ಇದನ್ನು ಗಂಭೀರವಾಗಿ ಪರಿಗಣಿಸದೆ, ಜಗಳ ಬಿಡಿಸುವ ಕೆಲಸಕ್ಕೆ ಹೋಗಿಲ್ಲ. ಅಲ್ಲದೇ, ಈ ಸಂಬಂಧ ಯಾವುದೇ ಕ್ರಮಕ್ಕೆ ಕೂಡ ಮುಂದಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕ ಇಲ್ಲಿನ ದುರ್ಗಾ ದೇಗುಲದ ಮುಂದೆ ಈ ಕೃತ್ಯ ನಡೆದಿದೆ. ಶಾಲೆ ಬಳಿ ಈ ಕೃತ್ಯ ನಡೆದಿಲ್ಲ. ಘಟನೆ ಕುರಿತು ಮಾತನಾಡಿದ ಶಿಕ್ಷಕ ಮುಖೇಶ್ ಕುಮಾರ್, ನನ್ನ ಸಹೋದ್ಯೋಗಿ ಅಭಿನಂದನ್ ದ್ವಿವೇದಿ ಕರೆ ಮಾಡಿ, ಬಾಲಕ ಗಾಯಗೊಂಡು ಬಿದ್ದಿರುವುದಾಗಿ ತಿಳಿಸಿದರು. ತಕ್ಷಣಕ್ಕೆ ಸ್ಥಳಕ್ಕೆ ಹೋದೆ. ಬಳಿಕ ಆತನನ್ನು ಜಿಎಂಸಿಎಚ್ಗೆ ದಾಖಲಿಸಿದೆವು. ವಿದ್ಯಾರ್ಥಿಗಳು ಈ ಜಗಳ ಕುರಿತು ತಮಗೆ ತಿಳಿದಿಲ್ಲ ಅಂತಾ ಹೇಳಿರುವುದಾಗಿ ವಿವರಿಸಿದರು.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಳಿ ತಪ್ಪಿದ ಮತ್ತೊಂದು ಗೂಡ್ಸ್ ರೈಲು: ನಾಲ್ಕು ತಿಂಗಳಲ್ಲಿ ಮೂರನೇ ಅವಘಡ