ಲಕ್ನೋ: ಯೂಟ್ಯೂಬ್ ನೋಡಿಕೊಂಡು 500 ರೂ. ಮುಖಬೆಲೆಯ ನಕಲಿ ನೋಟ್ಗಳನ್ನು ಪ್ರಿಂಟ್ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಬಂಧಿತರಿಂದ 10 ಸಾವಿರ ರೂ. ಮೌಲ್ಯದ ನೋಟುಗಳನ್ನು ಹಾಗೂ 27 ಸ್ಟಾಂಪ್ ಪೇಪರ್ ವಶಕ್ಕೆ ಪಡೆಯಲಾಗಿದೆ.
ರಾಬರ್ಟ್ಸ್‌ಗಂಜ್‌ನ ಚುರುಕ್ ಬಜಾರ್‌ನ ನಿವಾಸಿ ಪ್ರಮೋದ್ ಮಿಶ್ರಾ ಮತ್ತು ಮಿರ್ಜಾಪುರದ ಚುನಾರ್‌ನ ಸತೀಶ್ ರೈ ಬಂಧಿತರು. ಕೋನ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್‌ಗಢ ಬಜಾರ್‌ನಿಂದ ಮಾಹಿತಿದಾರ ನೀಡಿದ ಸುಳಿವಿನ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಪ್ರಕರಣ ಕುರಿತು ಮಾತನಾಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಲು ಸಿಂಗ್, ಆರೋಪಿಗಳು ಯೂಟ್ಯೂಬ್ ವಿಡಿಯೋ ನೋಡಿಕೊಂಡು ಸ್ಟಾಂಪ್ ಪೇಪರ್ ಬಳಕೆ ಮಾಡಿಕೊಂಡು 500 ರೂ ಮುಖ ಬೆಲೆಯ ನೋಟುಗಳನ್ನು ಮುದ್ರಿಸುತ್ತಿದ್ದರು. ಹಾಗೇ 10 ರೂ.ನ ಸ್ಟಾಂಪ್ ಪೇಪರ್ಗಳ ಮುದ್ರಿಸಿದ್ದು, ಇವು ನೈಜ ಹಣದ ಪೇಪರ್ ರೀತಿಯೇ ಇದೆ ಎಂದರು.