ಚಂಡೀಗಢ/ ದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದ್ದು, 27 ವರ್ಷಗಳ ಬಳಿಕ ಸರ್ಕಾರ ರಚಿಸುತ್ತಿದೆ. ಇನ್ನು ಸತತ ಎರಡು ಬಾರಿ ಆಡಳಿತ ನಡೆಸಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಆಪ್ಗೆ ಭಾರೀ ಹಿನ್ನಡೆಯಾಗಿದೆ.
ಚುನಾವಣೆಯಲ್ಲಿ ಯಮುನೆ ಸದ್ದು:ಈ ಬಾರಿ ದೆಹಲಿ ಚುನಾವಣೆಯಲ್ಲಿ ಜೋರಾಗಿ ಶಬ್ದ ಮಾಡಿದ ವಿಚಾರ ಯಮುನಾ ನದಿ. ಮತದಾನಕ್ಕೆ ದಿನಗಣನೆ ಇರುವಾಗ ಯಮುನಾ ನದಿ ಕುರಿತು ಅವರು ಮಾಡಿದ್ದ ಗಂಭೀರ ಆರೋಪ ಇಡೀ ದೇಶದ ಗಮನ ಸೆಳೆದಿತ್ತು. ಹರಿಯಾಣದ ಬಿಜೆಪಿ ಸರ್ಕಾರ ದೆಹಲಿಗೆ ವಿಷಕಾರಿ ನೀರು ಹರಿಸುತ್ತಿದೆ ಎಂಬ ಅವರ ಆರೋಪ ಭಾರೀ ಚರ್ಚೆಗೆ ಗುರಿಯಾಯಿತು.
ಅರವಿಂದ್ ಕೇಜ್ರಿವಾಲ್ ಬಳಿಕ ದೆಹಲಿ ಸಿಎಂ ಅತಿಶಿ ಕೂಡ ಯಮುನಾ ನದಿ ವಿಚಾರವಾಗಿ ಹರಿಯಾಣ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಇದಾದ ಬಳಿಕ ಬಿಜೆಪಿ, ಆಮ್ ಆದ್ಮಿ ಪಕ್ಷ ಮತ್ತು ಕೇಜ್ರಿವಾಲ್ ವಿರುದ್ಧ ನೇರ ಮುಖಾಮುಖಿ ಆರೋಪಕ್ಕೆ ಇಳಿಯಿತು. ಎರಡು ಪಕ್ಷದ ನಡುವೆ ಚರ್ಚೆ ಬಿಸಿ ಏರಿಸಿದ ಈ ವಿಚಾರವೂ ದೆಹಲಿ ಚುನಾವಣಾ ಮತದಾರರ ಮೇಲೆ ಪ್ರಭಾವ ಬೀರಿದ್ದು, ಸುಳ್ಳಲ್ಲ.
ಕೇಜ್ರಿವಾಲ್ ಹೇಳಿಕೆ: 2025ರ ಜನವರಿ 27ರಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಹರಿಯಾಣ ಸರ್ಕಾರದಿಂದ ದೆಹಲಿಗೆ ಬಿಡುತ್ತಿರುವ ನೀರಿನಲ್ಲಿ ವಿಷಕಾರಿ ಅಂಶ ಇದೆ ಎಂದು ಧ್ವನಿ ಎತ್ತಿದರು. ಇದಾದ ಬಳಿಕ ದೆಹಲಿ ಜಲ ಮಂಡಳಿ ಅಧಿಕಾರಿಗಳು ಚಂಡೀಗಢ ಗಡಿಯಿಂದ ಬರುವ ನೀರನ್ನು ತಡೆದರು.
ಹರಿಯಾಣ ಸರ್ಕಾರದ ಮೇಲೆ ಕೇಜ್ರಿವಾಲ್ ಆರೋಪ: ಎರಡು ದೇಶಗಳ ನಡುವೆ ಕೆಟ್ಟ ರಾಜಕೀಯ ನಡೆಯುತ್ತಿದೆ. ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ಅಮೆರಿಕ ಬಾಂಬ್ ದಾಳಿ ಮಾಡಿತ್ತು. ಇಂದು ಬಿಜೆಪಿ ವಿಷ ಬೆರಸಿದ ನೀರನ್ನು ದೆಹಲಿಗೆ ಬಿಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ಆರೋಪಿಸಿದ್ದರು.
ಆರೋಪ ನಿರಾಕರಿಸಿದ ಹರಿಯಾಣ ಬಿಜೆಪಿ; ಅರವಿಂದ್ ಕೇಜ್ರಿವಾಲ್ ಕಳಪೆ ಮತ್ತು ಕೆಟ್ಟ ರಾಜಕೀಯ ಹಿತಾಸಕ್ತಿ ಉದ್ದೇಶದಿಂದ ಈ ರೀತಿಯ ಆರೋಪ ಮಾಡುತ್ತಿದೆ. . ಹರಿಯಾಣದ ನೆಲದಲ್ಲಿ ಜನಿಸಿದ ಮಗ ದೆಹಲಿ ಚುನಾವಣೆ ರಾಜಕೀಯ ಲಾಭಕ್ಕಾಗಿ ಈ ರೀತಿ ನಿಂದಿಸುತ್ತಿರುವುದು ದುರದೃಷ್ಟಕರ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಯಮುನಾ ನದಿಗೆ ಹರಿಯಾಣ ಜನರು ವಿಷ ಸೇರಿಸುತ್ತಿದ್ದಾರೆ ಎಂಬ ವಿಚಾರದಲ್ಲಿ ಯಾವುದೇ ಹುರುಳಿಲ್ಲ. ಆದರೆ, ದ್ವಾಪರ ಯುಗದಲ್ಲಿ ಕಾಳಿಂಗ ಯಮುನಾ ನದಿಯನ್ನು ವಿಷ ಬೆರೆಸಲು ಪ್ರಯತ್ನಿಸಿದನು, ಆದರೆ, ಶ್ರೀ ಕೃಷ್ಣ ಯಮುನೆ ಕಲುಷಿತವಾಗದಂತೆ ತಡೆದನು. ಇದೀಗ ಕಲಿಯುಗದಲ್ಲಿ ಕೇಜ್ರಿವಾಲ್ ಈ ರೀತಿ ಸುಳ್ಳು ಹೇಳುತ್ತಿದ್ದಾರೆ. ಶ್ರೀ ಕೃಷ್ಣ ಹೇಗೆ ಕಾಳಿಂಗನ ಪಳಗಿಸಿದಂತೆ ದೆಹಲಿ ಜನ ಅವರಿಗೆ ಫೆಬ್ರವರಿ 8ರಂದು ಉತ್ತರಿಸಲಿದ್ದಾರೆ ಎಂದು ಹೇಳಿದ್ದರು .
ವಿಡಿಯೋ ಬಿಡುಗಡೆ ಮಾಡಿದ್ದ ಅರವಿಂದ್ ಕೇಜ್ರಿವಾಲ್: ಈ ಎಲ್ಲಾ ಆರೋಪ- ಪ್ರತ್ಯಾರೋಪಗಳ ನಡುವೆ ಅರವಿಂದ್ ಕೇಜ್ರಿವಾಲ್ ಮತ್ತು ಸಿಎಂ ಅತಿಶಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಅದರಲ್ಲೂ ಕೂಡ ಹರಿಯಾಣದಿಂದ ದೆಹಲಿಗೆ ಬರುತ್ತಿರುವ ಯಮುನಾ ನದಿಯಲ್ಲಿ ವಿಷಕಾರಿ ಅಂಶ ಮಿಶ್ರಣ ಆಗಿದೆ. ಇದರ ಮಿತಿ ಹೆಚ್ಚಿದೆ. ಆದರೆ ನಾವು ದೆಹಲಿ ಜನರಿಗೆ ಯಾವುದೇ ಹಾನಿ ಮಾಡಲು ಬಿಡುವುದಿಲ್ಲ. ನಮ್ಮ ದೆಹಲಿ ಜನರು ಬಿಜೆಪಿ ಪಿತೂರಿ ಬಗ್ಗೆ ಒಟ್ಟಿಗೆ ಎದುರಿಸಲಿದ್ದಾರೆ ಎಂದು ತಿಳಿಸಿದ್ದರು.
ಕ್ಷಮೆಗೆ ಆಗ್ರಹಿಸಿದ ಹರಿಯಾಣ ಸಿಎಂ: ಈ ಆರೋಪಗಳಿಗೆ ಉತ್ತರಿಸಿದ ಹರಿಯಾಣ ಸಿಎಂ ನಯಿಬ್ ಸೈನಿ, ಕೇಜ್ರಿವಾಲ್ ಕೆಳಮಟ್ಟದ ಸುಳ್ಳು ರಾಜಕೀಯ ಮಾಡುತ್ತಿದ್ದಾರೆ. ಅವರು ಹುಟ್ಟಿದ ನೆಲಕ್ಕೆ ಅವರು ಅವಮಾನಿಸುತ್ತಿದ್ದಾರೆ. ತಕ್ಷಣಕ್ಕೆ ಕೇಜ್ರಿವಾಲ್ ಹರಿಯಾಣ ಮತ್ತು ದೆಹಲಿ ಜನರ ಕ್ಷಮೆ ಕೋರಬೇಕು. ನಾವು ಹೇಗೆ ಯಮುನೆಗೆ ವಿಷ ಹಾಕಲು ಸಾಧ್ಯ. ಯಾವ ಇಂಜಿನಿಯರ್ಗಳು ಇದನ್ನು ಪತ್ತೆ ಮಾಡಿದರು. ಸೋಲಿನ ಭೀತಿಯಲ್ಲಿ ಕೇಜ್ರಿವಾಲ್ ಈ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದರು.
ಚುನಾವಣಾ ಆಯೋಗಕ್ಕೆ ಪತ್ರ:ಜನವರಿ 28ರಂದು ಈ ಸಂಬಂದ ದೆಹಲಿ ಸಿಎಂ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಇದರಲ್ಲಿ ಹರಿಯಾಣದಿಂದ ದೆಹಲಿಗೆ ಬರುತ್ತಿರುವ ನೀರಿನಲ್ಲಿ ಆರು ಪಟ್ಟು ಹೆಚ್ಚು ಅಮೋನಿಯ ಅಂಶ ಇದೆ ಎಂದು ಆರೋಪಿಸಿದ್ದರು. ಈ ಮಟ್ಟದ ವಿಷಕಾಶಿ ಅಂಶ ಮಾನವ ದೆಹಲದಲ್ಲಿ ಸೇರಿದರೆ ಅಪಾಯ. ಈ ನೀರು ದೆಹಲಿ ಜನರು ಕುಡಿಯಲು ಯೋಗ್ಯವಲ್ಲ. ಈ ಸಂಬಂಧ ಚುನಾವಣಾ ಆಯೋಗ ಮಧ್ಯಸ್ಥಿಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದರು.
ದೆಹಲಿ ಜನರು ಪಾಠ ಕಲಿಸುತ್ತಾರೆ ಎಂದಿದ್ದ ಸೈನಿ: ಕೇಜ್ರಿವಾಲ್ ಅವರ ಈ ಆರೋಪ ಮಾಡಿ ಓಡಿ ಹೋದರು. ಕೇಜ್ರಿವಾಲ್ ಮುಖ್ಯ ಕಾರ್ಯದರ್ಶಿಯನ್ನು ಕಳುಹಿಸಲಿ. ಅವರು ದೆಹಲಿಗೆ ಯಮುನೆ ಪ್ರವೇಶಿಸುವ ಸೋನಿಪತ್ನಲ್ಲಿ ನೀರಿನ ಗುಣಮಟ್ಟ ಪರೀಕ್ಷಿಸಲಿ. ಅವರು ಅಮೋನಿಯಾ ಬಗ್ಗೆ ಮಾತನಾಡುತ್ತಿದ್ದಾರೆ. ನೀರನ್ನು ಸಂಗ್ರಹಿಸುತ್ತಿದ್ದಾರೆ ಎನ್ನುತ್ತಿದ್ದಾರೆ. ಹಂಚಿಕೆ ವ್ಯವಸ್ಥೆಯಲ್ಲಿ ಸಮಸ್ಯೆ ಎನ್ನುತ್ತಿದ್ದಾರೆ. ಆದರೆ, ಕಳೆದ 10 ವರ್ಷದಿಂದ ಇದರ ನಿರ್ವಹಣೆ ಮಾಡಿಲ್ಲ. ಅವರು ಇದೀಗ ಮಾಲಿನ್ಯಗೊಂಡ ನೀರಿನ ಶುದ್ದಿ ಕುರಿತು ಮಾತನಾಡುತ್ತಿದ್ದಾರೆ. ಅವರು ಆರೋಪ ಮಾಡುವ ಮೊದಲು ಕೆಲಸ ಮಾಡಲಿ. ಅವರಿಗೆ ಜನರು ಸರಿಯಾದ ಪಾಠ ಕಲಿಸುತ್ತಾರೆ ಎಂದು ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಗರಂ ಆಗಿದ್ದರು.
ನೀರು ಕುಡಿದ ಹರಿಯಾಣ ಸಿಎಂ: ಈ ಆರೋಪಗಳಿಗೆಲ್ಲಾ ಉತ್ತರವಾಗಿ ಹರಿಯಾಣ ಸಿಎಂ ನಯಾಬ್ ಸೈನಿ ಅವರು, ಯಮುನಾ ನದಿಗೆ ತೆರಳಿ, ನೀರನ್ನು ಕುಡಿದಿದ್ದರು. ಈ ವೇಳೆ ಕೇಜ್ರಿವಾಲ್ ವೈಫಲ್ಯಕ್ಕೆ ಹರಿಯಾಣ ಜವಾಬ್ದಾರಿಯಲ್ಲ. ಕೇಜ್ರಿವಾಲ್ ಮತ್ತು ಅವರ ತಂಡ ಕಳೆದ 10 ವರ್ಷದಿಂದ ಸುಳ್ಳು ಹೇಳುತ್ತಾ, ಲೂಟಿ ಮಾಡುತ್ತಿದ್ದಾರೆ. ಯಮುನಾ ನದಿಗೆ ದ್ರೋಹ ಬಗೆದಿದ್ದಾರೆ. ಈ ಎಲ್ಲಾದಕ್ಕೂ ದೆಹಲಿ ಜನರು ಫೆ.5ರಂದು ಉತ್ತರಿಸಲಿದ್ದಾರೆ ಎಂದಿದ್ದರು.
ಸೈನಿ ಕಾರ್ಯಕ್ಕೆ ಎಎಪಿ ಟೀಕೆ: ಇನ್ನು ಹರಿಯಾಣ ಸಿಎಂ ಯಮುನಾ ನದಿ ನೀರು ಕಡಿದ ವಿಡಿಯೋ ನಾಟಕವಾಗಿದೆ. ನಾವು ವಿಷ ಹಾಕುತ್ತೀರಿ ಎಂದಿರುವುದು ಅದರಲ್ಲಿ ಅಮೋನಿಯಾ ಅಂಶ ಹೆಚ್ಚಿದೆ ಎಂಬ ಅರ್ಥದಲ್ಲಿ. ಅಧಿಕ ಅಮೋನಿಯ ಅಂಶ ಸೇವಿಸಿದರೆ, ಅದು ಮಾರಕ ಎಂದು ಆರೋಪಿಸಿದ್ದೆವು . ಅಲ್ಲದೇ, ವಿಷಕಾರಿ ನೀರನ್ನು ಅವರಿಗೆ ಕುಡಿಯಲು ಸಾಧ್ಯವಾಗಿಲ್ಲ ಎಂದ ಮೇಲೆ ದೆಹಲಿ ಜನರು ಹೇಗೆ ಕುಡಿಯಲು ಸಾಧ್ಯ. ಈ ರೀತಿ ಆಗಲು ಬಿಡುವುದಿಲ್ಲ ಎಂದಿದ್ದರು.
ಇದಕ್ಕೆ ಪ್ರತ್ಯುತ್ತರ ನೀಡಿದ ಹರಿಯಾಣ ಸಿಎಂ ಮೊದಲು ನಿಮ್ಮ ಕನ್ನಡಕ ತೆಗೆದು ನೋಡಿ. ಅದೇ ನೀರನ್ನು ಪ್ರಾಣಿ ಪಕ್ಷಿಗಳು, ದೆಹಲಿಯಲ್ಲಿ ನೆಲೆಸಿರುವ ಲಕ್ಷಾಂಂತರ ಹರಿಯಾಣ ಜನರು ಕುಡಿಯುತ್ತುದ್ದಾರೆ. ಯಮುನೆಯನ್ನು ನಾವು ತಾಯಿ ಎಂದು ಪರಿಗಣಿಸಿದ್ದೇವೆ. ಕೇಜ್ರಿವಾಲ್ ಈ ಆರೋಪಕ್ಕೆ ಸಂಬಂಧಪಟ್ಟಂತೆ ತಕ್ಷಣಕ್ಕೆ ಕ್ಷಮೆಯಾಚಿಸಬೇಕು. ಇಲ್ಲದೇ ಹೋದಲ್ಲಿ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದರು.
ಮಾಜಿ ಹರಿಯಾಣ ಸಿಎಂ ಮಾತು: ಇನ್ನು ಈ ಆರೋಪಗಳ ನಡುವೆ ಹರಿಯಾಣ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಭೂಪೇಂದ್ರ ಹೂಡ ಕೂಡ ಮಾತನಾಡಿದ್ದರು, ಅವರು ಈ ಸಂಬಂಧ ಯಾರನ್ನು ದೂಷಿಸಲಿಲ್ಲ. ಬದಲಾಗಿ, ಯಮುನಾ ನದಿ ಶುದ್ದವಾಗಿಯೇ ಇದೆ. ಫರಿದಾಬಾದ್ನಲ್ಲಿ ಯಮುನಾ ನದಿಗೆ ದೆಹಲಿಯ ಕೈಗಾರಿಕೆ ತ್ಯಾಜ್ಯ ಸೇರುವ ಹಿನ್ನಲೆ ಕಲುಷಿತವಾಗುತ್ತಿದೆ ಎಂದು ತಣ್ಣನೆಯ ಉತ್ತರ ನೀಡಿದ್ದರು.
ಇದನ್ನೂ ಓದಿ: ದೆಹಲಿ ಗೆಲ್ಲಲ್ಲು ಬಿಜೆಪಿ ಮಾಡಿದ ಕಸರತ್ತೇನು? ಕಮಲ ಕಿಲಕಿಲಕ್ಕೆ ಗ್ಯಾರಂಟಿಯೇ ಕಾರಣವಾ? -
ಇದನ್ನೂ ಓದಿ: ದೆಹಲಿ ಚುನಾವಣಾ ಫಲಿತಾಂಶ: ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಸೋಲು