ಕರ್ನಾಟಕ

karnataka

ETV Bharat / bharat

ಇಂದಿರಾ ಗಾಂಧಿ 107ನೇ ಜನ್ಮದಿನ; ಪ್ರಧಾನಿ ಮೋದಿ ಗೌರವ ನಮನ - MODI PAYS TRIBUTES TO INDIRA GANDHI

ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ನಮ್ಮ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿ ಜನ್ಮವಾರ್ಷಿಕೋತ್ಸವದ ಗೌರವ ನಮನಗಳು ಎಂದು ತಿಳಿಸಿದ್ದಾರೆ.

pm-modi-pays-tributes-to-indira-gandhi-on-her-107th-birth-anniversary
ಇಂದಿರಾ ಗಾಂಧಿ (IANS)

By ETV Bharat Karnataka Team

Published : Nov 19, 2024, 10:32 AM IST

ನವದೆಹಲಿ:ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ 107ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ನಮ್ಮ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮವಾರ್ಷಿಕೋತ್ಸವಕ್ಕೆ ಗೌರವ ನಮನಗಳು ಎಂದು ತಿಳಿಸಿದ್ದಾರೆ.

ಭಾರತದ ಉಕ್ಕಿನ ಮಹಿಳೆ ಎಂದೇ ಹೆಸರು ಪಡೆದಿದ್ದ ಇಂದಿರಾ ಗಾಂಧಿ ಅವರು ಉತ್ತರ ಒ್ರದೇಶದ ಅಲಹಾಬಾದ್​(ಈಗಿನ ಪ್ರಯಾಗ್​ರಾಜ್​)ನಲ್ಲಿ 1917ರ ನವೆಂಬರ್​ 19ರಂದು ಕಾಶ್ಮೀರಿ ಪಂಡಿತ ಕುಟುಂಬದಲ್ಲಿ ಜನಿಸಿದರು. ಜವಾಹರ್​ಲಾಲ್​ ನೆಹರು ಮತ್ತು ಕಮಲಾ ನೆಹರು ಇವರ ಪೋಷಕರು,

ಇಂದಿರಾಗಾಂದಿ ಅವರ ಜನ್ಮ ದಿನವಾದ ನವೆಂಬರ್​ 19 ಅನ್ನು ರಾಷ್ಟ್ರೀಯ ಏಕೀಕರಣ ದಿನವಾಗಿ ಆಚರಿಸಲಾಗುತ್ತದೆ. ಭಾರತದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಆಕಾರ ರೂಪಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದ್ದು, ಈ ಮೂಲಕ ಗೌರವಿಸಲಾಗುತ್ತದೆ.

ಭಾರತವೂ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವ ಈ ಹೊತ್ತಿನಲ್ಲಿ ರಾಷ್ಟ್ರೀಯ ಏಕೀಕರಣ ದಿನವೂ ರಾಷ್ಟ್ರವನ್ನೂ ಒಗ್ಗೂಡಿಸುವಲ್ಲಿ ಗಾಂಧಿಯ ಕೊಡುಗೆಯನ್ನು ಸ್ಮರಿಸುತ್ತದೆ. ರಾಷ್ಟ್ರೀಯ ಏಕತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 1985ರಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​ ಈ ದಿನ ಸ್ಥಾಪಿಸಿತು.

ಭಾರತದ ವೈವಿಧ್ಯತೆಯನ್ನು ಆಚರಿಸಲು ಮತ್ತು ದೇಶದ ಅಭಿವೃದ್ಧಿಗಾಗಿ ಸಾಮೂಹಿಕ ಪ್ರಯತ್ನಗಳ ಪ್ರಾಮುಖ್ಯತೆಯನ್ನು ಗುರುತಿಸಲು ಈ ದಿನ ಪ್ರಾಮುಖ್ಯತೆ ಹೊಂದಿದೆ.

1966 ರಿಂದ 1977ರ ವರೆಗೆ ಮತ್ತು 1980 ರಿಂದ 1984ರ ವರೆಗೆ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದ ಇಂದಿರಾ ಗಾಂಧಿ ಅವರು ದೇಶದ ಏಕತೆಯನ್ನು ರೂಪಿಸಲು ಅವಿರತವಾಗಿ ಹೋರಾಡಿದರು. ಏಕತೆ ಮತ್ತು ಸಮಗ್ರತೆಗೆ ಬದ್ಧತೆಯನ್ನು ಅವರು ಹೊಂದಿದ್ದರು.

1971ರಲ್ಲಿ ಭಾರತ ಪಾಕಿಸ್ತಾನದ ಯುದ್ಧ ಸಮಯದಲ್ಲಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯದಲ್ಲಿ ಅವರ ನಾಯಕತ್ವ ದೊಡ್ಡ ಹೆಗ್ಗುರುತಾಗಿದೆ. ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಅವರು ಪ್ರಾದೇಶಿಕ ವೈವಿಧ್ಯತೆ ಮತ್ತು ವೈವಿಧ್ಯಮಯ ಪ್ರದೇಶಗಳು, ಸಂಸ್ಕೃತಿಗಳು ಮತ್ತು ಹಿನ್ನೆಲೆ ಜನರನ್ನು ರಾಷ್ಟ್ರೀಯ ಗುರುತಿನ ಅಡಿಯಲ್ಲಿ ಒಟ್ಟಿಗೆ ತರುವ ಮಹತ್ವವನ್ನು ಸಾರಿದರು. (ಐಎಎನ್​ಎಸ್​)

ಇದನ್ನೂ ಓದಿ: ಶಬರಿಮಲೆಯ ಮೂರು ಸ್ಥಳಗಳಲ್ಲಿ ಸ್ಪಾಟ್ ಬುಕಿಂಗ್ ಸೌಲಭ್ಯ: ಸುಲಲಿತ ದರ್ಶನಕ್ಕೆ ಸಕಲ ವ್ಯವಸ್ಥೆ

ABOUT THE AUTHOR

...view details