ಕರ್ನಾಟಕ

karnataka

ETV Bharat / bharat

2019ರ ಚುನಾವಣೆ ಫಲಿತಾಂಶದ ಅಂಕಿ - ಅಂಶಗಳನ್ನು ಬಿಜೆಪಿ ದಾಟಬಹುದು: ಆಂಟಿಕ್​ ಬ್ರೋಕಿಂಗ್​​ ಭವಿಷ್ಯ - BJP may improve 2019 seat tally

Lok Sabha Elections 2024 Predictions: ಆಂಟಿಕ್ ಸ್ಟಾಕ್ ಬ್ರೋಕಿಂಗ್ ತನ್ನ ಇತ್ತೀಚಿನ 2024 ರ ಲೋಕಸಭೆ ಚುನಾವಣೆ ಭವಿಷ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ. ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿಯ ವೋಟ್ ಬ್ಯಾಂಕ್ ವಿಸ್ತರಿಸಿರುವ ಕಾರಣ 2019ರ ಎಲೆಕ್ಷನ್​​​​ಗಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಪಡೆದುಕೊಳ್ಳಬಹುದು ಎಂದು ಅದು ಹೇಳಿದೆ.

Etv Bharat
Etv Bharat (Etv Bharat)

By ETV Bharat Karnataka Team

Published : May 18, 2024, 10:13 PM IST

ಹೈದರಾಬಾದ್:ಸೋಮವಾರ ಲೋಕಸಭಾ ಚುನಾವಣೆಗೆ ಐದನೇ ಹಂತದ ಮತದಾನ ನಡೆಯಲಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 49 ಲೋಕಸಭಾ ಸ್ಥಾನಗಳಿಗೆ ಮೇ 20 ರಂದು ಮತದಾನ ನಡೆಯಲಿದೆ. ಏತನ್ಮಧ್ಯೆ, ಆಂಟಿಕ್ ಸ್ಟಾಕ್ ಬ್ರೋಕಿಂಗ್ ಯಾರು ಸರ್ಕಾರ ರಚನೆ ಮಾಡಲಿದ್ದಾರೆ ಎಂಬ ಬಗ್ಗೆ ಭವಿಷ್ಯ ನುಡಿದಿದೆ.

ಪ್ರಸ್ತುತ ಚುನಾವಣೆಯಲ್ಲಿ 2019 ಕ್ಕೆ ಹೋಲಿಸಿದರೆ ಈ ಬಾರಿ ಬಿಜೆಪಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಅಂದಾಜು ಮಾಡಿದೆ. 2019 ರಲ್ಲಿ ಗೆಲುವಿನ ಅಂತರಕ್ಕೆ ಸಂಬಂಧಪಟ್ಟಂತೆ ಶೇಕಡಾವಾರು ವಿಶ್ಲೇಷಣೆಯ ಆಧಾರದ ಮೇಲೆ, ಬ್ರೋಕರೇಜ್ ಕಂಪನಿಯು 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ಗಳಿಸಿದ್ದ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದೆ.

ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು ಎಂದು ಬ್ರೋಕರೇಜ್ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ, ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ 370 - 410 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿಲ್ಲ ಎಂದು ಹಲವಾರು ಚುನಾವಣಾ ಪೂರ್ವ ಸಮೀಕ್ಷೆಗಳು ಅಂದಾಜಿಸಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದಿತ್ತು.

85 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲರಿಗೆ ಮೊದಲ ಬಾರಿಗೆ ಐಚ್ಛಿಕ ಅಂಚೆ ಮತದಾನದ ಸೌಲಭ್ಯ ನೀಡಿರುವುದರಿಂದ ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಆಂಟಿಕ್ ಪ್ರಕಾರ ಬಿಜೆಪಿಯ ಮತ ಬ್ಯಾಂಕ್ ವಿಶೇಷವಾಗಿ ಕಡಿಮೆ ಆದಾಯದ ಕುಟುಂಬಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ವಿಶ್ಲೇಷಣೆ ಮಾಡಿದೆ.

ಅಂತಿಮ ಮತದಾನದ ಶೇಕಡಾವಾರು ಈ ಬಾರಿ ಕಳೆದ ಬಾರಿಗಿಂತ ಹೆಚ್ಚಾಗಬಹುದು ಎಂದು ಆಂಟಿಕ್​​ ಹೇಳಿದೆ. ಕಳೆದ ಸಲ ನಡೆದ ಗುಜರಾತ್ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಗಳಲ್ಲಿ ಕಂಡುಬಂದಂತೆ ಏಕಪಕ್ಷೀಯ ಚುನಾವಣೆಗಳು ಮತದಾನದ ಶೇಕಡಾವಾರು ಕುಸಿತಕ್ಕೆ ಕಾರಣವಾಗಬಹುದು ಎಂಬುದಾಗಿ ಬ್ರೋಕರೇಜ್ ಕಂಪನಿ ಹೇಳಿದೆ. ಆದರೆ, ಬ್ರೋಕರೇಜ್​ ಕಂಪನಿ ಮಾಡಿರುವ ಇದುವರೆಗಿನ ವಿಶ್ಲೇಷಣೆ ಪ್ರಕಾರ ಪ್ರಸ್ತುತ ಬಿಜೆಪಿಯ ಸ್ಥಿತಿ ಉತ್ತಮ ಸ್ಥಿತಿವಾಗಿದೆ ಎಂದು ಸೂಚಿಸಿದೆ. ಚುನಾವಣಾ ಆಯೋಗವು ಮೊದಲ ಬಾರಿಗೆ 85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರಿಗೆ ಮತ್ತು 88 ಲಕ್ಷ ಅಂಗವಿಕಲ ಮತದಾರರಿಗೆ ಐಚ್ಛಿಕ ಅಂಚೆ ಮತದಾನದ ಸೌಲಭ್ಯವನ್ನು ಒದಗಿಸಿದೆ. ಇದು ಅಂತಿಮ ಮತದಾನದ ಶೇಕಡಾವಾರು ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಆಂಟಿಕ್ ಅಂದಾಜಿಸಿದೆ.
ಅಂಚೆ ಮೂಲಕ ಮತದಾನ ಮಾಡಿದ ಮತದಾರರನ್ನು ಪ್ರಸ್ತುತ ಮತದಾನದ ಶೇಕಡಾವಾರು ಪ್ರಮಾಣದಲ್ಲಿ ಸೇರಿಸಲಾಗಿಲ್ಲ ಎಂದು ಬ್ರೋಕರೇಜ್​​ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನು ಓದಿ:ದೆಹಲಿ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಮೇಲೆ ದಾಳಿ: ಇದು ಬಿಜೆಪಿಯ ಸೋಲಿನ ಹತಾಶೆ ತೋರಿಸುತ್ತದೆ ಎಂದ ಕಾಂಗ್ರೆಸ್ - Attack on Kanhaiya Kumar

ABOUT THE AUTHOR

...view details