ಕರ್ನಾಟಕ

karnataka

ETV Bharat / bharat

2 ತಿಂಗಳಲ್ಲಿ 40 ಮಂದಿ ಸಾವು: ಗ್ರಾಮ ಖಾಲಿ ಮಾಡಿ ‘ವನವಾಸ’ಕ್ಕೆ ತೆರಳಿದ ಗ್ರಾಮಸ್ಥರು - PEOPLE LEAVE VILLAGE FOR ONE DAY

ನಲ್ಗೊಂಡ ಜಿಲ್ಲೆಯ ಶೆಟ್ಟಿಪಾಲೆಂನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ - ಗ್ರಾಮ ತೊರೆದು ವನವಾಸಕ್ಕೆ ಹೋದ ಗ್ರಾಮಸ್ಥರು - ನಿರ್ಜನವಾಯಿತು ಊರು.

people-from-entire-village-settipalem-in-nalgonda-district-leave-village-for-one-day
2 ತಿಂಗಳಲ್ಲಿ 40 ಮಂದಿ ಸಾವು: ಗ್ರಾಮ ಖಾಲಿ ಮಾಡಿ ‘ವನವಾಸ’ಕ್ಕೆ ತೆರಳಿದ ಗ್ರಾಮಸ್ಥರು (ETV Bharat)

By ETV Bharat Karnataka Team

Published : Oct 18, 2024, 8:20 AM IST

ನಲ್ಗೊಂಡ, ತೆಲಂಗಾಣ: Settipalem People Leave Village For one day in Nalgonda District - ಆ ಗ್ರಾಮದ ಜನರು ಒಬ್ಬರ ಹಿಂದೆ ಒಬ್ಬರಂತೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಸಹಜ ಸಾವುಗಳು ಸಂಭವಿಸುತ್ತಿವೆಯೇ? ಅನಾರೋಗ್ಯದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರಾ? ಅಥವಾ ಕೆಲವು ರೀತಿಯ ಕ್ರಿಮಿ- ಕೀಟಗಳ ಕಡಿತದಿಂದ ಸಾಯುತ್ತಿದ್ದೀರಾ? ಯಾವುದರಿಂದ ಈ ಸಾವು ಎಂಬುದು ತಿಳಿಯದೇ ಗ್ರಾಮಸ್ಥರು ದಿಕ್ಕು ತೋಚದಂತಾಗಿದ್ದಾರೆ. ಸರಣಿ ಸಾವುಗಳಿಂದ ಕಂಗೆಟ್ಟ ಆ ಊರಿನ ಜನ ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಊರು ಬಿಟ್ಟು ಊರ ಹೊರಗೆ ಹೋಗಿ ಇಡೀ ದಿನ ತನ್ನ ಕುಟುಂಬದ ಸದಸ್ಯರೊಂದಿಗೆ ಮರಗಳ ಕೆಳಗೆ ಕಳೆದಿದ್ದಾರೆ.

ಯಾವುದೀ ಗ್ರಾಮ?:ನಲ್ಗೊಂಡ ಜಿಲ್ಲೆ ಮಿರ್ಯಾಲಗುಡ ಕ್ಷೇತ್ರದ ವೇಮುಲಪಲ್ಲಿ ಮಂಡಲದ ಶೆಟ್ಟಿಪಾಲೆಂ ಗ್ರಾಮದಲ್ಲಿ ಸುಮಾರು 6,000 ಜನರು ವಾಸಿಸುತ್ತಿದ್ದಾರೆ. ಕಳೆದ ದಸರಾದಿಂದ ಇಲ್ಲಿಯವರೆಗೆ ಒಂದು ವರ್ಷದೊಳಗೆ ವಿವಿಧ ಕಾರಣಗಳಿಂದ ಇಲ್ಲಿ ಸುಮಾರು 74 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಕೆಲವರು ಅನಾರೋಗ್ಯದಿಂದ, ಕೆಲವರು ರಸ್ತೆ ಅಪಘಾತದಿಂದ ಮತ್ತು ಕೆಲವರು ವಯಸ್ಸಾದ ಕಾರಣದಿಂದ ಸಾವನ್ನಪ್ಪಿದ್ದಾರೆ.


ಗ್ರಾಮದಲ್ಲಿ ಒಬ್ಬರ ನಂತರ ಒಬ್ಬರು ಸಾವನ್ನಪ್ಪಿದ್ದರಿಂದ ಅವರಲ್ಲಿ ಅನೇಕ ಯುವಕರಿದ್ದರು ಮತ್ತು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಊರಲ್ಲಿ ಸಹಜ ಸಾವುಗಳು ಸಂಭವಿಸುತ್ತಿವೆಯೇ? ಅನಾರೋಗ್ಯದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರಾ? ಅಥವಾ ಅವರು ಕೀಟಗಳ ಕಡಿತದಿಂದ ಸಾಯುತ್ತಿದ್ದಾರೆಯೇ? ಎಂಬ ಚರ್ಚೆ ಜೋರಾಗಿದೆ. ಸರಣಿ ಸಾವಿನಿಂದ ಕಂಗೆಟ್ಟಿದ್ದ ಗ್ರಾಮಸ್ಥರು ಕೊನೆಗೂ ಗ್ರಾಮಕ್ಕೆ ಕೀಟ ಬಾಧೆ ತಗುಲಿದೆ ಎಂದು ಭಾವಿಸಿದ್ದಾರೆ.

ಇದನ್ನು ಓದಿ:ಬದುಕಿನ ಪಥ ಬದಲಿಸಿದ ತೃತೀಯ ಲಿಂಗಿ; ಅನಂತಪುರದ ಹನ್ನಾ ಸ್ಪೇನ್​ನಲ್ಲಿ ವಿಜ್ಞಾನಿಯಾಗಿ ಬೆಳೆದ ಸ್ಫೂರ್ತಿಯ ಕಥೆ

ಊರಿಗೆ ಊರೇ ಖಾಲಿ ಖಾಲಿ : ವಿದ್ವಾಂಸರು ಹಾಗೂ ಗ್ರಾಮದ ಹಿರಿಯರು ಗ್ರಾಮ ತೊರೆದು ದಿನವಿಡೀ ಹೊಲಗಳಲ್ಲಿಯೇ ಇರಲು ನಿರ್ಧರಿಸಿದರು. ಗ್ರಾಮದ ಹಿರಿಯರ ತೀರ್ಮಾನಕ್ಕೆ ಮಣಿದು ಗ್ರಾಮದ ಮನೆಗಳಿಗೆ ಬೀಗ ಹಾಕಿದ ಜನ ಗ್ರಾಮದ ಹೊರವಲಯಕ್ಕೆ ವನವಾಸಕ್ಕೆ ತೆರಳಿದ್ದರು. ಗ್ರಾಮಸ್ಥರು ಹೊರಬಂದಿದ್ದರಿಂದ ಸೆಟ್ಟಿಪಾಲೆಂ ಗ್ರಾಮ ನಿರ್ಜನವಾಯಿತು, ಬೀಕೊ ಎನ್ನುವ ಪರಿಸ್ಥಿತಿ ಎದುರಿಸಿತು.

ಊಟ, ಆಟ- ಪಾಠ, ನೋವು ಎಲ್ಲವೂ ಗ್ರಾಮದ ಹೊರಗೆ:ಶೆಟ್ಟಿಪಾಲೆಂ ಗ್ರಾಮದಲ್ಲಿ ಕಳೆದ ಎರಡು ತಿಂಗಳಲ್ಲಿ 40 ಮಂದಿ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರೊಬ್ಬರು ಹೇಳುತ್ತಾರೆ. ಗ್ರಾಮದ ಹಿರಿಯರು, ವಿದ್ವಾಂಸರ ಸಲಹೆಯಂತೆ ಎಲ್ಲರೂ ಮುಂಜಾನೆ ಬೇಗ ಎದ್ದು ಒಲೆ ಹಚ್ಚದೇ ತಮ್ಮ ತಮ್ಮ ಹೊಲಗಳಿಗೆ ಹೋಗಬೇಕು ಅಥವಾ ಊರ ಹೊರವಲಯಕ್ಕೆ ತೆರಳಿ ಅಲ್ಲಿಯೇ ಅಡುಗೆ ಮಾಡಿ ಸಂಜೆಯ ವೇಳೆಗೆ ಊರಿಗೆ ಬರಬೇಕು ಎಂಬ ತೀರ್ಮಾನಕ್ಕೆ ಬರಲಾಗಿತ್ತು.

ಇದನ್ನು ಓದಿ:ಪ್ರೀತಿಸಿದ ಹುಡುಗನ ಕೈಹಿಡಿದ ತೃತೀಯಲಿಂಗಿ; ಕುಟುಂಬದ ಆಶೀರ್ವಾದ, ಬೆಂಬಲದಿಂದ ಅದ್ಧೂರಿ ವಿವಾಹ!

50 ವರ್ಷದ ಹಿಂದೆ ಇಲ್ಲಿನ ಹಿರಿಯರು ಹೀಗೆ ಮಾಡಿದ್ದರಂತೆ:ಇದರಿಂದ ನಿನ್ನೆ ಅಂದರೆ, ಗುರುವಾರ ಬೆಳಗಿನ ಜಾವ ಇಡೀ ಗ್ರಾಮದ ಜನರು ಗ್ರಾಮದ ಇನ್ನೊಂದು ಬದಿಗೆ ತೆರಳಿದರು. 50 ವರ್ಷಗಳ ಹಿಂದೆ ಇದೇ ರೀತಿಯ ಘಟನೆ ಈ ಗ್ರಾಮದಲ್ಲಿ ನಡೆದಿತ್ತು ಎನ್ನಲಾಗಿದೆ. ಆಗಲೂ ಅವರ ಅಜ್ಜಂದಿರು, ಹಿರಿಯರು ಗ್ರಾಮ ತೊರೆದು ಗ್ರಾಮದ ಹೊರವಲದಯದಲ್ಲಿ ಒಂದು ದಿನ ಬಿಡಾರ ಹೂಡಿ, ಸಂಜೆ ಗ್ರಾಮಕ್ಕೆ ಮರಳಿದ್ದರಂತೆ ಎಂದು ಗ್ರಾಮಸ್ಥರೊಬ್ಬರು ನೆನಪು ಮಾಡಿಕೊಂಡರು.

ಇನ್ನು ಮುಂದೆ ತಮ್ಮ ಗ್ರಾಮಕ್ಕೆ ಕೆಡುಕು ಅಳೆದು, ಒಳ್ಳೆಯದೇ ಆಗಲಿ ಎಂಬ ಆಶಾಭಾವನೆ ಇಲ್ಲಿನ ಜನರದ್ದು. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಇಂತಹ ಮೂಢನಂಬಿಕೆಗಳು ಸರಿಯಲ್ಲ ಎಂಬುದು ಹಲವರ ಅಭಿಪ್ರಾಯ. ಆದರೂ ಹಲವು ಸಾವುಗಳನ್ನ ಕಂಡ ಜನ, ಹೀಗೊಂದು ಹಿಂದಿನ ಆಚರಣೆ ಮಾಡಿದರೆ ಕಳೆದುಕೊಳ್ಳುವುದೇನು ಎಂಬ ಯೋಚನೆಯೊಂದಿಗೆ ಈ ಆಚರಣೆ ಮಾಡಿಯೇ ಬಿಟ್ಟಿದ್ದಾರೆ. ಆದರೆ ಇಂತಹ ಈ ಬಗ್ಗೆ ಜಾಗೃತಿ ಮೂಡಿಸಬೇಕೆಂಬುದು ಕೆಲವರ ಸಲಹೆಯೂ ಆಗಿದೆ.

ಇದನ್ನು ಓದಿ:AI ಆಧರಿತ ವ್ಯವಸ್ಥೆಯಿಂದ 60 ಕಾಡಾನೆಗಳ ಪ್ರಾಣ ಉಳಿಸಿದ ಲೋಕೋ ಪೈಲಟ್‌ಗಳು

ABOUT THE AUTHOR

...view details