ಕರ್ನಾಟಕ

karnataka

ETV Bharat / bharat

ಪಾಕ್‌ನ ಐಎಸ್‌ಐ, ಉಗ್ರ ಸಂಘಟನೆಗಳಿಗೆ ಆನ್​ಲೈನ್​ ಮೂಲಕ ಜಮ್ಮು ಕಾಶ್ಮೀರ ಯುವಕರ ನೇಮಕ - TERROR GROUPS RECRUITMENT

ಪಾಕಿಸ್ತಾನದ ಐಎಸ್​ಐ, ಉಗ್ರಗಾಮಿ ಗುಂಪುಗಳಿಗೆ ಜಮ್ಮು- ಕಾಶ್ಮೀರದ ಯುವಕರನ್ನು ಆನ್​​ಲೈನ್​ ಮೂಲಕ ನೇಮಕ ಮಾಡಿಕೊಳ್ಳುವ ಯತ್ನಗಳು ಮತ್ತೆ ಹೆಚ್ಚಾಗಿವೆ.

ಉಗ್ರ ಸಂಘಟನೆಗಳಿಗೆ ಆನ್​ಲೈನ್​ ಮೂಲಕ ಯುವಕರ ನೇಮಕ
ಉಗ್ರ ಸಂಘಟನೆಗಳಿಗೆ ಆನ್​ಲೈನ್​ ಮೂಲಕ ಯುವಕರ ನೇಮಕ (ETV Bharat)

By PTI

Published : Oct 20, 2024, 5:47 PM IST

ಶ್ರೀನಗರ (ಜಮ್ಮು- ಕಾಶ್ಮೀರ):ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರಿದಿದ್ದು, ಭದ್ರತಾ ಪಡೆಗಳು ಕಟ್ಟುನಿಟ್ಟಿನ ನಿಗಾ ವಹಿಸಿವೆ. ಇದರ ಮಧ್ಯೆಯೂ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್​​ಐ ಮತ್ತು ಕೆಲ ಉಗ್ರಗಾಮಿ ಸಂಘಟನೆಗಳು ಇಲ್ಲಿನ ಯುವಕರನ್ನು ಆನ್​ಲೈನ್​ ಮೂಲಕ ನೇಮಕಕ್ಕೆ ಪ್ರಯತ್ನ ನಡೆಸಿವೆ ಎಂಬ ಮಾಹಿತಿ ಹೊರಬಿದ್ದಿದೆ.

ತಂತ್ರಜ್ಞಾನವನ್ನು ಬಳಸಿಕೊಂಡು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಮತ್ತು ಭಯೋತ್ಪಾದಕ ಗುಂಪುಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನೇಮಕಾತಿ ಪ್ರಯತ್ನಗಳನ್ನು ಹೆಚ್ಚಿಸುತ್ತಿವೆ. ಭಾರತೀಯ ಭದ್ರತಾ ಪಡೆಗಳ ಕಣ್ಗಾವಲಿನಿಂದಾಗಿ ನೇರ ಸಂವಹನ ಅಸಾಧ್ಯವಾಗಿರುವುದು ಇದಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ಆ್ಯಪ್​ಗಳ ಮೂಲಕ ನೇಮಕ:ಮೆಸೇಜಿಂಗ್ ಅಪ್ಲಿಕೇಶನ್‌ಗಳಾದ ಎಕ್ಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮೂಲಕ ಇಲ್ಲಿನ ಯುವಕರನ್ನು ನೇಮಿಸಿಕೊಳ್ಳುತ್ತಿದೆ. ಇದರ ಪತ್ತೆ ಮರೆಮಾಚಲು ನಕಲಿ ಪ್ರೊಫೈಲ್‌ಗಳು ಮತ್ತು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್‌ಗಳನ್ನು (ವಿಪಿಎನ್‌ಗಳು) ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗುರುತಿಸಿದ ವ್ಯಕ್ತಿಗಳನ್ನು ಖಾಸಗಿ ಗ್ರೂಪ್​ಗಳಿಗೆ ಸೇರಿಸಲಾಗುತ್ತದೆ. ಅದರಲ್ಲಿ ಭಾರತೀಯ ಸೇನಾ ಪಡೆಗಳು ಮಾಡಿದ್ದಾರೆ ಎಂದು ಆರೋಪಿಸಿದ ದಾಳಿ, ದೌರ್ಜನ್ಯಗಳ ವಿಡಿಯೋಗಳನ್ನು ಹರಿಬಿಟ್ಟು ಸದಸ್ಯರನ್ನು ಪ್ರಚೋದನೆಗೆ ಒಳಪಡಿಸಲಾಗುತ್ತಿದೆ. ಸೇನೆ ವಿರೋಧಿ ಮನಸ್ಥಿತಿಯನ್ನು ಅವರಲ್ಲಿ ಬೆಳೆಸಲಾಗುತ್ತಿದೆ ಎಂಬ ಅಂಶವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಯುವಕರ ತಲೆಕೆಡಿಸಿದ ಬಳಿಕ ಅವರನ್ನು ಪಾಕಿಸ್ತಾನದ ಗುಪ್ತಚರ ದಳವಾದ ಐಎಸ್​​ಐಗೆ ಲಿಂಕ್ ಮಾಡಲಾಗುತ್ತದೆ. ಬಳಿಕ ಅವರಿಗೆ ಯೂಟ್ಯೂಬ್​​ ಸೇರಿದಂತೆ ಆನ್​​ಲೈನ್​ ಲಿಂಕ್​ಗಳ ಮೂಲಕ ಭಯೋತ್ಪಾದನೆ ನಡೆಸುವ ಬಗ್ಗೆ ವರ್ಚುವಲ್​ ತರಬೇತಿ ನೀಡಲಾಗುತ್ತದೆ. ದಕ್ಷಿಣ ಕಾಶ್ಮೀರದಲ್ಲಿ ಈ ನೇಮಕಾತಿ ಮತ್ತು ತರಬೇತಿ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಅಧಿಕಾರಿಗಳು ಗುರುತಿಸಿದ್ದಾರೆ.

ಆನ್​​ಲೈನ್​ ನೇಮಕದ ಮೇಲೆ ನಿಗಾ:ಇನ್ನು, ಉಗ್ರ ಸಂಘಟನೆಗಳು ನಡೆಸುತ್ತಿರುವ ಆನ್​​ಲೈನ್​​ ನೇಮಕದ ಬಗ್ಗೆ ಕಣ್ಣಿಡಲು ಮತ್ತು ದಾಳಿಗಳನ್ನು ತಡೆಯಲು ಗುಪ್ತಚರ ದಳಗಳು ನಿಗಾ ಘಟಕಗಳನ್ನು ರಚಿಸಿಕೊಂಡಿವೆ. ಅಂತರ್ಜಾಲದ ಲಭ್ಯತೆಯು ಉಗ್ರರಿಗೆ ಉತ್ತಮ ಸಾಧನವಾಗಿದೆ. ಕೆಲ ವ್ಯಕ್ತಿಗಳು ನಿಷೇಧಿತ ಜಮಾತ್-ಎ-ಇಸ್ಲಾಮಿ ಸೇರಿದಂತೆ ತೀವ್ರಗಾಮಿ ಗುಂಪುಗಳಿಗೆ ಸೇರಿದ್ದಾರೆ. ರಾಜೌರಿ, ಪೂಂಚ್​​ ಸೇರಿ ಹಲವು ಜಿಲ್ಲೆಗಳಲ್ಲಿ ನಿಷೇಧಿತ ಎನ್‌ಕ್ರಿಪ್ಟೆಡ್ ಮೆಸೇಜಿಂಗ್, ಟೆಲಿಗ್ರಾಮ್ ಮತ್ತು ಮಾಸ್ಟೋಡಾನ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: 99 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ABOUT THE AUTHOR

...view details