ಕರ್ನಾಟಕ

karnataka

ETV Bharat / bharat

ಚೀನಾಕ್ಕೆ ಭೇಟಿ ನೀಡಲಿರುವ ಎನ್​​​ಎಸ್​ಎ ಅಜಿತ್ ದೋವಲ್​: ಕಾರಣ? - NSA DOVAL TO VISIT CHINA THIS WEEK

ಕಮ್ಯುನಿಷ್ಟ್​ ಪಕ್ಷದ ಪೊಲಿಟಿಕಲ್​ ಬ್ಯೂರೋದ ವಾಂಗ್ ಯಿ ಅವರೊಂದಿಗೆ ಸಮಾಲೋಚನೆ ನಡೆಸಲು ದೇಶದ ವಿಶೇಷ ಪ್ರತಿನಿಧಿಯಾಗಿ ಎನ್‌ಎಸ್‌ಎ ದೋವಲ್ ಈ ವಾರ ಚೀನಾಕ್ಕೆ ಭೇಟಿ ನೀಡಲಿದ್ದಾರೆ.

SINOINDIA-DIALOGUE-2NDLD DOVAL
ಚೀನಾಕ್ಕೆ ಭೇಟಿ ನೀಡಲಿರುವ ಎನ್​​​ಎಸ್​ಎ ಅಜಿತ್ ದೋವಲ್​: ಕಾರಣ? (ಸಾಂದರ್ಭಿಕ ಚಿತ್ರ -IANS)

By PTI

Published : 4 hours ago

ನವದೆಹಲಿ:ಐದು ವರ್ಷಗಳ ಅಂತರದ ನಂತರ ಭಾರತ ಮತ್ತು ಚೀನಾ ಗಡಿ ಪ್ರಶ್ನೆಗೆ ಸಂಬಂಧಿಸಿದಂತೆ ಬುಧವಾರ ಬೀಜಿಂಗ್‌ನಲ್ಲಿ ವಿಶೇಷ ಪ್ರತಿನಿಧಿಗಳ ಸಭೆ ನಡೆಯಲಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನೇತೃತ್ವದ ನಿಯೋಗ ಚೀನಾದೊಂದಿಗೆ ಮಹತ್ವದ ಸಭೆ ನಡೆಸಲಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿದ್ದು, ವಿಶೇಷ ಪ್ರತಿನಿಧಿಗಳ (SR) ಸಂವಾದದ ಕುರಿತು ಮಾಹಿತಿ ನೀಡಿದೆ. ಭಾರತ -ಚೀನಾ ಗಡಿಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉಭಯ ಕಡೆಗಳಲ್ಲಿ ಮಾತುಕತೆ ನಡೆಯಲಿದೆ. "ನ್ಯಾಯಯುತ, ಸಮಂಜಸ ಮತ್ತು ಪರಸ್ಪರ ಸ್ವೀಕಾರಾರ್ಹ" ಪರಿಹಾರವನ್ನು ಕಂಡುಕೊಳ್ಳಲು ಈ ಸಭೆಯಲ್ಲಿ ಒಂದು ಪರಿಹಾರ ಕಂಡುಕೊಳ್ಳಲಿದೆ.

ಭಾರತ-ಚೀನಾ ಗಡಿ ಪ್ರಶ್ನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಭಾರತದ ವಿಶೇಷ ಪ್ರತಿನಿಧಿ ಅಜಿತ್ ದೋವಲ್ ಅವರು ಡಿಸೆಂಬರ್ 18 ರಂದು ಬೀಜಿಂಗ್‌ನಲ್ಲಿ SRs ನ 23 ನೇ ಸಭೆಯನ್ನು ಕಮ್ಯುನಿಸ್ಟ್ ನ ಪೊಲಿಟಿಕಲ್​ ಬ್ಯೂರೋ ಸದಸ್ಯ ವಾಂಗ್ ಯಿ ಅವರೊಂದಿಗೆ ನಡೆಸಲಿದ್ದಾರೆ. ಪಾರ್ಟಿ ಆಫ್ ಚೀನಾ (CPC) ಕೇಂದ್ರ ಸಮಿತಿ ಮತ್ತು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವರು ಈ ಸಂದರ್ಭದಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರತ ಚೀನಾ ವಿಶೇಷ ಪ್ರತಿನಿಧಿಗಳ ಸಭೆ ಡಿಸೆಂಬರ್ 2019ರಲ್ಲಿ ನವದೆಹಲಿಯಲ್ಲಿ ನಡೆಸಲಾಗಿತ್ತು.

ಪೂರ್ವ ಲಡಾಖ್‌ನ ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನಲ್ಲಿ ಭಾರತ ಮತ್ತು ಚೀನಾ ಒಪ್ಪಂದವನ್ನು ದೃಢಪಡಿಸಿದ ಎರಡು ದಿನಗಳ ನಂತರ ಅಕ್ಟೋಬರ್ 23 ರಂದು ಕಜಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಸಭೆ ನಡೆದಿತ್ತು. ಈ ವೇಳೆ, ಉಭಯ ರಾಷ್ಟ್ರಗಳ ನಡುವೆ ಮಾತುಕತೆ ಪುನಾರಂಭಿಸುವ ಕುರಿತು ನಿರ್ಧಾರವನ್ನು ಕೈಗೊಳ್ಳಲಾಗಿತ್ತು.

2020ರಲ್ಲಿ ಪೂರ್ವ ಲಡಾಖ್‌ನಲ್ಲಿನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ಎರಡೂ ರಾಷ್ಟ್ರಗಳ ನಡುವೆ ಮಿಲಿಟರಿ ಬಿಕ್ಕಟ್ಟು ಪ್ರಾರಂಭವಾಯಿತು. ಆ ವರ್ಷದ ಜೂನ್‌ನಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಮಾರಣಾಂತಿಕ ಘರ್ಷಣೆಯು ಎರಡು ದೇಶಗಳ ನಡುವಣ ಬಾಂಧವ್ಯಕ್ಕೆ ಧಕ್ಕೆ ತಂದಿದ್ದವು.

ಬ್ರಿಕ್ಸ್​ ಶೃಂಗದ ವೇಳೆ ಮೋದಿ - ಕ್ಸಿ ಮಾತುಕತೆ:ಅಕ್ಟೋಬರ್ 21 ರಂದು ಅಂತಿಮಗೊಳಿಸಲಾದ ಒಪ್ಪಂದದಡಿ ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನ ಕೊನೆಯ ಎರಡು ಘರ್ಷಣೆ ಬಿಂದುಗಳಿಂದ ಬೇರ್ಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಉಭಯ ರಾಷ್ಟ್ರಗಳ ನಡುವಣ ಉದ್ವಿಗ್ನ ಪರಿಸ್ಥಿತಿಗೆ ತೆರೆ ಬಿದ್ದಿತ್ತು.

ಒಪ್ಪಂದವನ್ನು ದೃಢಪಡಿಸಿದ ಎರಡು ದಿನಗಳ ನಂತರ, ರಷ್ಯಾದ ಕಜಾನ್ ನಗರದಲ್ಲಿ ಬ್ರಿಕ್ಸ್ ಶೃಂಗಸಭೆ ವೇಳೆ ಮೋದಿ ಮತ್ತು ಕ್ಸಿ ಮಾತುಕತೆ ನಡೆಸಿದ್ದರು. ಸುಮಾರು 50 ನಿಮಿಷಗಳ ಸಭೆಯಲ್ಲಿ ಗಡಿ ಪ್ರಶ್ನೆಗೆ ಸಂಬಂಧಿಸಿದಂತೆ ವಿಶೇಷ ಪ್ರತಿನಿಧಿಗಳ ಸಂವಾದ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಉಭಯ ನಾಯಕರು ಸಮಾಲೋಚನೆ ನಡೆಸಿದ್ದರು.

ಪರಸ್ಪರ ನಂಬಿಕೆ, ಪರಸ್ಪರ ಗೌರವ ಮತ್ತು ಪರಸ್ಪರ ಸೂಕ್ಷ್ಮತೆಯು ಸಂಬಂಧಗಳ ಆಧಾರವಾಗಿ ಈ ಬಾಂಧವ್ಯ ಉಳಿಯಬೇಕು ಎಂದು ಪ್ರಧಾನಿ ಆಗ ಒತ್ತಿ ಹೇಳಿದ್ದರು. ಅಷ್ಟೇ ಅಲ್ಲ ಗಡಿಯಲ್ಲಿ ಶಾಂತಿ ನೆಲೆಸದಿದ್ದರೆ ಚೀನಾ ಜತೆಗಿನ ಬಾಂಧವ್ಯ ಸಾಮಾನ್ಯವಾಗಿರಲು ಸಾಧ್ಯವಿಲ್ಲ ಎಂದು ಭಾರತ ಪ್ರತಿಪಾದಿಸುತ್ತಿದೆ.

ಇದನ್ನು ಓದಿ:'ಪ್ಯಾಲೆಸ್ಟೈನ್​' ಬರಹದ ಬ್ಯಾಗ್ ಹೆಗಲಿಗೇರಿಸಿಕೊಂಡು​ ಸಂಸತ್ತಿಗೆ ಬಂದ ಪ್ರಿಯಾಂಕಾ ವಾದ್ರಾ

ABOUT THE AUTHOR

...view details