ಕರ್ನಾಟಕ

karnataka

ETV Bharat / bharat

ಕಾಲ್ತುಳಿತದ ನಂತರ ಮಹಾಕುಂಭದಲ್ಲಿ ಜನದಟ್ಟಣೆ ನಿರ್ವಹಣೆಗೆ ಹಲವು ಬದಲಾವಣೆ; ವಿವಿಐಪಿ ಪಾಸ್​ ರದ್ದು - MAHA KUMBH STAMPEDE

ಕಾಲ್ತುಳಿತ ದುರಂತದ ಬೆನ್ನಲ್ಲೇ ಮುಂದಿನ ಪವಿತ್ರ ದಿನಗಳಲ್ಲಿ ಭಕ್ತರ ದಟ್ಟಣೆ ನಿರ್ವಹಣೆಗೆ ಸಿಎಂ ಯೋಗಿ ಆದಿತ್ಯನಾಥ್‌ ಸರ್ಕಾರ ಹಲವು ಬದಲಾವಣೆಗಳನ್ನು ಮಾಡಿ ಮಾರ್ಗಸೂಚಿ ಪ್ರಕಟಿಸಿದೆ.

UP govts key changes after Maha Kumbh stampede
ಮಹಾಕುಂಭ ಮೇಳದಲ್ಲಿ ಭಕ್ತರು (ANI)

By ETV Bharat Karnataka Team

Published : Jan 30, 2025, 2:09 PM IST

Updated : Jan 30, 2025, 2:24 PM IST

ಪ್ರಯಾಗ್​ರಾಜ್(ಉತ್ತರ ಪ್ರದೇಶ): ಮಹಾಕುಂಭ ಮೇಳದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಸರ್ಕಾರ ಪ್ರಮುಖವಾಗಿ ಐದು ಬದಲಾವಣೆಗೆ ಮುಂದಾಗಿದೆ. ಈ ಬದಲಾವಣೆಗಳನ್ನು ತಕ್ಷಣ ಜಾರಿ ಮಾಡಿ, ಕುಂಭ ಮೇಳವನ್ನು ಸುರಕ್ಷಿತವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

  • ನೋ-ವೆಹಿಕಲ್​ ಝೋನ್​: ಮಹಾ ಕುಂಭ ಮೇಳದ ಪ್ರದೇಶಕ್ಕೆ ಎಲ್ಲಾ ರೀತಿಯ ವಾಹನಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ.
  • ವಿವಿಐಪಿ ಪಾಸ್​ ರದ್ದು: ಯಾವುದೇ ವಿನಾಯಿತಿ ಇಲ್ಲದೇ ವಿಶೇಷ ಪಾಸ್​ಗಳ ಪ್ರವೇಶಕ್ಕೆ ಅನುಮತಿ ಇಲ್ಲ.
  • ಒನ್​ ವೇ ಮಾರ್ಗ: ಭಕ್ತರಿಗೆ ಅನುಕೂಲವಾಗುವಂತೆ ಏಕ ಮುಖ ಮಾರ್ಗದಲ್ಲಿ ಟ್ರಾಫಿಕ್​ ವ್ಯವಸ್ಥೆ ಜಾರಿಗೆ ನಿರ್ಧಾರ.
  • ವಾಹನ ಪ್ರವೇಶಕ್ಕೆ ನಿರ್ಬಂಧ: ಪ್ರಯಾಗ್​ರಾಜ್​ ನೆರೆಹೊರೆ ಜಿಲ್ಲೆಯಿಂದ ಹೊರಬರುವ ವಾಹನಗಳ ಆಗಮನವನ್ನು ನಿರ್ಬಂಧಿಸುವ ಮೂಲಕ ದಟ್ಟಣೆ ಕಡಿಮೆ ಮಾಡಲಾಗಿದೆ.
  • ಫೆ. 4ರವರೆಗೆ ಕಟ್ಟುನಿಟ್ಟಿನ ನಿರ್ಬಂಧ: ನಗರದಲ್ಲಿ ಫೆ. 4ರವರೆಗೆ ನಾಲ್ಕು ಚಕ್ರದ ವಾಹನಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
Last Updated : Jan 30, 2025, 2:24 PM IST

ABOUT THE AUTHOR

...view details