ಕರ್ನಾಟಕ

karnataka

ETV Bharat / bharat

'ಪೂಜಾ ಸ್ಥಳ ಕಾಯ್ದೆ'ಯಡಿ ಹೊಸ ದಾವೆ, ತೀರ್ಪು ಬೇಡ: ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ಪೂಜಾ ಸ್ಥಳಗಳ ಕಾಯ್ದೆಯ ಸಾಂವಿಧಾನಿಕತೆ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ಇಂದು ಸುಪ್ರೀಂ ಕೋರ್ಟ್​ನಲ್ಲಿ ನಡೆಯಿತು.

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ (IANS)

By ETV Bharat Karnataka Team

Published : 5 hours ago

Updated : 4 hours ago

ನವದೆಹಲಿ: ಯಾವುದೇ ಮಸೀದಿಯ ಕೆಳಗೆ ದೇವಾಲಯವಿದೆಯೇ ಎಂಬುದನ್ನು ಪತ್ತೆ ಮಾಡುವಂತೆ ಕೋರಿ ಯಾವುದೇ ಹೊಸ ದಾವೆಗಳನ್ನು ಸ್ವೀಕರಿಸದಂತೆ ಹಾಗೂ ಈ ಬಗ್ಗೆ ವಿಚಾರಣೆಯಲ್ಲಿರುವ ಪ್ರಕರಣಗಳಲ್ಲಿ ಯಾವುದೇ ಆದೇಶ ಹೊರಡಿಸದಂತೆ ದೇಶಾದ್ಯಂತದ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಪೂಜಾ ಸ್ಥಳಗಳ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, "ಅಸ್ತಿತ್ವದಲ್ಲಿರುವ ದಾವೆಗಳಲ್ಲಿಯೂ ಸಮೀಕ್ಷೆಯ ಆದೇಶ ಅಥವಾ ಇತರ ಯಾವುದೇ ಪರಿಣಾಮಕಾರಿ ಆದೇಶವನ್ನು ಹೊರಡಿಸಬಾರದು" ಎಂದು ಹೇಳಿದೆ.

ಈ ಕಾಯ್ದೆಯು ಆಗಸ್ಟ್ 15, 1947ರಂದು ಅಸ್ತಿತ್ವದಲ್ಲಿದ್ದ ಪೂಜಾ ಸ್ಥಳಗಳನ್ನು ಮರಳಿ ಪಡೆಯಲು ಅಥವಾ ಅವುಗಳ ಸ್ವರೂಪವನ್ನು ಬದಲಾಯಿಸಲು ಮೊಕದ್ದಮೆಗಳನ್ನು ದಾಖಲಿಸುವುದನ್ನು ನಿಷೇಧಿಸುತ್ತದೆ. ಈ ಕಾಯ್ದೆಯು ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ಖರು ನಾಶವಾದ ತಮ್ಮ 'ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆಗಳನ್ನು' ಪುನಃಸ್ಥಾಪಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಪೂಜಾ ಸ್ಥಳಗಳ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಪಿ.ವಿ.ಸಂಜಯ್ ಕುಮಾರ್ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, "ನಾವು 1991ರ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿ, ಬಾಹ್ಯರೇಖೆಗಳು ಮತ್ತು ವ್ಯಾಪ್ತಿಯನ್ನು ಪರಿಶೀಲಿಸುತ್ತಿದ್ದೇವೆ" ಎಂದು ಹೇಳಿದೆ.

ಈ ಕಾಯ್ದೆಯ ವಿರುದ್ಧ ಅಥವಾ ಅದರ ಅನುಷ್ಠಾನವನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಇದನ್ನೂ ಓದಿ: 'ಒಂದು ರಾಷ್ಟ್ರ, ಒಂದು ಚುನಾವಣೆ' ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಅಸ್ತು: ಮೂಲಗಳು

Last Updated : 4 hours ago

ABOUT THE AUTHOR

...view details