ನವದೆಹಲಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಫೆಬ್ರವರಿ 9ರಿಂದ NEET-UG 2024 ಪರೀಕ್ಷೆಗೆ ಆನ್‌ಲೈನ್ ಅರ್ಜಿಗಳನ್ನು ಪ್ರಾರಂಭಿಸಿತ್ತು. ಏಜೆನ್ಸಿಯು ಮಂಗಳವಾರ ತಡರಾತ್ರಿ ವಿದೇಶಿ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ನೀಡಿದೆ. ಈಗಾಗಲೇ ಭಾರತೀಯ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿರುವ ಮತ್ತು ವಿದೇಶದಲ್ಲಿ ಪರೀಕ್ಷೆಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು, ಆನ್‌ಲೈನ್ ಅಪ್ಲಿಕೇಶನ್‌ನಲ್ಲಿನ ದೋಷಗಳನ್ನು ಸರಿಪಡಿಸಲು ಅವಕಾಶ ಕಲ್ಪಿಸಲಾಗಿದೆ.
ಭಾರತದ ಹೊರಗಿನ 12 ದೇಶಗಳ 14 ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ಭಾರತದ ನೆರೆಯ ಮತ್ತು ಗಲ್ಫ್ ರಾಷ್ಟ್ರಗಳಲ್ಲಿವೆ. ಪ್ರತಿ ಬಾರಿ ನೋಂದಣಿ ಪ್ರಾರಂಭವಾದ ತಕ್ಷಣ ಇವುಗಳನ್ನು ಘೋಷಿಸಲಾಗುತ್ತಿತ್ತು. ಆದರೆ, ಈ ಬಾರಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಹಾಗೆ ಮಾಡಲಿಲ್ಲ. ಅದಕ್ಕಾಗಿಯೇ ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ ಎಂದು ಕೋಟಾದ ಖಾಸಗಿ ಕೋಚಿಂಗ್ ಸಂಸ್ಥೆಯ ವೃತ್ತಿ ಕೌನ್ಸೆಲಿಂಗ್ ತಜ್ಞ ಪಾರಿಜಾತ್ ಮಿಶ್ರಾ ತಿಳಿಸಿದರು.
ಯಾವುದೇ ಶುಲ್ಕ ಪಾವತಿಸದೇ ವಿದೇಶಿ ನಗರ ಆಯ್ಕೆಗೆ ಅವಕಾಶ:ಭಾರತೀಯ ನಗರದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ ತಿದ್ದುಪಡಿಗಾಗಿ ಅವಕಾಶ ಕೊಡಲಾಗಿದೆ. ಯಾವುದೇ ಶುಲ್ಕವನ್ನು ಪಾವತಿಸದೇ ತಮ್ಮ ವಿದೇಶಿ ನಗರವನ್ನು ಆಯ್ಕೆ ಮಾಡಬಹುದು ಎಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡಿದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ತಿದ್ದುಪಡಿಗೆ ಅಧಿಕೃತ ವೆಬ್ಸೈಟ್ನಲ್ಲಿ ಅನುಕೂಲ ಮಾಡಿಕೊಡಲಾಗಿದೆ. ಇದರೊಂದಿಗೆ, ಹೊರ ದೇಶಗಳಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಗರವನ್ನು ಬದಲಾಯಿಸುವಾಗ ಶುಲ್ಕದ ನಡುವಿನ ವ್ಯತ್ಯಾಸವನ್ನು ಮಾತ್ರ ಠೇವಣಿ ಮಾಡಬೇಕಾಗುತ್ತದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ವಿದೇಶಿ ಅಭ್ಯರ್ಥಿಗಳಿಗೆ 9,500 ರೂ.ಗೆ ಶುಲ್ಕ ನಿಗದಿಪಡಿಸಿತ್ತು ಎಂದು ತಜ್ಞ ಮಿಶ್ರಾ ಮಾಹಿತಿ ನೀಡಿದರು.
ಯುಎಇಯಲ್ಲಿಯೇ ಮೂರು ಪರೀಕ್ಷಾ ಕೇಂದ್ರ: ತಜ್ಞ ಮಿಶ್ರಾ ಅವರ ಪ್ರಕಾರ, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್, ಥಾಯ್ಲೆಂಡ್, ಶ್ರೀಲಂಕಾ, ಕತಾರ್, ನೇಪಾಳ, ಮಲೇಷ್ಯಾ, ನೈಜೀರಿಯಾ, ಬಹ್ರೇನ್, ಓಮನ್, ಸೌದಿ ಅರೇಬಿಯಾ ಮತ್ತು ಸಿಂಗಾಪುರದಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಗರಿಷ್ಠ ಮೂರು ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ, ಅಬುಧಾಬಿ ಮತ್ತು ಶಾರ್ಜಾದಲ್ಲಿ ನಿರ್ಮಿಸಲಾಗಿದೆ. ಇದಲ್ಲದೇ, ಕುವೈತ್ ಸಿಟಿ, ಬ್ಯಾಂಕಾಕ್, ಕೊಲಂಬೊ, ದೋಹಾ, ಕಠ್ಮಂಡು, ಕೌಲಾಲಂಪುರ್, ಲಾಗೋಸ್, ಮನಾಮಾ, ಮಸ್ಕತ್, ರಿಯಾದ್ ಮತ್ತು ಸಿಂಗಾಪುರದಲ್ಲಿ ಕೇಂದ್ರಗಳಿವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:ನವದೆಹಲಿಯಲ್ಲಿ ಇಂದಿನಿಂದ ರೈಸಿನಾ ಸಮ್ಮೇಳನ: ವಿಶ್ವನಾಯಕರ ಆಗಮನ