ಕರ್ನಾಟಕ

karnataka

ETV Bharat / bharat

ಯುಪಿಎ ಬಿಟ್ಟು ಹೋಗಿದ್ದ ಸವಾಲುಗಳನ್ನು ಎನ್​ಡಿಎ ಮೆಟ್ಟಿ ನಿಂತಿದೆ: ಕೇಂದ್ರದ ಶ್ವೇತಪತ್ರ - ಕೇಂದ್ರ ಸರ್ಕಾರದ ಶ್ವೇತಪತ್ರ

2004ರಿಂದ 2014ರ ನಡುವೆ ಯುಪಿಎ ಸರ್ಕಾರದ ಅವಧಿಯ ಆರ್ಥಿಕ ಸ್ಥಿತಿ ಮತ್ತು 2014ರಿಂದ 2024ರ ಮಧ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಿದೆ.

nda-govt-successfully-overcame-challenges-left-by-upa-white-paper
ಯುಪಿಎ ಬಿಟ್ಟು ಹೋಗಿದ್ದ ಸವಾಲುಗಳನ್ನು ಎನ್​ಡಿಎ ಮೆಟ್ಟಿನಿಂತಿದೆ: ಕೇಂದ್ರದ ಶ್ವೇತಪತ್ರ

By PTI

Published : Feb 8, 2024, 6:27 PM IST

ನವದೆಹಲಿ: ''ಯುಪಿಎ ಸರ್ಕಾರ ಬಿಟ್ಟು ಹೋಗಿದ್ದ ಸವಾಲುಗಳನ್ನು ಕಳೆದ 10 ವರ್ಷದಲ್ಲಿ ಎನ್​ಡಿಎ ಸರ್ಕಾರ ಮೆಟ್ಟಿನಿಂತಿದೆ. ಅಲ್ಲದೇ, ದೇಶವನ್ನು ಸುಸ್ಥಿರ ಉನ್ನತ ಬೆಳವಣಿಗೆಯ ಹಾದಿಯಲ್ಲಿ ಇರಿಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ" ಎಂದು ಕೇಂದ್ರ ಸರ್ಕಾರ ಗುರುವಾರ ಹೊರಡಿಸಿದ ಶ್ವೇತಪತ್ರದಲ್ಲಿ ತಿಳಿಸಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ದೇಶದ ಆರ್ಥಿಕತೆಯ ಕುರಿತು 59 ಪುಟಗಳ ಶ್ವೇತಪತ್ರವನ್ನು ಲೋಕಸಭೆಯಲ್ಲಿ ಮಂಡಿಸಿದರು. ''2014ರಲ್ಲಿ ಮೋದಿ ಸರ್ಕಾರವು ಅಧಿಕಾರ ವಹಿಸಿಕೊಂಡಾಗ ಆರ್ಥಿಕತೆಯು ದುರ್ಬಲವಾಗಿತ್ತು. ಸಾರ್ವಜನಿಕ ಹಣಕಾಸು ವ್ಯಸಸ್ಥೆ ಕೆಟ್ಟ ಸ್ಥಿತಿಯಲ್ಲಿತ್ತು. ಆರ್ಥಿಕ ದುರುಪಯೋಗ ಮತ್ತು ಆರ್ಥಿಕ ಅಶಿಸ್ತು ಮತ್ತು ವ್ಯಾಪಕ ಭ್ರಷ್ಟಾಚಾರವೂ ಇತ್ತು'' ಎಂದು ಶ್ವೇತಪತ್ರದಲ್ಲಿ ವಿವರಿಸಲಾಗಿದೆ.

''ಅದೊಂದು ಬಿಕ್ಕಟ್ಟಿನ ಪರಿಸ್ಥಿತಿ. ಹಂತ-ಹಂತವಾಗಿ ಆರ್ಥಿಕತೆಯನ್ನು ಸರಿಪಡಿಸುವ ಮತ್ತು ಆಡಳಿತ ವ್ಯವಸ್ಥೆಗಳನ್ನು ಕ್ರಮಬದ್ಧಗೊಳಿಸುವ ದೊಡ್ಡ ಜವಾಬ್ದಾರಿ ಇತ್ತು. ಆರ್ಥಿಕ ಚಟುವಟಿಕೆಗಳನ್ನು ಸುಗಮಗೊಳಿಸುವಲ್ಲಿ ಯುಪಿಎ ಸರ್ಕಾರ ಸಂಪೂರ್ಣ ವಿಫಲವಾಗಿತ್ತು. ಇದರ ಬದಲಿಗೆ ಯುಪಿಎ ಸರ್ಕಾರವು ಆರ್ಥಿಕತೆಯು ಮತ್ತಷ್ಟು ಹಿಂದಕ್ಕೆ ತಳ್ಳಲು ಅಡೆತಡೆಗಳನ್ನು ಸೃಷ್ಟಿಸಿತ್ತು. 2014ರಲ್ಲಿ ಎನ್‌ಡಿಎ ಸರ್ಕಾರವು ತೀವ್ರವಾಗಿ ಹಾನಿಗೊಳಗಾದ ಆರ್ಥಿಕತೆಯನ್ನು ಆನುವಂಶಿಕವಾಗಿ ಪಡೆದಿತ್ತು'' ಎಂದು ಕೇಂದ್ರ ಹೇಳಿದೆ.

"ನಮ್ಮ ಸರ್ಕಾರವು ಹಿಂದಿನ ಸರ್ಕಾರಕ್ಕಿಂತ ಭಿನ್ನವಾಗಿ ಗಟ್ಟಿಮುಟ್ಟಾದ ತಳಹದಿಯನ್ನು ನಿರ್ಮಿಸುವುದರ ಜೊತೆಗೆ ಆರ್ಥಿಕತೆಯ ಅಡಿಪಾಯದಲ್ಲಿ ಅಗತ್ಯ ಹೂಡಿಕೆ ಮಾಡಿದೆ. ಕಳೆದ ಹತ್ತು ವರ್ಷಗಳನ್ನು ಹಿಂತಿರುಗಿ ನೋಡಿದಾಗ, ಹಿಂದಿನ ಸರ್ಕಾರವು ಬಿಟ್ಟುಹೋದ ಸವಾಲುಗಳನ್ನು ನಾವು ಯಶಸ್ವಿಯಾಗಿ ಮೆಟ್ಟಿನಿಂತಿದ್ದೇವೆ ಎಂದು ತೃಪ್ತಿಯಿಂದ ಹೇಳಬಹುದು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ನಮ್ಮ ಉದ್ದೇಶ. ಇದು ನಮ್ಮ ಕರ್ತವ್ಯ ಕಾಲ'' ಎಂದು ಶ್ವೇತಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:'ನೀವು ಪ್ರಧಾನಿಯಾಗುವುದನ್ನು ಕಾಂಗ್ರೆಸ್​ ಸಹಿಸಿಕೊಳ್ಳುವುದೇ': ಖರ್ಗೆಗೆ ದೇವೇಗೌಡರ ಪ್ರಶ್ನೆ

ABOUT THE AUTHOR

...view details