ಕರ್ನಾಟಕ

karnataka

ETV Bharat / bharat

ಕುಟುಂಬ ರಾಜಕಾರಣದ ಟೀಕೆಯ ಮಧ್ಯೆ ಜಮ್ಮು ಕಾಶ್ಮೀರದಲ್ಲಿ ಗೆದ್ದ ನ್ಯಾಷನಲ್​ ಕಾನ್ಫರೆನ್ಸ್

ಕಾಂಗ್ರೆಸ್​ ಜೊತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದ ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷ 41 ಸ್ಥಾನದಲ್ಲಿ ಮುನ್ನಡೆ ಕಂಡಿದೆ.

By ETV Bharat Karnataka Team

Published : 5 hours ago

abdullahs National Conference Leading in Jammu and Kashmir
ಫಾರುಖ್​ ಅಬ್ಧುಲ್ಲಾ ಮತ್ತು ಒಮರ್​ ಅಬ್ಧುಲ್ಲಾ (ANI)

ನವದೆಹಲಿ: ಬಿಜೆಪಿಯ ಕುಟುಂಬ ರಾಜಕಾರಣದ ಟೀಕೆಯ ನಡುವೆಯೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಫಾರೂಕ್ ಅಬ್ಧುಲ್ಲಾ ನೇತೃತ್ವದ ನ್ಯಾಷನಲ್​ ಕಾನ್ಫರೆನ್ಸ್ (ಎನ್‌ಸಿ) ಪಕ್ಷ​​ ಮುನ್ನಡೆ ಸಾಧಿಸಿದೆ.

ಕಾಂಗ್ರೆಸ್​ ಜೊತೆ ಚುನಾವಣಾಪೂರ್ವ ಮೈತ್ರಿಯೊಂದಿಗೆ ಕಣಕ್ಕಿಳಿದಿದ್ದ ಎನ್‌ಸಿ 41 ಸ್ಥಾನಗಳಲ್ಲಿ ಮುನ್ನಡೆ ಕಂಡರೆ, ಕಾಂಗ್ರೆಸ್​ 6 ಸ್ಥಾನ ಭದ್ರಪಡಿಸಿಕೊಂಡಿದೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ತಿಳಿಸಿವೆ. ಸದ್ಯದ ಮಾಹಿತಿಯಂತೆ, ಎನ್​ಸಿ ಶೇ 23.10 ಮತ್ತು ಕಾಂಗ್ರೆಸ್​ ಶೇ 11.96 ಮತಗಳನ್ನು ಪಡೆದಿವೆ.

ದಶಕಗಳ ಬಳಿಕ ಹಾಗೂ ಕಣಿವೆ ನಾಡಿನಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು.

ಬಿಜೆಪಿ ಕಾಶ್ಮೀರದಲ್ಲಿ 13 ಮತ್ತು ಜಮ್ಮುವಿನಲ್ಲಿ 43 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಒಟ್ಟಾರೆ 29 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಪಕ್ಷದ ಮತ ಹಂಚಿಕೆ ಶೇ 22.36ರಷ್ಟಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ 25 ಕ್ಷೇತ್ರದಲ್ಲಿ ಗೆಲುವು ಕಂಡಿತ್ತು.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ವಿಧಿ 370 ಅನ್ನು ಮರುಸ್ಥಾಪಿಸುವುದಾಗಿ ಎನ್​ಸಿ ಚುನಾವಣೆಯಲ್ಲಿ ಮತ ಪ್ರಚಾರ ನಡೆಸಿತ್ತು. (ಐಎಎನ್​ಎಸ್​)

ಇದನ್ನೂ ಓದಿ:ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್​ ಮೈತ್ರಿಕೂಟಕ್ಕೆ ‌ಮುನ್ನಡೆ

ABOUT THE AUTHOR

...view details