ETV Bharat / bharat

ಯಾವಾಗೆಲ್ಲ ಎಕ್ಸಿಟ್​ ಪೋಲ್​ಗಳು ಗುರಿ ತಪ್ಪಿದ್ದವು ಗೊತ್ತಾ? - EXIT POLLS

ಚುನಾವಣೋತ್ತರ ಸಮೀಕ್ಷೆಗಳು ಫಲಿತಾಂಶಗಳನ್ನು ದೊಡ್ಡ ಮಟ್ಟದಲ್ಲಿ ತಪ್ಪಾಗಿ ಅಂದಾಜು ಮಾಡಿದ ಕೆಲ ಉದಾಹರಣೆಗಳು ಇಲ್ಲಿವೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Oct 8, 2024, 7:49 PM IST

ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗುತ್ತಿದ್ದಂತೆ, ಸಮೀಕ್ಷೆದಾರರು ತಮ್ಮ ಭವಿಷ್ಯವಾಣಿಗಳು ತಪ್ಪಾಗಿರುವುದನ್ನು ನೋಡಿ ಮತ್ತೊಮ್ಮೆ ಆಘಾತಕ್ಕೊಳಗಾಗಿದ್ದಾರೆ. ಶೇ 67.90 ರಷ್ಟು ಮತದಾನವಾಗಿದ್ದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹಲವಾರು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಸಮೀಕ್ಷೆಗಳು ಉಲ್ಟಾ ಆಗಿವೆ. ಇದೇ ರೀತಿ ಹಿಂದಿನ ಕೆಲ ವರ್ಷಗಳಲ್ಲಿ ತಪ್ಪಾದ ಕೆಲ ಸಮೀಕ್ಷೆಗಳ ವಿವರ ಇಲ್ಲಿದೆ.

2024 ರ ಹರಿಯಾಣ ವಿಧಾನಸಭಾ ಚುನಾವಣೆ: ಹೆಚ್ಚಿನ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದಿವೆ. ಆದರೆ ಫಲಿತಾಂಶಗಳು ಬಿಜೆಪಿ ಪರವಾಗಿದೆ.

ಲೋಕಸಭಾ ಚುನಾವಣೆ 2024: 2024 ರ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್​ಡಿಎ) ಭರ್ಜರಿ ಗೆಲುವು ಸಾಧಿಸಲಿದೆ ಎಂದು ಕನಿಷ್ಠ 12 ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎನ್​ಡಿಎ 361-401 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದರೆ, ನ್ಯೂಸ್ 24-ಟುಡೇಸ್ ಚಾಣಕ್ಯ ಎನ್​ಡಿಎ 400 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿತ್ತು. ಎಬಿಪಿ ನ್ಯೂಸ್-ಸಿ ವೋಟರ್ ಸಮೀಕ್ಷೆಯು ಎನ್​ಡಿಎಗೆ 353-383 ಸ್ಥಾನಗಳನ್ನು ನೀಡಿದರೆ, ರಿಪಬ್ಲಿಕ್ ಭಾರತ್-ಪಿ ಮಾರ್ಕ್ ಎನ್​ಡಿಎ 359 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿತ್ತು. ಆದರೆ ಅಂತಿಮವಾಗಿ ಬಿಜೆಪಿ ನೇತೃತ್ವದ ಎನ್ಡಿಎ ಕೇವಲ 293 ಸ್ಥಾನಗಳನ್ನು ಗಳಿಸಿತು. ವಾಸ್ತವವಾಗಿ, 2014 ಮತ್ತು 2019 ಕ್ಕಿಂತ ಭಿನ್ನವಾಗಿ, ಬಿಜೆಪಿ ತನ್ನದೇ ಆದ ಸರಳ ಬಹುಮತವನ್ನು ಗೆಲ್ಲಲು ಕೂಡ ವಿಫಲವಾಯಿತು ಮತ್ತು 2019 ರಲ್ಲಿ ಅದು ಹೊಂದಿದ್ದ 303 ಸ್ಥಾನಗಳ ಪೈಕಿ 63 ಸ್ಥಾನಗಳನ್ನು ಕಳೆದುಕೊಂಡು 240 ಸ್ಥಾನಗಳಿಗೆ ಸೀಮಿತವಾಯಿತು. ಇನ್ನು ಕಾಂಗ್ರೆಸ್ ನೇತೃತ್ವದ ಐಎನ್​ಡಿಐಎ ಮೈತ್ರಿಕೂಟವು 235 ಸ್ಥಾನಗಳನ್ನು ಗೆದ್ದಿತ್ತು. ಈ ಮೂಲಕ ಬಹುತೇಕ ಎಲ್ಲಾ ಸಮೀಕ್ಷೆಗಳು ಸುಳ್ಳಾಗಿದ್ದವು.

2023 ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ: ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದವು. ಬಿಜೆಪಿ ಸಉಲಭವಾಗಿ ಗೆಲ್ಲಲಿದೆ ಎಂದು ಒಂಬತ್ತರಲ್ಲಿ ನಾಲ್ಕು ಸಮೀಕ್ಷೆಗಳು ಹೇಳಿದ್ದವು. ವಿಧಾನಸಭೆಯ 230 ಸ್ಥಾನಗಳ ಪೈಕಿ ಬಿಜೆಪಿ 139 ಸ್ಥಾನಗಳನ್ನು ಪಡೆಯಲಿದೆ ಎಂದು 3 ಸಮೀಕ್ಷೆಗಳು ಹೇಳಿದ್ದವು. ಬಿಜೆಪಿ ಈ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ.

2023 ರ ಛತ್ತೀಸ್‌ಗಢ ವಿಧಾನಸಭಾ ಚುನಾವಣೆ: ಎಲ್ಲಾ ಎಂಟು ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದ್ದವು. ಆದರೆ ಬಿಜೆಪಿ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು.

ಪಶ್ಚಿಮ ಬಂಗಾಳ ಚುನಾವಣೆ- 2021: ಇಂಡಿಯಾ ಟುಡೇಯ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಬಿಜೆಪಿ 134-160 ಸ್ಥಾನ, ಟಿಎಂಸಿ 130-156 ಸ್ಥಾನ ಪಡೆಯಲಿವೆ ಎಂದು ಹೇಳಲಾಗಿತ್ತು. ರಿಪಬ್ಲಿಕ್-ಸಿಎನ್ಎಕ್ಸ್ ಸಮೀಕ್ಷೆಯು ಬಿಜೆಪಿ 138-148 ಸ್ಥಾನಗಳೊಂದಿಗೆ ಜಯಗಳಿಸಲಿದೆ ಮತ್ತು ಟಿಎಂಸಿ 128-138 ಸ್ಥಾನಗಳೊಂದಿಗೆ ಹಿನ್ನಡೆ ಅನುಭವಿಸಲಿದೆ ಎಂದು ಹೇಳಿತ್ತು. ಆದರೆ ನಿಜವಾದ ಫಲಿತಾಂಶಗಳು ಪ್ರಕಟವಾದಾಗ ಬಿಜೆಪಿ ಕೇವಲ 77 ಸ್ಥಾನಗಳಿಗೆ ಸೀಮಿತವಾಯಿತು ಮತ್ತು ಟಿಎಂಸಿ ಮತ್ತೆ ಅಧಿಕಾರಕ್ಕೆ ಬಂದಿತು.

2020 ರ ಬಿಹಾರ ವಿಧಾನಸಭಾ ಚುನಾವಣೆ: 2020 ರಲ್ಲಿ ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ ನೇತೃತ್ವದ ಮೈತ್ರಿಕೂಟ ಗೆಲ್ಲಲಿದೆ ಎಂದು ಅನೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಇದು ಸುಳ್ಳಾಯಿತು.

2019 ರ ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ: ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯ ಚುನಾವಣೆಗಳ ಸಮಯದಲ್ಲಿ, ಪ್ರಮುಖ ಸಮೀಕ್ಷೆ ಸಂಸ್ಥೆಗಳು ಮತ್ತು ಸುದ್ದಿ ಸಂಸ್ಥೆಗಳು ಬಿಜೆಪಿ ಮತ್ತು ಅದರ ಆಯಾ ಮಿತ್ರಪಕ್ಷಗಳು ದೊಡ್ಡ ಗೆಲುವು ಸಾಧಿಸಲಿವೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಅದು ಹಾಗಾಗಲಿಲ್ಲ. ಫಲಿತಾಂಶದ ನಂತರ ಎರಡೂ ರಾಜ್ಯಗಳಲ್ಲಿ ಸರ್ಕಾರ ರಚಿಸುವ ಹಗ್ಗಜಗ್ಗಾಟ ಮುಂದುವರಿಯಿತು.

2018 ರ ಛತ್ತೀಸ್‌ಗಢ ವಿಧಾನಸಭಾ ಚುನಾವಣೆ: ಛತ್ತೀಸ್ ಗಢದಲ್ಲಿ ಕಾಂಗ್ರೆಸ್​ಗೆ ಸಿಕ್ಕ ಭಾರಿ ಜನಾದೇಶವನ್ನು ಮೊದಲೇ ಊಹಿಸಲು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ವಿಫಲವಾಗಿದ್ದವು.

2017 ರ ಪಂಜಾಬ್ ವಿಧಾನಸಭಾ ಚುನಾವಣೆ: ಇತ್ತೀಚೆಗೆ 2017 ರ ಪಂಜಾಬ್ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಎಎಪಿಗೆ ಭಾರಿ ಮುನ್ನಡೆ ಸಿಗಬಹುದು ಎಂದು ಸಮೀಕ್ಷೆಗಳು ಊಹಿಸಿದ್ದವು.

ಉದಾಹರಣೆಗೆ, ಆಜ್ ತಕ್-ಆಕ್ಸಿಸ್ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ + ಎಸ್ಎಡಿಗೆ 18-22, ಕಾಂಗ್ರೆಸ್​ ಗೆ 56-61 ಮತ್ತು ಎಎಪಿಗೆ 36-41 ಸ್ಥಾನಗಳನ್ನು ನೀಡಿದರೆ, ಟಿವಿ 24 ನ್ಯೂಸ್ ಬಿಜೆಪಿ + ಎಸ್ಎಡಿಗೆ 20-25 ಸ್ಥಾನಗಳನ್ನು, ಕಾಂಗ್ರೆಸ್​ಗೆ 27-35 ಸ್ಥಾನಗಳನ್ನು ಮತ್ತು ಎಎಪಿಗೆ 70-80 ಸ್ಥಾನಗಳನ್ನು ನೀಡಿದ್ದವು. ಆದರೆ, 117 ಸ್ಥಾನಗಳಲ್ಲಿ 77 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ದೊಡ್ಡ ಮಟ್ಟದ ಗೆಲುವು ಸಾಧಿಸಿತ್ತು. ಎಸ್ಎಡಿ-ಬಿಜೆಪಿ 18 ಸ್ಥಾನಗಳನ್ನು ಗಳಿಸಿದ್ದರೆ, ಎಎಪಿ 20 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು.

2017 ರ ಯುಪಿ ಚುನಾವಣೆ: ಯುಪಿಯಲ್ಲಿ ಅತಂತ್ರ ವಿಧಾನಸಭೆ ಎದುರಾಗಬಹುದು ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದವು. ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಸುಮಾರು 160 ರಿಂದ 180 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು.

2015 ರ ದೆಹಲಿ ವಿಧಾನಸಭಾ ಚುನಾವಣೆ: ಆಮ್ ಆದ್ಮಿ ಪಕ್ಷ (ಎಎಪಿ) 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿತು. ಮತದಾನದ ದಿನದಂದು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ಎಎಪಿಗೆ ಸ್ಪಷ್ಟ ಬಹುಮತವನ್ನು ನಿರೀಕ್ಷಿಸಿದ್ದವು. ಆದರೆ ಇಷ್ಟು ದೊಡ್ಡ ಮಟ್ಟದ ಗೆಲುವು ಆಪ್​ಗೆ ಸಿಗಲಿದೆ ಎಂದು ಯಾವ ಸಮೀಕ್ಷೆಯೂ ಹೇಳಿರಲಿಲ್ಲ. ಕೇವಲ ಒಂದೇ ಒಂದು ಸಮೀಕ್ಷೆ ಆಪ್ 50 ಸ್ಥಾನಗಳನ್ನು ದಾಟಲಿದೆ ಎಂದು ಹೇಳಿತ್ತು.

2015 ರ ಬಿಹಾರ ವಿಧಾನಸಭಾ ಚುನಾವಣೆ: ಈ ಚುನಾವಣೆಯು ಚುನಾವಣೋತ್ತರ ಸಮೀಕ್ಷೆಗಳು ಸರಿಯಾದ ಅಂದಾಜುಗಳನ್ನು ಮಾಡುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂಬುದನ್ನು ಸಾಬೀತುಪಡಿಸಿತ್ತು. ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಜೆಡಿಯು-ಆರ್ ಜೆಡಿ ಮೈತ್ರಿಕೂಟಕ್ಕಿಂತ ಬಿಜೆಪಿ + ಮೇಲುಗೈ ಸಾಧಿಸಲಿದೆ ಎಂದು ಹೇಳಲಾಗಿತ್ತು. ಆದರೆ ಫಲಿತಾಂಶಗಳು ವ್ಯತಿರಿಕ್ತವಾಗಿದ್ದವು. ಬಿಜೆಪಿ + 58 ಸ್ಥಾನಗಳಿಗೆ ಕುಸಿದರೆ, ಜೆಡಿಯು-ಆರ್ ಜೆಡಿ ಮೈತ್ರಿಕೂಟ 178 ಸ್ಥಾನಗಳನ್ನು ಗೆದ್ದಿತ್ತು.

2004 ರ ಲೋಕಸಭಾ ಚುನಾವಣೆ: 2004 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರವು ತನ್ನ ಅವಧಿ ಮುಗಿಯುವ ಎಂಟು ತಿಂಗಳ ಮೊದಲು ಚುನಾವಣೆಗಳನ್ನು ಎದುರಿಸಲು ಲೋಕಸಭೆಯನ್ನು ವಿಸರ್ಜಿಸಿತ್ತು. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ವಿಧಾನಸಭಾ ಚುನಾವಣೆಗಳಲ್ಲಿನ ಯಶಸ್ಸಿನಿಂದಾಗಿ ಎನ್​ಡಿಎಯ ವಿಶ್ವಾಸ ಹೆಚ್ಚಾಗಿತ್ತು. ಆಗ ಲೋಕಸಭೆ ವಿಸರ್ಜನೆಯ ನಂತರ ಎನ್​ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು.

ಆಗ ಇಂಡಿಯಾ ಟುಡೇ ಎನ್​ಡಿಎ 330 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದರೆ, ಇತರ ಸಮೀಕ್ಷೆಗಳು ಎನ್​ಡಿಎ ಸುಮಾರು 270 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಫಲಿತಾಂಶ ಬಂದಾಗ ಈ ಎಲ್ಲ ಲೆಕ್ಕಾಚಾರಗಳು ಬುಡಮೇಲಾಗಿದ್ದವು. ಸ್ಥಾನಗಳ ಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲ, ವಾಸ್ತವವಾಗಿ, ಫಲಿತಾಂಶವೂ ಸಹ ಬೇರೆ ಆಗಿತ್ತು. ಆವಾಗ ಯುಪಿಎ ಅಧಿಕಾರಕ್ಕೆ ಬಂದಿತು. ಎನ್​ಡಿಎ ಬಹುಮತದ ಗಡಿ ದಾಟಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ ಎನ್​ಡಿಎ 181 ಸ್ಥಾನಗಳನ್ನು ಮಾತ್ರ ಗಳಿಸಿತ್ತು.

ಇದನ್ನೂ ಓದಿ: ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಮದ್ಯ ನಿಷೇಧ ರ್‍ಯಾಲಿ ನಡೆಸಲಿದೆ ದಲಿತ ಪರ ಪಕ್ಷ ವಿಸಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.