ತಮ್ಮ ಅಪ್ರತಿಮ ಪಾತ್ರಗಳು, ಅಮೋಘ ಅಭಿನಯ ಮತ್ತು ಹುಬ್ಬೇರಿಸುವ ನೃತ್ಯ ಪ್ರದರ್ಶನಗಳಿಗೆ ಹೆಸರುವಾಸಿಯಾಗಿರುವ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಗಮನಾರ್ಹ ಕೊಡುಗೆಯನ್ನು ಗುರುತಿಸಿ ಇಂದು ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನವದೆಹಲಿಯಲ್ಲಿ ನಡೆದ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು.
''ಮೊದಲ ರಾಷ್ಟ್ರಪ್ರಶಸ್ತಿ ಗೆದ್ದ ಮೇಲೆ ನಾನು 'Al Pachino' ಆಗಿಬಿಟ್ಟೆ ಎಂದು ಯೋಚಿಸತೊಡಗಿದೆ. ಹಾಗಾಗಿ, ಯಾವುದೇ ನಿರ್ಮಾಪಕರ ಕಚೇರಿಗೆ ಹೋದರೂ ಅವರಂತೆಯೇ ವರ್ತಿಸತೊಡಗಿದ್ದೆ. ಈ ಹಿನ್ನೆಲೆಯಲ್ಲಿ ಮೂರನೇ ನಿರ್ಮಾಪಕ ನನ್ನನ್ನು ಆಫೀಸಿನಿಂದ ಹೊರಹಾಕಿದರು. ನಾನು ತಪ್ಪು ಮಾಡಿದೆನೆಂಬುದು ನನಗೆ ಅರ್ಥವಾಯಿತು. ಯಾರೂ ನನ್ನೊಂದಿಗೆ ಕೆಲಸ ಮಾಡಲು ಬಯಸಲಿಲ್ಲ. ನನ್ನ ಮೈಬಣ್ಣದ ಬಗ್ಗೆ ಜನ ಗೇಲಿ ಮಾಡುತ್ತಿದ್ದರು. ಹಾಗಾಗಿ, ನನ್ನ ಮೈಬಣ್ಣವನ್ನು ಜನರು ಮರೆಯುವಂತೆ ಮಾಡಲು ನಾನೇನು ಮಾಡಬಹುದೆಂದು ಯೋಚಿಸಲು ಪ್ರಾರಂಭಿಸಿದೆ. ಜನರು ನನ್ನ ಕಾಲುಗಳತ್ತ ಮಾತ್ರ ನೋಡುವಂತೆ ಮಾಡಲು ಡ್ಯಾನ್ಸ್ ಮಾಡಬಹುದೆಂದು ಅರ್ಥ ಮಾಡಿಕೊಂಡೆ. ನಾನು ಅದನ್ನೇ ಮಾಡಿದೆ. ಆಗ ಜನರು ನನ್ನ ಮೈಬಣ್ಣವನ್ನು ಮರೆತರು. ಆನಂತರ ನಾನು ಸೆಕ್ಸಿ, ಡಸ್ಕಿ ಬೆಂಗಾಲಿ ಬಾಬು ಆದೆ" ಎಂದು ಪ್ರಶಸ್ತಿ ಸ್ವೀಕರಿಸಿದ ನಂತರ ಮಿಥುನ್ ಚಕ್ರವರ್ತಿ ಹೇಳಿದರು.
ಇದನ್ನೂ ಓದಿ: ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಪ್ರತಿಷ್ಠಿತ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರದಾನ