ನಾರಾಯಣಪುರ (ಛತ್ತೀಸ್‌ಗಢ): ಅಬುಜ್ಮದ್‌ನ ದಟ್ಟ ಅರಣ್ಯದಲ್ಲಿ ಮೂವರು ಮಹಿಳಾ ನಕ್ಸಲೀಯರನ್ನು ಭದ್ರತಾಪಡೆ ಗುರುವಾರ ಹೊಡೆದುರುಳಿಸಿದೆ. ಎನ್‌ಕೌಂಟರ್‌ನಲ್ಲಿ ಹತರಾಗಿರುವ ಮೂವರು ಮಹಿಳಾ ನಕ್ಸಲೀಯರು ಉತ್ತರ ಬಸ್ತಾರ್ ವಿಭಾಗ ಸಮಿತಿಯ ಸದಸ್ಯರು ಮತ್ತು ಪಿಎಲ್‌ಜಿಎ ಕಂಪನಿ ಸಂಖ್ಯೆ 5 ಎಂದು ಗುರುತಿಸಲಾಗಿದೆ.
ಡಿಆರ್‌ಜಿ, ಎಸ್‌ಟಿಎಫ್ ಮತ್ತು ಗಡಿ ಭದ್ರತಾ ಪಡೆಗಳ ಜಂಟಿ ತಂಡ ನಾರಾಯಣಪುರ ಅಬುಜ್ಮದ್‌ನ ದಟ್ಟ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿತ್ತು. ಬಳಿಕ ಅಧಿಕಾರಿಗಳಿಂದ ಬಂದ ಮಾಹಿತಿ ಪ್ರಕಾರ 303 ರೈಫಲ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ನಕ್ಸಲ್ ಸಾಮಗ್ರಿಗಳು ಹಾಗೂ 315 ಬೋರ್ ಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
"ನಕ್ಸಲೀಯರ ಚಲನವಲನದ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಮೊದಲಿಗೆ ನಕ್ಸಲೀಯರು ಪೊಲೀಸರ ಮೇಲೆ ಗುಂಡು ಹಾರಿಸಿದ್ದರು. ಭದ್ರತಾಪಡೆ ಶೋಧ ಕಾರ್ಯಾಚರಣೆ ವೇಳೆ ಮಹಿಳೆಯರ ಶವಗಳು ಪತ್ತೆಯಾಗಿದೆ. ಹಾಗೇ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ" ಎಂದು ನಾರಾಯಣಪುರ ಎಸ್ಪಿ ಪ್ರಭಾತ್ ಕುಮಾರ್ ತಿಳಿಸಿದ್ದಾರೆ.