ಹೈದರಾಬಾದ್: ಪ್ರತಿ ವರ್ಷ ಜನವರಿ 25 ಅನ್ನು ರಾಷ್ಟ್ರೀಯ ಮತದಾರರ ದಿನವಾಗಿ ಆಚರಿಸಲಾಗುತ್ತದೆ. ಈ ಮೂಲಕ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶದಲ್ಲಿ ಜನರಿಗೆ ಮತದಾನದ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಪ್ರತಿಯೊಬ್ಬ ಮತದಾರನ ಧ್ವನಿ ಮುಖ್ಯವಾಗುತ್ತದೆ. ಇದೇ ಕಾರಣದಿಂದ ದೇಶದಲ್ಲಿ ಚುನಾವಣಾ ಮತದಾನಕ್ಕೆ ವಿಶೇಷ ಸ್ಥಾನವಿದ್ದು, ಇದರ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗುತ್ತದೆ.
2024ರ ಮತದಾರರ ದಿನದ ಧ್ಯೇಯ: ಈ ವರ್ಷದ ಮತದಾನದ ದಿನದ ಧ್ಯೇಯವಾಕ್ಯ ಎಂದರೆ, 'ಮತದಾನದಷ್ಟು ಮಹತ್ವ ಮತ್ತೊಂದಿಲ್ಲ, ನಾನು ಖಂಡಿತ ಮತ ಚಲಾಯಿಸುತ್ತೇನೆ'. ಈ ಧ್ಯೇಯವಾಕ್ಯವೂ ಪ್ರತಿಯೊಬ್ಬರಿಗೆ ಮತ ಚಲಾಯಿಸುವಂತೆ ಪ್ರೇರೇಪಿಸುತ್ತದೆ.
ಇತಿಹಾಸ: 1950ರ ಜನವರಿ 25 ರಂದು ಭಾರತ ಚುನಾವಣಾ ಆಯೋಗ ಸ್ಥಾಪಿತವಾಯಿತು. 2011ರಲ್ಲಿ ಜನವರಿ 25ರಂದು ದೇಶದಲ್ಲಿ ಮತದಾನದ ದಿನವಾಗಿ ಆಚರಿಸಲಾಗುತ್ತಿದೆ. ಚುನಾವಣಾ ಆಯೋಗವು ಮತದಾನಕ್ಕೆ ಅರ್ಹ ಮತ್ತು 18 ವರ್ಷ ತುಂಬಲಿರುವ ನಾಗರಿಕರನ್ನು ಜನವರಿ 1ರಿಂದ ಗುರುತಿಸುವ ಕಾರ್ಯ ಆರಂಭಿಸಿ, ಅವರಿಗೆ ಈ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗುವಂತೆ ತಿಳಿಸುತ್ತದೆ.
ಉದ್ದೇಶ: ರಾಷ್ಟ್ರೀಯ ಮತದಾನ ದಿನದ ಪ್ರಾಥಮಿಕ ಉದ್ದೇಶ ಎಂದರೆ ಬಹುಮುಖಿಯಾಗಿದೆ. ಇದು ಮತದಾನ ಪ್ರಕ್ರಿಯೆ ಕುರಿತು, ಮತದಾರರ ನೋಂದಣಿ, ಮತ ಚಾಲಾವಣೆಯಿಂದ ಹೇಗೆ ದೇಶದ ಅಭಿವೃದ್ಧಿ ಎಂಬ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತದೆ. ಮತದಾನದ ಪ್ರಕ್ರಿಯೆಗಳಾದ ಮತ ಚಲಾವಣೆ, ಮತ ಲೆಕ್ಕ ಮತ್ತು ನೋಂದಣಿಗಳ ಕುರಿತು ಸಾರ್ವಜನಿಕರಿಗೆ ಜ್ಞಾನ ನೀಡಲಾಗುವುದು.
ಮಹತ್ವ: ಜಾತಿ, ಲಿಂಗ ಅಥವಾ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಹೊರತಾಗಿ ಎಲ್ಲಾ ಅರ್ಹ ಮತದಾರರಿಗೆ ಮತ ಚಲಾವಣೆಯಲ್ಲಿ ಭಾಗಿಯಾಗುವಂತೆ ಉತ್ತೇಜಿಸುವುದು. ಭಾರತದ ಪ್ರಜಾಸತಾತ್ಮಕ ಮೌಲ್ಯವನ್ನು ಎತ್ತಿಹಿಡಿಯುವುದಾಗಿದೆ.
ಯಾಕೆ ಮತದಾನ?: ಮತದಾರರ ದಿನದ ಹಿಂದಿನ ಉದ್ದೇಶ ಮತ ಚಲಾಯಿಸುವಂತೆ ಜಾಗೃತಿ ಮೂಡಿಸುವುದು. ಅದರಲ್ಲೂ ವಿಶೇಷವಾಗಿ ಹೊಸ ಮತದಾರರಿಗೆ ಈ ಕುರಿತು ತಿಳಿಸುವುದು. ಈ ಮೂಲಕ ಸರ್ಕಾರವನ್ನು ರೂಪಿಸುವ ಮೂಲಭೂತ ಪ್ರಕ್ರಿಯೆಯಲ್ಲಿ ಹೇಗೆ ಮತದಾನ ಪ್ರಮುಖವಾಗುತ್ತದೆ ಎಂದು ತಿಳಿಸುವುದು. ಅಲ್ಲದೇ, ದೇಶದ ಸರ್ಕಾರ ರಚಿಸುವಲ್ಲಿ ಮತದಾನವು ಮೂಲಭೂತ ಪ್ರಕ್ರಿಯೆಯಾಗಿದೆ ಎಂದು ಜಾಗೃತಿ ಮೂಡಿಸುವುದಾಗಿದೆ.
ಆಚರಣೆ: ಮತದಾನವನ್ನು ಮಾಡುವ ಮೂಲಕ ದೇಶದ ನಾಗರಿಕರು ಸರ್ಕಾರವನ್ನು ಪ್ರಶ್ನಿಸುವ ಹಕ್ಕನ್ನು ಪಡೆಯುತ್ತಾರೆ. ಇದು ಜನರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸೃಷ್ಟಿಸಲು ಅದರಲ್ಲೂ ದೇಶ ಕಟ್ಟುವ ನಿರ್ಧಾರದಲ್ಲಿ ಭಾಗಿಯಾಗುವಂತೆ ಮಾಡುತ್ತದೆ.