ಹೈದರಾಬಾದ್: ವಿವಿಧ ಸ್ವಾದಿಷ್ಠ ತಿನಿಸುಗಳ ಜನ್ಮ ಸ್ಥಳವಾಗಿರುವ ನಗರದಲ್ಲಿ ಮೊಹರಂ ಸಮಯದಲ್ಲಿ ಸಾಕಷ್ಟು ಬೇಡಿಕೆ ಇರುವ ತಿನಿಸು ಎಂದರೆ ಅದು ರೋಟ್. ಈ ರೋಟ್ (ಕುಕ್ಕಿ ಅಥವಾ ಬಿಸ್ಕೆಟ್ ರೀತಿಯ ಸಿಹಿ ತಿನಿಸು) ಇದೀಗ ಜನಪ್ರಿಯ ತಿನಿಸಾಗಿ ವಿಶೇಷ ಸ್ಥಾನ ಪಡೆಯುತ್ತಿದೆ. ಮೊಹರಂ ಸಮಯದಲ್ಲಿ ಲಭ್ಯವಾಗುವ ಈ ಸಿಹಿ ತಿನಿಸುವ ಇದೀಗ ಧಾರ್ಮಿಕತೆ ನಂಟಿನ ಹೊರಾತಾಗಿ ಇದೀಗ ಎಲ್ಲರ ಮನತಣಿಸುವ ರುಚಿಕರ ತಿನಿಸಾಗಿ ಪ್ರಸಿದ್ಧಿ ಪಡೆದುಕೊಂಡಿದೆ. ಇದರಿಂದ ಧಮ್ ಕೆ ರೋಟ್ ಸ್ವಾದ ಎಲ್ಲಡೆ ಜನಪ್ರಿಯತೆ ಪಡೆಯುತ್ತಿದೆ. ಬೇಕರಿಗಳಲ್ಲಿ ತಯಾರಿಸಲಾಗುವ ಈ ತಿನಿಸಿ ಮೊಹರಂ ಸಂದರ್ಭದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತದೆ. ತನ್ನದೇ ವಿಭಿನ್ನ ರುಚಿ, ಸ್ವಾದವನ್ನು ಇದು ಹೊಂದಿದ್ದು, ಅನೇಕರ ಮೆಚ್ಚಿನ ಸಿಹಿ ತಿನಿಸಾಗಿ ಪ್ರಖ್ಯಾತಿ ಪಡೆಯುತ್ತಿದೆ.
ಈ ವಿಶೇಷ ತಿನಿಸಿಗೆ ಇದೆ ದೊಡ್ಡದೊಂದು ಇತಿಹಾಸ:ಆರೋಗ್ಯಯುತ ಗುಣಗಳನ್ನು ಹೊಂದಿರುವ ಧಮ್ ಕೆ ರೋಟ್ ಸ್ವಾದಿಷ್ಟ ತಿನಿಸಿನ ಪಟ್ಟಯಲ್ಲಿ ಸ್ಥಾನ ಪಡೆದಿದ್ದು, ಇದಕ್ಕೊಂದು ವಿಶೇಷ ಇತಿಹಾಸವೂ ಇದೆ. ಮೊಹರಂ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ತಯಾರಿಸಲಾಗುತ್ತದೆ. 7ನೇ ನಿಜಾಮ್ ಮಿರ್ ಉಸ್ಮಾನ್ ಆಲಿ ಖಾನ್ ಮೊದಲ ಬಾರಿಗೆ ಮೊಹರಂನ 10ನೇ ದಿನದಂದು ಧಮ್ ಕೆ ರೋಟ್ ಅನ್ನು ತನ್ನ ಮೊಮ್ಮಗ ಮುಕರಮ್ ಜಾಹ್ ಬಹದ್ದೂರ್ನ ಪ್ರಗತಿ ಏಳಿಗಾಗಾಗಿ ಮದೀನಾದ ಹಳೆಯ ನಗರದ ಬಳಿಯ ಪಟ್ಟರಘಟ್ಟಿಯಲ್ಲಿರುವ ನಾಲ್ ಎ ಮುಬಾರಕ್' ಆಲಂಗೆ ಅರ್ಪಿಸಿದ. ಬಳಿಕ ಅದನ್ನು ಸಾರ್ವಜನಿಕರಿಗೆ ಹಂಚಲಾಯಿತು. ಅಂದಿನಿಂದ ಎಲ್ಲಾ ಮುಸ್ಲಿಂ ರಾಜರುಗಳು ಮೊಹರಂ ಸಮಯದಲ್ಲಿ ಇದನ್ನು ಹಂಚುವ ಪದ್ಧತಿ ಮುಂದುವರೆಸಿದರು. ದಖ್ಖನಿ ಸಂಪ್ರದಾಯದಲ್ಲಿ ಇದು ದೇಶದ ಎಲ್ಲಾ ರಾಜ್ಯದಲ್ಲಿ ಮುಂದುವರೆಯಿತು. ಅವರು ತಮ್ಮ ಕುಟುಂಬ ಸದಸ್ಯರ, ಸಂಬಂಧಿಕರ, ಸ್ನೇಹಿತರ, ನೆರೆ ಹೊರೆ ಮತ್ತು ಬಡವರಿಗೆ ಉತ್ತಮ ಆರೋಗ್ಯ ಮತ್ತು ಸಂಪತ್ತಿಗಾಗಿ ಹಾರೈಸಿ ಈ ತಿಸಿಸನ್ನು ವಿತರಿಸುತ್ತಾರೆ.