ಕರ್ನಾಟಕ

karnataka

ETV Bharat / bharat

ಮೋದಿ ಸರ್ಕಾರ 3.0 ಅಸ್ತಿತ್ವಕ್ಕೆ: 30 ಸಂಪುಟ ಸಚಿವರು, 5 ಸ್ವತಂತ್ರ ನಿರ್ವಹಣೆ, 36 ರಾಜ್ಯಖಾತೆ ಸಚಿವರಿಂದ ಪ್ರಮಾಣ ಸ್ವೀಕಾರ - Modi Government

ಜವಾಹರಲಾಲ್​ ನೆಹರು ಬಳಿಕ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಭಾನುವಾರ ಪ್ರಮಾಣ ವಚನ ಸ್ವೀಕಾರ ಮಾಡಿದರು.

Modi Oath Taking ceremony
ಮೋದಿ ಪ್ರಮಾಣ ವಚನ ಸ್ವೀಕಾರ (ANI)

By ETV Bharat Karnataka Team

Published : Jun 10, 2024, 7:30 AM IST

ನವದೆಹಲಿ: ಭಾನುವಾರ ರಾಷ್ಟ್ರಪತಿ ಭಚನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜವಾಹರಲಾಲ್​ ನೆಹರು ಅವರ ಬಳಿಕ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ಎರಡನೇ ವ್ಯಕ್ತಿ ಎನ್ನುವ ದಾಖಲೆಯನ್ನು ಪ್ರಧಾನಿ ಮೋದಿ ನಿರ್ಮಿಸಿದ್ದಾರೆ. ಪ್ರಧಾನಿ ಮೋದಿ ಅವರ ಜೊತೆಗೆ 30 ಸಂಪುಟ​ ಸಚಿವರು, ಐವರು ರಾಜ್ಯ ಖಾತೆ (ಸ್ವತಂತ್ರ ನಿರ್ವಹಣೆ) ಮತ್ತು 36 ರಾಜ್ಯ ಖಾತೆ ಸಚಿವರು ಸೇರಿ ಒಟ್ಟು 24 ರಾಜ್ಯಗಳ 71 ಸಂಸದರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವಿಕರಿಸಿದವರು:

  • ರಾಜನಾಥ್ ಸಿಂಗ್
  • ಅಮಿತ್ ಶಾ
  • ನಿತಿನ್ ಜೈರಾಮ್ ಗಡ್ಕರಿ
  • ಜಗತ್ ಪ್ರಕಾಶ್ ನಡ್ಡಾ
  • ಶಿವರಾಜ್ ಸಿಂಗ್ ಚೌಹಾಣ್
  • ನಿರ್ಮಲಾ ಸೀತಾರಾಮನ್
  • ಸುಬ್ರಹ್ಮಣ್ಯಂ ಜೈಶಂಕರ್
  • ಮನೋಹರ್ ಲಾಲ್ ಖಟ್ಟರ್​
  • ಎಚ್ ಡಿ ಕುಮಾರಸ್ವಾಮಿ
  • ಪಿಯೂಷ್ ಗೋಯಲ್​
  • ಧರ್ಮೇಂದ್ರ ಪ್ರಧಾನ್
  • ಜಿತನ್ ರಾಮ್ ಮಾಂಝಿ
  • ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್
  • ಸರ್ಬಾನಂದ ಸೋನೋವಾಲ್
  • ವೀರೇಂದ್ರ ಕುಮಾರ್
  • ಕಿಂಜರಾಪುರ ರಾಮಮೋಹನ ನಾಯ್ಡು
  • ಪ್ರಲ್ಹಾದ್ ಜೋಶಿ
  • ಜುಯಲ್ ಓರಂ
  • ಗಿರಿರಾಜ್ ಸಿಂಗ್
  • ಅಶ್ವಿನಿ ವೈಷ್ಣವ್
  • ಜ್ಯೋತಿರಾದಿತ್ಯ ಎಂ. ಸಿಂಧಿಯಾ
  • ಭೂಪೇಂದರ್ ಯಾದವ್
  • ಗಜೇಂದ್ರ ಸಿಂಗ್ ಶೇಖಾವತ್
  • ಕಿರೆನ್ ರಿಜಿಜು
  • ಹರ್ದೀಪ್ ಸಿಂಗ್ ಪುರಿ
  • ಮನ್ಸುಖ್ ಮಾಂಡವಿಯಾ
  • ಜಿ ಕಿಶನ್ ರೆಡ್ಡಿ
  • ಚಿರಾಗ್ ಪಾಸ್ವಾನ್
  • ಸಿ ಆರ್ ಪಾಟೀಲ್ ಅವರು ಭಾನುವಾರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯ ಸಚಿವರು( ಸ್ವತಂತ್ರ ನಿರ್ವಹಣೆ):

  1. ರಾವ್ ಇಂದರ್‌ಜಿತ್ ಸಿಂಗ್
  2. ಜಿತೇಂದ್ರ ಸಿಂಗ್
  3. ಅರ್ಜುನ್ ರಾಮ್ ಮೇಘವಾಲ್
  4. ಜಾಧವ್ ಪ್ರತಾಪ್ರಾವ್ ಗಣಪತ್ರಾವ್
  5. ಜಯಂತ್ ಚೌಧರಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯ ಖಾತೆ ಸಚಿವರು: ರಾಜ್ಯ ಖಾತೆಯ ಸಚಿವರಾಗಿ ಜಿತಿನ್ ಪ್ರಸಾದ, ಶ್ರೀಪಾದ್ ಯೆಸ್ಸೋ ನಾಯಕ್, ಪಂಕಜ್ ಚೌಧರಿ, ಕ್ರಿಶನ್ ಪಾಲ್, ರಾಮದಾಸ್ ಅಠವಳೆ, ರಾಮ್ ನಾಥ್ ಠಾಕೂರ್, ನಿತ್ಯಾನಂದ ರೈ, ಅನುಪ್ರಿಯಾ ಪಟೇಲ್, ವಿ. ಸೋಮಣ್ಣ, ಚಂದ್ರಶೇಖರ್ ಪೆಮ್ಮಸಾನಿ, ಎಸ್‌.ಪಿ. ಸಿಂಗ್ ಬಘೇಲ್, ಶೋಭಾ ಕರಂದ್ಲಾಜೆ, ಕೀರ್ತಿವರ್ಧನ್ ಸಿಂಗ್, ಬಿ.ಎಲ್. ವರ್ಮಾ, ಶಂತನು ಠಾಕೂರ್​, ಸುರೇಶ್ ಗೋಪಿ, ಡಾ. ಎಲ್. ಮುರುಗನ್, ಅಜಯ್ ತಮ್ತಾ, ಬಂಡಿ ಸಂಜಯ್ ಕುಮಾರ್, ಕಮಲೇಶ್ ಪಾಸ್ವಾನ್, ಭಗೀರಥ್ ಚೌಧರಿ, ಸತೀಶ್ ಚಂದ್ರ ದುಬೆ, ಸಂಜಯ್ ಸೇಠ್, ರವನೀತ್ ಸಿಂಗ್, ದುರ್ಗಾದಾಸ್ ಯುಕೆಯ್​, ರಕ್ಷಾ ನಿಖಿಲ್ ಖಡ್ಸೆ, ಸುಕಾಂತ ಮಜುಂದಾರ್, ಸಾವಿತ್ರಿ ಠಾಕೂರ್, ತೋಖಾನ್ ಸಾಹು, ರಾಜ್​ ಭೂಷಣ್ ಚೌಧರಿ, ಭೂಪತಿ ರಾಜು ಶ್ರೀನಿವಾಸ ವರ್ಮಾ, ಹರ್ಷ್ ಮಲ್ಹೋತ್ರಾ, ನಿಮುಬೆನ್ ಜಯಂತಿಭಾಯ್ ಬಂಭಾನಿಯಾ, ಮುರಳೀಧರ್ ಮೊಹೋಲ್, ಜಾರ್ಜ್ ಕುರಿಯನ್ ಮತ್ತು ಪಬಿತ್ರಾ ಮಾರ್ಗರಿಟಾ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸಮಾರಂಭಕ್ಕೆ ಸಾಕ್ಷಿಯಾದ ಅತಿರಥ ಮಹಾರಥರು:ಅದ್ಧೂರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಿರಿಯ ರಾಜಕೀಯ ನಾಯಕರು, ರಾಜತಾಂತ್ರಿಕರು, ಪ್ರಮುಖ ಕೈಗಾರಿಕೋದ್ಯಮಿಗಳು, ಬಾಲಿವುಡ್​ ನಟರು ಹಾಗೂ ಹಲವಾರು ಪ್ರಮುಖವ್ಯಕ್ತಿಗಳು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ 'ಪ್ರಚಂಡ', ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಭೂತಾನ್ ಪ್ರಧಾನಿ ತ್ಶೆರಿಂಗ್ ತೊಬ್ಗೇ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್, ಸೆಶೆಲ್ಸ್ ಉಪಾಧ್ಯಕ್ಷ ಅಹ್ಮದ್ ಅಫೀಫ್ ಮತ್ತು ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಭಾಗವಹಿಸಿದ್ದರು.

ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ವಿಶೇಷ ವಿದೇಶಾಂಗ ನೀತಿಯ ಪ್ರಭಾವವಕ್ಕೆ ಸಾಕ್ಷಿಯಾಗಿದೆ. 2014ರಲ್ಲಿ ಪ್ರಧಾನಿಯಾಗಿ ತಮ್ಮ ಮೊದಲ ಅಧಿಕಾರಾವಧಿಯನ್ನು ಪ್ರಾರಂಭಿಸಿದಾಗ ಸಾರ್ಕ್​ ರಾಷ್ಟ್ರಗಳ ಎಲ್ಲಾ ರಾಷ್ಟ್ರಗಳ ಮುಖ್ಯಸ್ಥರ ಸಮ್ಮುಖದಲ್ಲಿ ಮೋದಿ ಪ್ರಮಾಣ ವಚನ ಸ್ವೀಕರಿಸಿದ್ದರು. 2019ರಲ್ಲಿ ಎರಡನೇ ಅವಧಿಯಲ್ಲಿ, BIMSTEC ನಾಯಕರನ್ನು ಆಹ್ವಾನಿಸಲಾಗಿತ್ತು.

ಯುವ ನಾಯಕರಿಗೂ ಮೋದಿ ಸಂಪುಟದಲ್ಲಿ ಅವಕಾಶ:ಮೊದಲ ಬಾರಿಗೆ ಸಂಸದರಾದವರು ಸೇರಿದಂತೆ ಬಿಜೆಪಿ ಮತ್ತು ಮಿತ್ರಪಕ್ಷಗಳ ಹಲವಾರು ಯುವ ನಾಯಕರು ಸಂಪುಟಕ್ಕೆ ಸೇರ್ಪಡೆಯಾದರು. ಕೇರಳದ ಮೊದಲ ಬಿಜೆಪಿ ಸಂಸದರಾಗಿರುವ ನಟ- ರಾಜಕಾರಣಿ ಸುರೇಶ್​ ಗೋಪಿ ಮತ್ತು ಪೂರ್ವ ದೆಹಲಿಯಿಂದ ಗೆದ್ದ ಹರ್ಷ್​ ಮಲ್ಹೋತ್ರಾ ಕೇಂದ್ರ ಸಂಪುಟದಲ್ಲಿಮೊದಲ ಬಾರಿಗೆ ಸಂಸದರಾಗಿದ್ದಾರೆ. ಬಹುತೇಕ ಸಂಸದರು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಕೆಲವರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಜೂನ್​ 4 ರಂದು ಪ್ರಕಟವಾದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸತತ ಮೂರನೇ ಬಾರಿಗೆ ಅಧಿಕಾರಾವಧಿಯನ್ನು ತನ್ನದಾಗಿಸಿಕೊಂಡಿತು. ಬಿಜೆಪಿ ಸ್ವತಂತ್ರವಾಗಿ 240 ಸ್ಥಾನಗಳನ್ನು ಗೆದ್ದರೆ, ಎನ್​ಡಿಎ 293 ಸ್ಥಾನಗಳನ್ನು ಪಡೆದುಕೊಂಡಿದೆ. ಇಂದು ಸಂಜೆ ಕೇಂದ್ರ ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ:ಈಶ್ವರನ ಹೆಸರಿನಲ್ಲಿ ಮೋದಿ ಪ್ರಧಾನಿಯಾಗಿ ಪ್ರತಿಜ್ಞೆ ಸ್ವೀಕಾರ; ಹೆಚ್​ಡಿಕೆ ಸೇರಿ 5 ಮಿತ್ರಪಕ್ಷಗಳ ನಾಯಕರಿಗೆ ಕ್ಯಾಬಿನೆಟ್‌ ಸ್ಥಾನ - Prime Minister Modi

ABOUT THE AUTHOR

...view details