ಕರ್ನಾಟಕ

karnataka

ETV Bharat / bharat

ಪಂಕಜಾ ಮುಂಡೆ ಸೋತರೆ 'ನಾನು ಸಾಯ್ತೀನಿ' ಅಂದಿದ್ದ ವ್ಯಕ್ತಿ ಬಸ್​ನಡಿ ಬಿದ್ದು ಸಾವು; ಆತ್ಮಹತ್ಯೆ ಶಂಕೆ - PANKAJA MUNDE FOLLOWER DIED - PANKAJA MUNDE FOLLOWER DIED

ಮಹಾರಾಷ್ಟ್ರದಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ ಪಂಕಜಾ ಮುಂಡೆ ಅವರ ಬೆಂಬಲಿಗನೊಬ್ಬ ಸಾವನ್ನಪ್ಪಿದ್ದಾನೆ. ಇದು ಆತ್ಮಹತ್ಯೆಯೋ ಅಥವಾ ಅಪಘಾತವೋ ಎಂಬ ಬಗ್ಗೆ ತನಿಖೆ ಪೊಲೀಸ್​ ನಡೆಯುತ್ತಿದೆ.

ಪಂಕಜಾ ಮುಂಡೆ
ಪಂಕಜಾ ಮುಂಡೆ (ETV Bharat)

By PTI

Published : Jun 9, 2024, 5:41 PM IST

ಲಾತೂರ್(ಮಹಾರಾಷ್ಟ್ರ):ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕಿ ಪಂಕಜಾ ಮುಂಡೆ ಅವರು ಸೋತರೆ 'ನಾನು ಸಾಯ್ತೀನಿ' ಎಂದು ವಿಡಿಯೋ ಹರಿಬಿಟ್ಟಿದ್ದ ವ್ಯಕ್ತಿ ಬಸ್​ ಅಪಘಾತದಲ್ಲಿ ಶುಕ್ರವಾರ ಸಾವನ್ನಪ್ಪಿದ್ದಾರೆ. ಇದು ಅಪಘಾತವೋ ಅಥವಾ ಆತ್ಮಹತ್ಯೆಯೋ ಎಂಬುದು ತಿಳಿದುಬಂದಿಲ್ಲ.

ಮೃತರನ್ನು ಲಾತೂರ್‌ನ ಅಹ್ಮದ್‌ಪುರದ ಯೆಸ್ಟರ್‌ನ ನಿವಾಸಿ ಸಚಿನ್ ಕೊಂಡಿಬಾ ಮುಂಡೆ (38) ಎಂದು ಗುರುತಿಸಲಾಗಿದೆ. ಬೋರ್ಗಾಂವ್ ಪಾಟಿ ಬಸ್​​ ನಿಲ್ದಾಣದಲ್ಲಿ ರಾತ್ರಿ ವೇಳೆ ಆತನ ಶವ ಬಸ್​​ನಡಿ ಸಿಲುಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕನ ಬಂಧನ, ಬಸ್​ ವಶ:ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನನ್ನು ಬಂಧಿಸಲಾಗಿದೆ. ಇದು ಅಪಘಾತವೇ ಅಥವಾ ಆತ್ಮಹತ್ಯೆಯೇ ಎಂದು ತನಿಖೆ ನಡೆಯುತ್ತಿದ್ದು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅನ್ನು ಜಪ್ತಿ ಮಾಡಲಾಗಿದೆ. ಯಲ್ದರವಾಡಿ ಮಾರ್ಗದ ಬಸ್ ಬೋರಗಾಂವ್ ಪಟಿ ಬಸ್​ ನಿಲ್ದಾಣದಲ್ಲಿ ನಿಂತಾಗ ಈ ದುರ್ಘಟನೆ ಸಂಭವಿಸಿದೆ. ಸಚಿನ್ ಮುಂಡೆ ಬಸ್ ಹಿಂದೆ ನಿಂತಿದ್ದಾಗ, ಚಕ್ರದಡಿ ಸಿಲುಕಿ ನಜ್ಜುಗುಜ್ಜಾಗಿದ್ದಾನೆ.

ಮೃತ ವ್ಯಕ್ತಿ ಅವಿವಾಹಿತರಾಗಿದ್ದು, ತಂದೆ-ತಾಯಿ ಮತ್ತು ಸಹೋದರನೊಂದಿಗೆ ವಾಸವಾಗಿದ್ದರು. ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕಿಂಗಾವ್ ಪೊಲೀಸ್ ಠಾಣೆಯ ಸಹಾಯಕ ಇನ್ಸ್‌ಪೆಕ್ಟರ್ ಬಹುಸಾಹೇಬ್ ಖಂಡಾರೆ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬೀಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಂಕಜಾ ಮುಂಡೆ ಅವರು ಕಾಂಗ್ರೆಸ್​ ಅಭ್ಯರ್ಥಿ ಬಜರಂಗ್ ಸೋನಾವಾನೆ ಅವರ ವಿರುದ್ಧ 6,553 ಮತಗಳಿಂದ ಸೋಲು ಕಂಡಿದ್ದಾರೆ. ಚುನಾವಣಾ ಆಯೋಗವು ಜೂನ್ 5 ರ ಮುಂಜಾನೆ ನಿಖರ ಫಲಿತಾಂಶ ಘೋಷಿಸಿತ್ತು. ಫಲಿತಾಂಶದ ಬಳಿಕ ಸಚಿನ್​ ಖಿನ್ನತೆಗೆ ಒಳಗಾಗಿದ್ದ. ಮೌನವಾಗಿರುತ್ತಿದ್ದ ಎಂದು ಮೃತನ ಸಂಬಂಧಿಕರು ಹೇಳಿದ್ದಾರೆ. ಶನಿವಾರ ಬೆಳಗ್ಗೆ ಗ್ರಾಮದಲ್ಲಿ ಅಂತಿಮ ಸಂಸ್ಕಾರ ಮಾಡಲಾಗಿದೆ.

ಇದನ್ನೂ ಓದಿ:ಮೋದಿ 3.0 ಸರ್ಕಾರದಲ್ಲಿ ರಾಜ್ಯದ ಐವರಿಗೆ ಅವಕಾಶ: ಯಾರಿಗೆ ಸಂಪುಟ ದರ್ಜೆ ಸ್ಥಾನ? - MODI CABINET

ABOUT THE AUTHOR

...view details