ಕರ್ನಾಟಕ

karnataka

ETV Bharat / bharat

ಮದುವೆಯಾಗಲು ನಿರಾಕರಿಸಿದ ಪುತ್ರಿಯನ್ನು ಕೊಂದ ತಂದೆ - refusing to get married

ಮದುವೆಯಾಗಲು ನಿರಾಕರಿಸಿದ ಮಗಳನ್ನು ಆಕೆಯ ತಂದೆಯೇ ಕೊಲೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

man-kills-his-daughter-for-refusing-to-get-married
ಮದುವೆಯಾಗಲು ನಿರಾಕರಿಸಿದ ಪುತ್ರಿಯನ್ನು ಕೊಂದ ತಂದೆ

By PTI

Published : Mar 3, 2024, 6:09 PM IST

ಜೈಪುರ(ರಾಜಸ್ಥಾನ): ಮದುವೆಯಾಗಲು ನಿರಾಕರಿಸಿದ 31 ವರ್ಷದ ಮಗಳನ್ನು ಆಕೆಯ ತಂದೆಯೇ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಕೃಷ್ಣ ಕೊಲೆಯಾದ ಪುತ್ರಿ. ಗೋವಿಂದ್ ಸಿಂಗ್ ಕೊಲೆ ಮಾಡಿದ ತಂದೆ.

"ಆರೋಪಿ ಗೋವಿಂದ್ ಸಿಂಗ್(55) ನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಗೋವಿಂದ್ ಸಿಂಗ್ ತನ್ನ ಮಗಳು ಕೃಷ್ಣಗೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದನು. ಆದರೆ ಕೃಷ್ಣ ಇದನ್ನು ನಿರಾಕರಿಸುತ್ತಲೇ ಇದ್ದಳು. ಶನಿವಾರ, ಕೃಷ್ಣ ನಿದ್ರೆಯಲ್ಲಿದ್ದಾಗ ಸಿಂಗ್ ಆಕೆಯ ಕೋಣೆಗೆ ಹೋಗಿ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಯುವತಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ಗೋಗಮೇಡಿ ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್ಎಚ್ಒ) ಅಜಯ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ:ಧಾರವಾಡ: ತಾಯಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಗ

ABOUT THE AUTHOR

...view details