ನವದೆಹಲಿ:ದಕ್ಷಿಣ ದೆಹಲಿಯ ಟಿಗ್ರಿ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಗೂಳಿಯೊಂದು ದಾಳಿ ನಡೆಸಿದ್ದು, 42 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಖಾನ್‌ಪುರದ ನಿವಾಸಿ ಸುಭಾಷ್ ಕುಮಾರ್ ಝಾ ಎಂದು ಗುರುತಿಸಲಾಗಿದೆ.
ಪೊಲೀಸರ ಹೇಳಿಕೆ ಪ್ರಕಾರ:ದೇವ್ಲಿ ಮೋರ್‌ನ ಜಸ್ಪಾಲ್ ಮಾರ್ಟ್ ಬಳಿ ಬೆಳಗ್ಗೆ 11.45 ರ ಸುಮಾರಿಗೆ ಸುಭಾಷ್ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬಿಡಾಡಿ ಗೂಳಿಯೊಂದು ಸುಭಾಷ್ ಮೇಲೆ ದಾಳಿ ನಡೆಸಿದೆ. ದಾಳಿ ಹೊಡೆತಕ್ಕೆ ಅವರು ಕೆಳಗೆ ಬಿದ್ದಿದ್ದರು. ಆದ್ರೂ ಸಹ ಗೂಳಿ ತನ್ನ ದಾಳಿಯನ್ನು ಮುಂದುವರಿಸುತ್ತಲೇ ಇತ್ತು. ಇನ್ನು ಇದನ್ನು ನೋಡಿದ ಸ್ಥಳೀಯರು ಕೋಲುಗಳಿಂದ ಗೂಳಿಯನ್ನು ಓಡಿಸಲು ಮತ್ತು ಸುಭಾಷ್ ಅನ್ನು ರಕ್ಷಿಸಲು ಮುಂದಾದರು. ಆದ್ರೂ ಸಹಿತ ಗೂಳಿ ಸುಭಾಷ್ ಮೇಲೆ ದಾಳಿ ಮಾಡುತ್ತಲೇ ಇತ್ತು. ಸ್ವಲ್ಪ ಸಮಯದ ಬಳಿಕ ಸ್ಥಳೀಯರು ಗೂಳಿಯನ್ನು ಓಡಿಸಲು ಯಶಸ್ವಿಯಾದರು.