ದರ್ರಾಂಗ್ (ಅಸ್ಸೋಂ) :ಯುವಕನೊಬ್ಬ ಪ್ರಧಾನಿ ಮೋದಿ ಫೋಟೋ ನೋಡಿ ಕೋಪಗೊಂಡು ನಾಲ್ವರನ್ನು ಕಚ್ಚಿ ದುಷ್ಕೃತ್ಯ ಎಸಗಿರುವ ಘಟನೆ ದರ್ರಾಂಗ್ ಜಿಲ್ಲೆಯ ಸಿಪಾಜರ್ನಲ್ಲಿ ನಡೆದಿದೆ. ದಾಳಿಯು ಎಷ್ಟು ತೀವ್ರವಾಗಿತ್ತು ಎಂದರೆ, ಯುವಕ ಅವರನ್ನು ಕಚ್ಚಿ ದೇಹದಿಂದ ಮಾಂಸವನ್ನು ಹೊರಗೆಳೆದಿದ್ದಾನೆ. ಆ ಯುವಕ ಮೋದಿ ಫೋಟೋ ನೋಡಿ ತನ್ನ ಮಾನಸಿಕ ಸ್ಥಿಮಿತತೆಯನ್ನೇ ಕಳೆದುಕೊಂಡಿದ್ದಾನೆ. ಇದು ರಾಜ್ಯದಲ್ಲಿ ಆತಂಕ ಮೂಡಿಸಿದೆ.
ಏನಿದು ಘಟನೆ? : ಮೇ 29 ರಂದು ಮಧ್ಯಾಹ್ನ ಜಿಂಟು ಬನಿಯಾ ಎಂಬ ಯುವಕ ಸಿಪಾಜರ್ನ ಸಿಪಾಜರ್ ಅಕಾಡೆಮಿ ಫೀಲ್ಡ್ ಕಾಂಪ್ಲೆಕ್ಸ್ನಲ್ಲಿರುವ ಆಧಾರ್ ದಾಖಲಾತಿ ಕೇಂದ್ರಕ್ಕೆ ಇದ್ದಕ್ಕಿದ್ದಂತೆ ಪ್ರವೇಶಿಸಿದ್ದ. ಅಲ್ಲಿ ಆಧಾರ್ ಕಾರ್ಡ್ ಬಗ್ಗೆ ವಿಚಾರಿಸಿದ ನಂತರ, ಯುವಕ ಮೊದಲು ಅಲ್ಲಿ ಪ್ರದರ್ಶಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋದ ಬಗ್ಗೆ ಚರ್ಚಿಸಲು ಪ್ರಾರಂಭಿಸಿದ್ದ.
ಕ್ರಮೇಣ ಆತನ ವರ್ತನೆ ಅಪಾಯಕಾರಿ ತಿರುವು ಪಡೆದಿದೆ. ನಂತರ ಯುವಕ ತನ್ನ ಕೋಪವನ್ನು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆ ಕೇಂದ್ರದಲ್ಲಿದ್ದವರು ಯುವಕರನ್ನು ಸಮಾಧಾನಪಡಿಸಲು ಯತ್ನಿಸಿದರೂ ವಿಫಲರಾಗಿದ್ದಾರೆ. ಇದ್ದಕ್ಕಿದ್ದಂತೆ ಯುವಕ ಆಧಾರ್ ಕೇಂದ್ರದ ಉದ್ಯೋಗಿಯ ಎದೆಗೆ ಕಚ್ಚಿದ್ದಾನೆ.