ಕೇರಳ:ಕಾಡಾನೆ ದಾಳಿಗೊಳಗಾಗಿ ಮಲಯಾಳಂ ಖಾಸಗಿ ಸುದ್ದಿವಾಹಿನಿ ಮಾತೃಭೂಮಿ ಸಂಸ್ಥೆಯ ವಿಡಿಯೋ ಪತ್ರಕರ್ತರೊಬ್ಬರು ಸಾವನ್ನಪ್ಪಿದ್ದಾರೆ. ಕಸಬಾ ಪೊಲೀಸ್ ಠಾಣಾ ವ್ಯಾಪ್ತಿಯ ಕಂಜಿಕೋಡು ಸಮೀಪದ ಪಣಮರಕ್ಕಾಡ್ ಎಂಬಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ಸಂಭವಿಸಿತು. ಪಾಲಕ್ಕಾಡ್ ಮೂಲದ ಎವಿ ಮುಖೇಶ್ ಮೃತಪಟ್ಟವರು ಎಂದು ತಿಳಿದುಬಂದಿದೆ.
ಕಾಡು ಆನೆಗಳ ಹಿಂಡು ನದಿ ದಾಟುತ್ತಿರುವುದನ್ನು ಚಿತ್ರೀಕರಿಸುತ್ತಿದ್ದಾಗ ಘಟನೆ ನಡೆದಿದೆ. ತಕ್ಷಣ ಅವರನ್ನು ಪಾಲಕ್ಕಾಡ್ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕುಳಿಯಲಿಲ್ಲ. ಮುಖೇಶ್ ಮೃತದೇಹವನ್ನು ಪಾಲಕ್ಕಾಡ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.